ಕರ್ನಾಟಕ

karnataka

ETV Bharat / state

ಸಂಡೂರಿನಿಂದ ತುಕರಾಂ ಪತ್ನಿಗೆ ಟಿಕೆಟ್​​: ಮುಖ್ಯಮಂತ್ರಿ ಸಿದ್ದರಾಮಯ್ಯ - CHIEF MINISTER SIDDARAMAIAH

ಸಿಎಂ ಸಿದ್ದರಾಮಯ್ಯ ಅವರು ಸಂಡೂರಿನ ಉಪಚುನಾವಣೆ ಅಭ್ಯರ್ಥಿ ಕುರಿತು ಮಾತನಾಡಿದ್ದಾರೆ. ಈಗಾಗಲೇ ಸಂಡೂರಿನಿಂದ ಸಂಸದ ತುಕರಾಂ ಪತ್ನಿ ಅಭ್ಯರ್ಥಿಯೆಂದು ತೀರ್ಮಾನವಾಗಿದೆ ಎಂದು ಹೇಳಿದ್ದಾರೆ.

chief-minister-siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Oct 22, 2024, 11:36 AM IST

Updated : Oct 22, 2024, 12:51 PM IST

ಮೈಸೂರು : ಉಪ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಇಂದು ಘೋಷಣೆ ಆಗಬಹುದು. ಈಗಾಗಲೇ ಸಂಡೂರಿನಿಂದ ಸಂಸದ ತುಕರಾಂ ಪತ್ನಿ ಅಭ್ಯರ್ಥಿಯೆಂದು ತೀರ್ಮಾನವಾಗಿದೆ. ಇನ್ನೆರಡು ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ಇಂದು ಆಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ತಮ್ಮ ಮೈಸೂರಿನ ಟಿ. ಕೆ ಲೇಔಟ್‌ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಚುನಾವಣೆಗೆ ಈಗಾಗಲೇ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು (ETV Bharat)

ಚನ್ನಪಟ್ಟಣ ಉಪಚುನಾವಣೆ, ಡಿ. ಕೆ ಸುರೇಶ್‌ ಹೆಸರು ಇದೆ : ಬಿಜೆಪಿ ಬಂಡಾಯ ಅಭ್ಯರ್ಥಿ ಸಿ. ಪಿ ಯೋಗೇ‍ಶ್ವರ್​ ಜತೆ ನಾನು ಮಾತನಾಡಿಲ್ಲ. ಚನ್ನಪಟ್ಟಣದ ಕ್ಷೇತ್ರದ ವಿಚಾರವನ್ನು ಕಾಂಗ್ರೆಸ್‌ ಅಧ್ಯಕ್ಷರೇ ನೋಡಿಕೊಳ್ಳುತ್ತಾರೆ. ಅವರು ಏನು ತೀರ್ಮಾನ ಮಾಡುತ್ತಾರೋ ನೋಡಬೇಕು. ನಾನು ಅವರಿಗೆ ಚನ್ನಪಟ್ಟಣದ ಉಪ ಚುನಾವಣೆಗೆ ಸೂಕ್ತ ಅಭ್ಯರ್ಥಿ ಹಾಕಿ ಎಂದು ಹೇಳಿದ್ದೇನೆ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ, ಚನ್ನಪಟ್ಟಣ ಉಪಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಡಿ. ಕೆ ಸುರೇಶ್‌ ಹೆಸರೂ ಇದೆ, ನೋಡೋಣ ಎಂದರು.

ತುಕರಾಂ ಪತ್ನಿ ಅನ್ನಪೂರ್ಣ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆ ಆಗುತ್ತಿದ್ದಾರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ ಎಂದು ಹೇಳಿದರು.

ಮಳೆ ಹಾನಿಗೆ ಪರಿಹಾರ ನೀಡಲು ತಯಾರಿ : ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಪರಿಹಾರ ನೀಡಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಮುಡಾ ಕಚೇರಿ ಮೇಲೆ ಇಡಿ ದಾಳಿ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಿದೆ ಹೊರಟ ಹೋದರು.

ಇದನ್ನೂ ಓದಿ :ಮಳೆ ಅನಾಹುತ ವರದಿ ತರಿಸಿಕೊಂಡಿದ್ದೇವೆ, ಪರಿಹಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ

Last Updated : Oct 22, 2024, 12:51 PM IST

ABOUT THE AUTHOR

...view details