ಕರ್ನಾಟಕ

karnataka

ETV Bharat / state

ಚಾಮರಾಜನಗರ ಪೊಲೀಸ್ ಗಣಪತಿ ನಿಮಜ್ಜನ ಮೆರವಣಿಗೆ ಆರಂಭ - Chamarajanagar Ganapati Immersion - CHAMARAJANAGAR GANAPATI IMMERSION

ಚಾಮರಾಜನಗರದ ಪೊಲೀಸ್ ಗಣಪತಿ ನಿಮಜ್ಜನ ಮೆರವಣಿಗೆ ಆರಂಭವಾಗಿದೆ. ಮಧ್ಯರಾತ್ರಿ ತನಕವೂ ವಿವಿಧ ರಸ್ತೆಗಳಲ್ಲಿ ಸಂಚರಿಸಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Etv Bharat
Etv Bharat (Etv Bharat)

By ETV Bharat Karnataka Team

Published : Oct 4, 2024, 1:14 PM IST

ಚಾಮರಾಜನಗರ:ಚಾಮರಾಜನಗರದ ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸಿದ್ದ ದೊಡ್ಡ ಗಣಪತಿ ಎಂಥಲೇ ಕರೆಯುವ 'ಅಯೋಧ್ಯಾ ರಾಮ ಮಂದಿರ ಗಣಪತಿ' ನಿಮಜ್ಜನ ಮೆರವಣಿಗೆ ನಡೆಯುತ್ತಿದೆ. ಚಾಮರಾಜನಗರದ ರಥ ಬೀದಿಯಿಂದ ಬೆಳಗ್ಗೆ 11ಕ್ಕೆ ಆರಂಭಗೊಂಡಿರುವ ಮೆರವಣಿಗೆಯು ಇಂದು ಮಧ್ಯರಾತ್ರಿ ತನಕವೂ ವಿವಿಧ ರಸ್ತೆಗಳಲ್ಲಿ ಸಂಚರಿಸಲಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಸರ್ಪಗಾವಲು ಇದ್ದು, ಮೆರವಣಿಗೆ ಮಾರ್ಗ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಕಟ್ಟಡದ ಮೇಲೆ ಕೂರುವುದು, ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ನಿನ್ನೆಯಿಂದಲೇ ಮದ್ಯ ಮಾರಾಟ ಬಂದ್ ಮಾಡಲಾಗಿದೆ.

ಚಾಮರಾಜನಗರ ಪೊಲೀಸ್ ಗಣಪತಿ ನಿಮಜ್ಜನ ಮೆರವಣಿಗೆ ಆರಂಭ (ETV Bharat)

ಗಣಪತಿ ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿವೆ. ಗಾರುಡಿಗೊಂಬೆ, ಕಂಸಾಳೆ, ಗೊರವರ ಕುಣಿತ, ಚಂಡೆ, ವಿವಿಧ ವೇಷಧಾರಿಗಳು ಗಮನ ಸೆಳೆಯುತ್ತಿವೆ.

ಪೊಲೀಸ್ ಗಣಪತಿ ಎಂದೇ ಪ್ರಸಿದ್ಧ:ಮೆರವಣಿಗೆಯಲ್ಲಿ ಪೊಲೀಸರೇ ಹೆಚ್ಚಾಗಿ ಕಂಡು ಬರುವುದರಿಂದ ಇದು ಪೊಲೀಸ್ ಗಣಪತಿ ಎಂದೇ ಹೆಸರುವಾಸಿಯಾಗಿದೆ. ಆರ್​​ಎಸ್​ಎಸ್ ಗಣಪತಿ, ದೊಡ್ಡ ಗಣಪತಿ ಅಂತಲೂ ಕರೆಯಲಾಗುತ್ತದೆ.

ನಿಮಜ್ಜನ ಮೆರವಣಿಗೆಯಲ್ಲಿ ಪೊಲೀಸರಿಂದ ಭಧ್ರತೆ (ETV Bharat)

''ಈ ಬಾರಿ ಗಣಪತಿ ನಿಮಜ್ಜನ ಮೆರವಣಿಗೆಗೆ 6 ಡಿವೈಎಸ್​​ಪಿ, 28 ಪಿಐ, 48 ಮಂದಿ ಪಿಎಸ್ಐ ಸೇರಿ 750 ಮಂದಿ ಪೊಲೀಸರು, 100 ಮಂದಿ ಹೋಂ ಗಾರ್ಡ್​ಗಳು, 5 ಕೆಎಸ್ಆರ್​​ಪಿ, 6 ಡಿಆರ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ'' ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ‌.ಟಿ.ಕವಿತಾ ಹೇಳಿದ್ದಾರೆ.

ಪೊಲೀಸ್ ಗಣಪತಿ ನಿಮಜ್ಜನ ಮೆರವಣಿಗೆ (ETV Bharat)

ಇದನ್ನೂ ಓದಿ:ದಸರಾ ದರ್ಶಿನಿ: ಮಂಗಳೂರು KSRTC ಟೂರ್​ ಪ್ಯಾಕೇಜ್​ಗೆ ಜನರಿಂದ ಭಾರಿ ಮೆಚ್ಚುಗೆ - Dasara Darshini Tour Package

ABOUT THE AUTHOR

...view details