ರಾಮನಗರ:ಉಪ ಚುನಾವಣೆ ಘೋಷಣೆಯಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 62 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸೋಮವಾರ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಪರಿಶೀಲನಾ ಕಾರ್ಯ ನಡೆದಿದ್ದು, ಸಲ್ಲಿಕೆಯಾಗಿದ್ದ 62 ನಾಮಪತ್ರಗಳಲ್ಲಿ, 38 ನಾಮಪತ್ರಗಳು ಕ್ರಮಬದ್ಧವಾಗಿವೆ.
ಚನ್ನಪಟ್ಟಣ ಉಪ ಚುನಾವಣೆ: 38 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ - CHANNAPATTANA BY ELECTION
ಚನ್ನಪಟ್ಟಣದಲ್ಲಿ ಸಲ್ಲಿಕೆಯಾಗಿರುವ ಒಟ್ಟು 62 ನಾಪತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಸೇರಿದಂತೆ ಒಟ್ಟು 38 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
Published : Oct 29, 2024, 6:39 AM IST
ಕ್ರಮಬದ್ಧ ನಾಮಪತ್ರಗಳ ವಿವರ: ಜನತಾ ದಳ (ಜಾತ್ಯತೀತ) ಅಭ್ಯರ್ಥಿ ನಿಖಿಲ್ ಕೆ., ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್,ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಅಭಿಷೇಕ ಎಸ್., ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಾರ್ಟಿ ಅಭ್ಯರ್ಥಿ ಉಮಾ ವಿ., ರೈತ ಭಾರತ ಪಾರ್ಟಿ ಅಭ್ಯರ್ಥಿ ನಾಗೇಶ್ ಕೆ.ಜೆ., ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ಮೊಹಮ್ಮದ್ ಫಾಜಿಲ್, ಪೂರ್ವಚಲ್ ಮಹಾ ಪಂಚಾಯತ್ ಪಕ್ಷದ ಅಭ್ಯರ್ಥಿ ರೇವಣ್ಣ ಎಚ್.ಡಿ., ಯಂಗ್‌ಸ್ಟಾರ್ ಎಂಪವರ್ಮೆಂಟ್ ಪಾರ್ಟಿಯ ಅಭ್ಯರ್ಥಿ ಶಾಬಾಜ್‌ಉಲ್ಲಾ ಖಾನ್, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಶಿವಕುಮಾರ್ ಎಸ್., ವಿಜಯ ಜನತಾ ಪಾರ್ಟಿ ಅಭ್ಯರ್ಥಿ ಶ್ರೀಧರ್ ಎನ್.ಎಸ್., ಪಕ್ಷೇತರ ಅಭ್ಯರ್ಥಿಗಳಾದ ಅರವಿಂದ, ಅಶ್ವಥ್ ಪಿ., ಅಂಬರೀಷ್ ಎಸ್., ಇಮ್ಯಾನ್ವೆಲ್, ಕುಮಾರಸ್ವಾಮಿ, ಚನ್ನನಾಗೇಶ್, ಚಂದ್ರೇಗೌಡ ಎಚ್.ಎಸ್., ಜಯಮಾಲಾ, ದಿನೇಶ್ ಬಿ.ಸಿ., ನಿಂಗರಾಜು ಎಸ್., ಪ್ರಕಾಶ್ ಜಿ.ಟಿ., ಪ್ರದೀಪ್ ಟಿ.ವಿ., ಪ್ರದೀಪ್ ಕುಮಾರ್ ಎಂ., ಪ್ರಸನ್ನ ಡಿ., ಬಂಡಿ ರಂಗನಾಥ ವೈ.ಆರ್., ಮಾದೇಗೌಡ ಡಿ.ಎಂ., ಮಂಜುನಾಥ, ಮಂಜುನಾಥಯ್ಯ ಸ್ವಾಮಿ ಸಿ.ಎಂ., ಯೋಗೀಶ್, ರವಿ ಶಿವಪ್ಪ ಪಡಸಲಗಿ, ರಾಜು ಕೆ., ರಾಮಯ್ಯ ಡಿ., ಶ್ರೀಕಾಂತ್ ಕೆ., ಶ್ರೀನಿವಾಸ ಎಸ್.ಎಚ್., ಶ್ರೀನಿವಾಸ ಮೂರ್ತಿ ಎಚ್.ಕೆ., ಸಯ್ಯದ್ ಜುಲ್ಫಿಕರ್ ಮೆಹದಿ, ಸಯ್ಯದ್ ಆಸಿಫ್ ಬುಕಾರಿ ಹಾಗೂ ಹನುಮಂತಯ್ಯ ಅವರ ನಾಮಪತ್ರಗಳು ಆಯ್ಕೆಯಾಗಿವೆ ಎಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ತಿಳಿಸಿದರು.
ಇದನ್ನೂ ಓದಿ:ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆಗ್ತಾರಂತ ಮೊದಲೇ ಗೊತ್ತಿತ್ತು, ನಮ್ಮ ಅಭ್ಯರ್ಥಿಯೇ ಗೆಲ್ಲುವುದು: ಸಿಎಂ