ಕರ್ನಾಟಕ

karnataka

ETV Bharat / state

'ಕಾಂತಾರ' ನೃತ್ಯ ಕಲಾವಿದರಿದ್ದ ಮಿನಿ ಬಸ್ ಪಲ್ಟಿ; ಶೂಟಿಂಗ್​ ಬಗ್ಗೆ ನಿರ್ಮಾಪಕರು ಹೇಳಿದ್ದೇನು? - KANTARA BUS ACCIDENT

'ಕಾಂತಾರ: ಚಾಪ್ಟರ್ 1' ಸಿನಿಮಾ ನೃತ್ಯ ಕಲಾವಿದರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕಾಂತಾರ ನೃತ್ಯ ಕಲಾವಿದರಿದ್ದ ಮಿನಿ ಬಸ್ ಪಲ್ಟಿ
ಕಾಂತಾರ ನೃತ್ಯ ಕಲಾವಿದರಿದ್ದ ಮಿನಿ ಬಸ್ ಪಲ್ಟಿ (ETV Bharat)

By ETV Bharat Karnataka Team

Published : Nov 25, 2024, 10:01 AM IST

ಉಡುಪಿ: 'ಕಾಂತಾರ: ಚಾಪ್ಟರ್ 1' ಸಿನಿಮಾ ಚಿತ್ರೀಕರಣ ಮುಗಿಸಿ ಕೊಲ್ಲೂರು ವಸತಿಗೃಹಕ್ಕೆ ವಾಪಸಾಗುತ್ತಿದ್ದಾಗ ಮಿನಿ ಬಸ್ ಪಲ್ಟಿಯಾಗಿ ಕೆಲ ನೃತ್ಯ ಕಲಾವಿದರು ಗಾಯಗೊಂಡಿರುವ ಘಟನೆ ಕೊಲ್ಲೂರು ಸಮೀಪದ ಆನೆಜರಿ ಎದುರು ಭಾನುವಾರ ರಾತ್ರಿ ಸಂಭವಿಸಿದೆ.

ಮುದೂರಿನಲ್ಲಿ ನೃತ್ಯ ಚಿತ್ರೀಕರಣ ಮುಗಿಸಿ ಸುಮಾರು 20ಕ್ಕೂ ಹೆಚ್ಚು ಕಿರಿಯ ನೃತ್ಯ ಕಲಾವಿದರು ತಮ್ಮ ವಸತಿಗೃಹಕ್ಕೆ 407 ಬಸ್‌ನಲ್ಲಿ ವಾಪಸಾಗುತ್ತಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಾಗ ನಿಯಂತ್ರಣ ಕಳೆದುಕೊಂಡು ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ‌. ಗಾಯಗೊಂಡ ಹಲವು ಕಲಾವಿದರಿಗೆ ಜಡ್ಕಲ್ ಮಹಾಲಕ್ಷ್ಮೀ ಕ್ಲಿನಿಕ್​​ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು 'ಈಟಿವಿ ಭಾರತ'ದೊಂದಿಗೆ ಪ್ರತಿಕ್ರಿಯಿಸಿದ ಹೊಂಬಾಳೆ ಫಿಲ್ಮ್ಸ್ ಎಕ್ಸಿಕೂಟಿವ್​ ಪ್ರೊಡ್ಯೂಸರ್​​, ''ನೃತ್ಯ ಕಲಾವಿದರಿಗೆ ಸಣ್ಣಪುಟ್ಟ ಗಾಯಗಳಾಗಿರುವುದು ನಿಜ. ಅವರು ಚಿಕಿತ್ಸೆ ಪಡೆದಿದ್ದಾರೆ. ಚಿತ್ರ ಶೂಟಿಂಗ್​ ಸ್ಥಗಿತಗೊಂಡಿಲ್ಲ. ಚಿತ್ರೀಕರಣ ಎಂದಿನಂತೆ ಮುಂದುವರೆದಿದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆಟೋಗೆ ಸರ್ಕಾರಿ ಬಸ್​ ಡಿಕ್ಕಿ: 7 ಮಂದಿ ಕೂಲಿ ಕಾರ್ಮಿಕರು ಸಾವು, ₹5 ಲಕ್ಷ ಪರಿಹಾರ ಘೋಷಣೆ

ABOUT THE AUTHOR

...view details