ಬೆಂಗಳೂರು : ಇನ್ನೇನು ಕಾರಿನ ಎಂಜಿನ್ ಸೀಜ್ ಆಗುತ್ತದೆ ಎನ್ನುವ ಸಂದರ್ಭದಲ್ಲಿ ಗ್ರಾಹಕರೊಬ್ಬರಿಗೆ ತಪ್ಪು ಮಾತಿ ನೀಡಿ ಮಾರಾಟ ಮಾಡಿದ್ದ ಆರೆಂಜ್ ಕಾರ‍್ಸ್ ಮಾಲೀಕರಿಗೆ 30 ಸಾವಿರ ರೂಗಳನ್ನು ನೊಂದವರಿಗೆ ಪರಹಾರ ನೀಡುವಂತೆ ಗ್ರಾಹಕರ ಹಕ್ಕುಗಳ ಪರಿಹಾರ ವೇದಿಕೆ ಆದೇಶಿಸಿದೆ.
ಮಂಜುಳಾ ಎಂಬುವರು ಸಲ್ಲಿಸಿದ್ದ ದೂರು ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ಸಮಸ್ಯೆಗಳ ಪರಿಹಾರಗಳ ಆಯೋಗದ ಅಧ್ಯಕ್ಷರಾದ ಎಂ.ಎಸ್. ರಾಮಚಂದ್ರ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ ಕಾರು ಖರೀದಿ ಮಾಡಿದ್ದು ಸುಮಾರು 3.40 ಲಕ್ಷ ರೂಪಾಯಿಗೆ. 30 ಸಾವಿರ (ಮಾನಸಿಕ ಹಿಂಸೆ ಅನುಭವಿಸಿದ್ದಕಾರಣ 20 ಸಾವಿರ, 10 ಸಾವಿರ ದಂಡ) ಪರಿಹಾರಕ್ಕೆ ಸೂಚನೆ ನೀಡಿ ಆದೇಶಿಸಿದೆ.
ಪ್ರಕರಣದ ಪ್ರತಿವಾದಿ ಆರೆಂಜ್ ಕಾರ್ಸ್ ಅವರಿಗೆ ನೋಟಿಸ್ ನೀಡಲಾಗಿದೆ. ಆದರೂ, ತಮ್ಮ ಆಕ್ಷೇಪ ಸಲ್ಲಿಸಿಲ್ಲ. ಯಾವುದೇ ಆಕ್ಷೇಪ ಸಲ್ಲಿಸಿಲ್ಲ ಎಂದಾದರೆ ಆರೋಪವನ್ನು ಒಪ್ಪಿಕೊಂಡಂತೆ ಎಂಬುದಾಗಿ ರಾಷ್ಟ್ರೀಯ ಗ್ರಾಹಕರ ಪರಿಹಾರ ವೇದಿಕೆ ಕೋಟಕ್ ಮಹೇಂದ್ರ ಓಲ್ಡ್ ಮೂಚ್ಯುವಲ್ ವಿರುದ್ಧ ಡಾ.ನಿಶಿ ಗುಪ್ತ ಪ್ರಕರಣದಲ್ಲಿ ತಿಳಿಸಿದೆ. ಆದ್ದರಿಂದ ಪ್ರತಿವಾದಿ ಆಕ್ಷೇಪ ಸಲ್ಲಿಸಿಲ್ಲ. ಹೀಗಾಗಿ ಈ ಆದೇಶ ಮಾಡುತ್ತಿರುವುದಾಗಿ ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ದೂರುದಾರರಾದ ಮಂಜುಳಾ ಎಂಬುವರು ಆರೆಂಜ್ ಕಾರ‍್ಸ್ ನ ಮಾಲೀಕರಾದ ನವೀನ್ ಗೌಡ ಎಂಬುವರಿಂದ 2018ರ ಮಾಡೆಲ್‌ನ ಹ್ಯೂಂಡೈ ಮೋಟೋ ಕ್ಯಾಬ್ ಕಾರನ್ನು 2022ರ ಜನವರಿ 10ರಂದು 3.60 ಲಕ್ಷ ರೂ.ಗಳನ್ನು ನೀಡಿ ಖರೀದಿ ಮಾಡಿದ್ದರು. 20 ಸಾವಿರ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದು, ದಾಖಲೆಗಳನ್ನು ಪಡೆದ ಬಳಿಕ ಬಾಕಿ ಮೊತ್ತ ಪಾವತಿ ಮಾಡುವುದಾಗಿ ತಿಳಿಸಿದ್ದರು. ಆದರೆ, ದಾಖಲೆಗಳನ್ನು ಹಸ್ತಾಂತರ ಮಾಡುವುದಕ್ಕೆ ವಿಳಂಬ ನೀತಿ ಅನುಸರಿಸುತ್ತಿದ್ದರು.