ಕರ್ನಾಟಕ

karnataka

ETV Bharat / state

ನಾವು ರಾಜಕೀಯ ಮಾಡೋದೂ ಇಲ್ಲ, ಅದರ ಅವಶ್ಯಕತೆನೂ ನಮಗಿಲ್ಲ: ಸಚಿವ ಚಲುವರಾಯಸ್ವಾಮಿ - chaluvaraya swamy

ಹಾಸನ ಪೆನ್ ಡ್ರೈವ್ ವಿಡಿಯೋ ಪ್ರಕರಣದ ಬಗ್ಗೆ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದಾರೆ.

chaluvaraya-swamy
ಸಚಿವ ಚಲುವರಾಯಸ್ವಾಮಿ (etv bharat)

By ETV Bharat Karnataka Team

Published : May 6, 2024, 9:20 PM IST

ಸಚಿವ ಚಲುವರಾಯಸ್ವಾಮಿ (etv bharat)

ಬೆಂಗಳೂರು : ಹಾಸನ ಪೆನ್ ಡ್ರೈವ್ ವಿಡಿಯೋ ಪ್ರಕರಣದಲ್ಲಿ ರಾಜಕೀಯ ಬೆರೆಸುವುದಿಲ್ಲ. ಅದರ ಅವಶ್ಯಕತೆಯೂ ನಮಗೆ ಇಲ್ಲ. ನಾವು ರಾಜಕೀಯ ಮಾಡೋದು ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಕಾವೇರಿ ನಿವಾಸದ ಬಳಿ ಮಾತನಾಡಿದ ಅವರು, ರಾಜಕೀಯ ಷಡ್ಯಂತ್ರ ಎಂಬ ರೇವಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದಕ್ಕಿಂತ ಬಹುಶಃ ಓಪನ್ ಆಗಿ ರಾಜಕಾರಣ ಬೆರಸದೇ ಕಾನೂನು ಬದ್ದವಾಗಿ ಮಾಡುವಂತಹದ್ದು ನಾನು ಎಲ್ಲಿಯೂ ನೋಡಿಲ್ಲ. ಮುಖ್ಯಮಂತ್ರಿ ಆಗಿರಲಿ, ಡಿಸಿಎಂ ಆಗ್ಲಿ, ನಾವಾಗ್ಲಿ ರಾಜಕೀಯ ಬೆರೆಸುವುದಿಲ್ಲ. ಅದರ ಅವಶ್ಯಕತೆ ನಮಗಿಲ್ಲ. ನಾವು ರಾಜಕೀಯ ಮಾಡೋದೂ ಇಲ್ಲ. ಕೋರ್ಟ್ ಮತ್ತು ತನಿಖಾ ಸಂಸ್ಥೆ ಇವರೆಡರ ಮಧ್ಯೆ ನಡೆಯುತ್ತಿದೆ ಎಂದರು.

ಕೆ ಆರ್​ ನಗರ ಶಾಸಕರೇ ದೂರು ನೀಡಲು ಕುಮ್ಮಕ್ಕು ನೀಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆ ಮಹಿಳೆ ಬಂದಿರೋದು ಸತ್ಯ ಅಲ್ವೇನ್ರಿ. ಇದರಲ್ಲಿ ರಾಜಕೀಯ ಖಂಡಿತ ಇಲ್ಲ. ಅದರ ಅವಶ್ಯಕತೆಯೂ ನಮಗೆ ಇಲ್ಲ. ಅವರನ್ನು ಬಂಧಿಸಿದಾಗ ಸಹಜವಾಗಿ ನೋವಾಗಿರುತ್ತೆ. ಯಾರೇ ತಪ್ಪು ಮಾಡಿದರೂ ಕಾನೂನು ಎದುರಿಸಲೇಬೇಕು ಎಂದು ತಿಳಿಸಿದರು.

ನಾವಲ್ಲ ಅವರ ಮನೆಯವರೇ ಮುಖ್ಯಮಂತ್ರಿಯಾದರೂ ಇದನ್ನು ಎದುರಿಸಲೇಬೇಕು. ಇದರ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುವುದಕ್ಕಿಂತ ಕಾನೂನು ಗಮನಿಸೋಣ. ನಮಗೂ ಇದು ಖುಷಿ ಪಡುವ ವಿಚಾರವಲ್ಲ, ಬೇಸರವಾಗಿದೆ ಎಂದರು.

ಎಸ್​ಐಟಿ ರಚನೆ ಬಗ್ಗೆ ಬಿಜೆಪಿಯವರೇ ಸ್ವಾಗತ ಮಾಡಿದ್ದಾರೆ. ಇದನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುವ ಪ್ರಶ್ನೆಯೆ ಇಲ್ಲ. ಮಹಿಳಾ ಆಯೋಗದ ದೂರಿನ ಮೇಲೆ ಎಸ್​ಐಟಿ ರಚನೆಯಾಗಿದೆ. ಆ ಕೇಸ್​​ ಮುಂದುವರೆಸಲಾಗುತ್ತಿದೆ. ನಿನ್ನೆ ರೇವಣ್ಣನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.‌ ಪ್ರಜ್ವಲ್ ಇವತ್ತು ಅಥವಾ ನಾಳೆ ಬರುವ ಸಾಧ್ಯತೆ ಇದೆ ಎಂದು ಅವರ ಮುಖಂಡರು ಹೇಳಿದ್ದಾರೆ. ಕೋರ್ಟ್​ನಲ್ಲಿ ಕೇಸ್ ನಡೆಯುತ್ತಿದೆ. ಎಸ್​ಐಟಿ ಅದರ ಬಗ್ಗೆ ಗಮನ ಹರಿಸುತ್ತೆ. ನಾನು ಹೆಚ್ಚು ಪ್ರಸ್ತಾಪ ಮಾಡೋದಿಲ್ಲ ಎಂದು ತಿಳಿಸಿದರು.

ಮಂಡ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಸಾರ್ವಜನಿಕರಲ್ಲಿ ಕೈ ಮುಗಿದು, ನಾವು ಎಷ್ಟೇ ಕಠಿಣ ಕ್ರಮ ವಹಿಸಿದ್ರೂ ರಿಪೀಟ್ ಆಗ್ತಾ ಇದೆ. ಸಾರ್ವಜನಿಕರು ಇಂಥಹದ್ದಕ್ಕೆ ಕುಮ್ಮಕ್ಕು ಕೊಡಬಾರದು. ಸರ್ಕಾರದ ಮಟ್ಟದಲ್ಲಿ ಕಠಿಣ ಕಾನೂನು ತರಬೇಕಿದೆ. ಈ ಬಗ್ಗೆ ಸಿಎಂ ಜೊತೆ ಕೂಡ ಚರ್ಚೆ ಮಾಡಿದ್ದೇನೆ ಎಂದರು.

ಇದನ್ನೂ ಓದಿ :ಪ್ರಜ್ವಲ್ ರೇವಣ್ಣ ಪ್ರಕರಣ: ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ನಿರ್ಬಂಧ - Restraining Order

ABOUT THE AUTHOR

...view details