ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ‌ಕೂಡಲೇ ರಾಜೀನಾಮೆ ‌ನೀಡಬೇಕು, ಬಿಜೆಪಿಗರ ವಿರುದ್ಧವೂ ಕ್ರಮ ಕೈಗೊಳ್ಳಿ: ಕೇಂದ್ರ ಸಚಿವ ಜೋಶಿ - Muda Scam

ಕಾಂಗ್ರೆಸ್ ಸರ್ಕಾರ ಕಡುಭ್ರಷ್ಟ ಸರ್ಕಾರ. ಸಿಎಂ ಸಿದ್ದರಾಮಯ್ಯ ‌ಕೂಡಲೇ ರಾಜೀನಾಮೆ ‌ನೀಡಬೇಕು ಎಂದು ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.

CENTRAL MINISTER PRALHAD JOSHI  CM SIDDARAMAIA RESIGN DEMAND  BJP PROTEST OVER MUDA SCAM  DHARWAD
ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ (ETV Bharat)

By ETV Bharat Karnataka Team

Published : Jul 13, 2024, 4:04 PM IST

ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಹೇಳಿಕೆ (ETV Bharat)

ಹುಬ್ಬಳ್ಳಿ:ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು.‌ ಈ‌ ಪ್ರಕರಣದಲ್ಲಿ ಬಿಜೆಪಿಯವರಿದ್ದರೆ ಅವರ ಮೇಲೂ ಕ್ರಮವಾಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ‌ಜೋಶಿ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಮುಡಾ ಹಗರಣದಲ್ಲಿ ನೇರವಾಗಿ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯನವರು ನನ್ನ ಪ್ರಶ್ನೆಗೆ ಉತ್ತರ ಕೊಡಬೇಕು. ವಿಜಯನಗರದಲ್ಲಿ ನಿಮಗೆ ಸೈಟ್ ಯಾಕೆ ಕೊಟ್ರು..?. 2013 ರ ಚುನಾವಣೆ ಅಫಿಡವಿಟ್​ನಲ್ಲಿ ಸಿದ್ದರಾಮಯ್ಯ ಮಾಹಿತಿ ಕೊಟ್ಟಿಲ್ಲ. ಮುಡಾ ಹಗರಣದಲ್ಲಿ ಇದು 200 ಪರ್ಸೆಂಟ್ ಭ್ರಷ್ಟ ಸರ್ಕಾರ. ತಮ್ಮ ಪ್ರಭಾವ ಬಳಸಿ 14 ಸೈಟ್ ಹೊಡೆದಿದ್ದಾರೆ. ಬಿಜೆಪಿಯವರು ಕೊಟ್ರು ಅಂತೀರಿ. ನೀವು ಬೇಡಾ ಅನಬೇಕಿತ್ತು. ಅಕಸ್ಮಾತ್ ಬಿಜೆಪಿಯವರು ಕೊಟ್ಟಿದ್ರೆ ಅವರ ಮೇಲೆ ಕ್ರಮ ಕೈಗೊಳ್ಳಿ. ಇದರಲ್ಲಿ ವ್ಯವಸ್ಥಿತವಾಗಿ ಸೈಟ್ ಹೊಡೆದಿದ್ದಾರೆ. ನೀವು ಏನೂ ಮಾಡಿಲ್ಲ ಅಂದ್ರೆ ಸಿಬಿಐ ತನಿಖೆಗೆ ಕೊಡಿ. ಪ್ರತಿಭಟನೆ ಮಾಡೋಕೆ ಹೋದ್ರೆ ಅರೆಸ್ಟ್ ಮಾಡ್ತಾರೆ. ಸಂವಿಧಾನ ಹತ್ಯೆ ಮಾಡೋ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಹೇಳಿಕೆ (ETV Bharat)

ಯಾವುದೇ ಹಣಕಾಸಿನ ಪ್ಲ್ಯಾನ್ ಇಲ್ಲದೇ ಯೋಜನೆ ರೂಪಿಸಿದ್ದಾರೆ. ರಸ್ತೆ ಸೇರಿ ಅಭಿವೃದ್ಧಿಗೆ ಹಣ ಇಲ್ಲ ಅಂತ ರಾಯರೆಡ್ಡಿ ಅವರೇ ಹೇಳಿದ್ದಾರೆ. ಅಹಿಂದ ಅಂದುಕೊಂಡು ಎಸ್​ಸಿ-ಎಸ್​​ಟಿ ಹಣ ಗ್ಯಾರಂಟಿಗೆ ಉಪಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ಕಡುಭ್ರಷ್ಟ ಅಪ್ರಾಮಾಣಿಕ ಮುಖ್ಯಮಂತ್ರಿ. ಮೋದಿ ಮತ್ತು ಜೋಶಿ ರಾಜೀನಾಮೆ ಕೊಡಬೇಕು ಎಂದ ಲಾಡ್ ಹೇಳಿಕೆಗೆ ಗರಂ ಆದ ಜೋಶಿ, ಇಂತಹ ಅಸಂಬದ್ಧ ಹೇಳಿಕೆಗೆ ಉತ್ತರ ಕೊಡಲ್ಲ. ಮೋದಿ ಏನ್ ಸೈಟ್ ತಗೊಂಡಿದ್ದಾರಾ ಎಂದು ‌ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮ‌‌ದ‌ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ತನ್ನ ಹೈಕಮಾಂಡ್ ಬೆಂಬಲದಿಂದ ಭಯಂಕರ ಭ್ರಷ್ಟಾಚಾರ ಶುರು ಮಾಡಿದೆ. ರಾಹುಲ್ ಗಾಂಧಿಯವರ ಬೆಂಬಲದಿಂದ ಬಹುದೊಡ್ಡ ಭ್ರಷ್ಟಾಚಾರ ನಡೆಸಿದೆ‌. ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ಕೋಟಿ‌ ಕೋಟಿ‌ ಹಣ ಸಂಗ್ರಹ ಮಾಡಿದ್ದರು. ಈ‌ ಬಗ್ಗೆ ನಾನು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂದು ವಾಲ್ಮೀಕಿ ಅಭವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ನೂರಾರು ಜನರಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದು ಸಂಪೂರ್ಣವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರಗೆ ಗೊತ್ತಿದ್ದೇ ನಡೆದಿರೋ ಭ್ರಷ್ಟಾಚಾರ. ಇದು 100 % ಭ್ರಷ್ಟಾಚಾರ ಸರ್ಕಾರ ಎಂದು ಆರೋಪಿಸಿದರು.

ಕೋಟಿಗಟ್ಟಲೇ ಹಣ ಗೋಣಿ ಚೀಲದಲ್ಲಿ ತುಂಬಿಟ್ಟಿದ್ದಾರೆ. 40 ದಿನಗಳಾದ್ರೂ ಸಹ ನಾಗೇಂದ್ರಗೆ ಯಾವುದೇ ನೋಟಿಸ್ ನೀಡಿಲ್ಲ. ಈಗ ಇಡಿ‌ ಅಧಿಕಾರಿಗಳು ನಾಗೇಂದ್ರನನ್ನ ಬಂಧನ ಮಾಡಿದ‌ ಕೂಡಲೇ ದದ್ದಲ್ ತನ್ನನ್ನೂ ಬಂಧನ‌ ಮಾಡುವಂತೆ ದುಂಬಾಲು‌ ಬಿದ್ದಿದ್ದಾರೆ. ಇಡಿ ಅಧಿಕಾರಿಗಳಿಂದ ಬಂಧನವಾದ ಕೂಡಲೇ ನಾಟಕವಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಪರಮ‌ ಭ್ರಷ್ಟ ಸರ್ಕಾರ. ಮುಡಾ‌ ಹಗರಣದಲ್ಲಿ ಸಿದ್ದರಾಮಯ್ಯ ಅವರದ್ದೇ ನೇರ ಕೈವಾಡವಿದೆ. ಬಹಳ ವ್ಯವಸ್ಥಿತವಾಗಿ ಮುಡಾ‌ದಲ್ಲಿ ಬಹು ಬೆಲೆ ಬಾಳುವ ನಿವೇಶನ ಗುಳುಂ ಮಾಡಿದ್ದಾರೆ. ಬರೋಬ್ಬರಿ 14 ನಿವೇಶನಗಳನ್ನ ಗುಳುಂ ಮಾಡಿದ್ದಾರೆ. ಕೂಡಲೇ ಸಿದ್ದರಾಮಯ್ಯ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಓದಿ:ಎಸ್​ಸಿಪಿ, ಟಿಎಸ್​ಪಿ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗಿರುವುದು ನಿಜ: ನಿಗಮದ ಅಧ್ಯಕ್ಷೆ - President Pallavi G

ABOUT THE AUTHOR

...view details