ಕರ್ನಾಟಕ

karnataka

ETV Bharat / state

ಕಟ್ಟಡ ಬಾಡಿಗೆ ಬಾಕಿ: ಬ್ಯಾಂಕ್ ಆಫ್ ಬರೋಡಾ, ಅಂಚೆ ಕಚೇರಿಗೆ ಬಿಬಿಎಂಪಿ ಬೀಗ - BBMP ACTION - BBMP ACTION

ಬೆಂಗಳೂರಿನಲ್ಲಿ ಕಟ್ಟಡ ಬಾಡಿಗೆ ಬಾಕಿ ಉಳಿಸಿಕೊಂಡ ಕಾರಣ ಬ್ಯಾಂಕ್ ಆಫ್ ಬರೋಡಾ ಹಾಗೂ ಅಂಚೆ ಕಚೇರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಬರೋಡಾ ಕಚೇರಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದರು.
ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಬರೋಡಾ ಕಚೇರಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದರು. (ETV Bharat)

By ETV Bharat Karnataka Team

Published : Jul 6, 2024, 9:29 PM IST

ಬೆಂಗಳೂರು:ನಗರದ ಎಂಜಿ ರಸ್ತೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ (ಪಿಯುಬಿ) ಕಟ್ಟಡದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಹಾಗೂ ಅಂಚೆ ಕಚೇರಿಗಳು ಬಾಡಿಗೆ ಪಾವತಿಸದ ಕಾರಣ ಶನಿವಾರ ಬಿಬಿಎಂಪಿ ಅಧಿಕಾರಿಗಳು ಕಚೇರಿಗಳಿಗೆ ಬೀಗ ಹಾಕಿದ್ದಾರೆ.

ಪೂರ್ವ ವಲಯ ವ್ಯಾಪ್ತಿಯ ಪಿಯುಬಿ ಕಟ್ಟಡದ ನೆಲ ಅಂತಸ್ತಿನ 14/15ನೆಯ ನಂಬರ್ ಮಳಿಗೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಹಾಗೂ 17ನೇ ಮಳಿಗೆಯಲ್ಲಿರುವ ಅಂಚೆ ಕಚೇರಿ ಇಲಾಖೆಗಳು ಬಾಕಿ ಬಾಡಿಗೆ ಪಾವತಿಸಿಲ್ಲ. ಬರೋಡಾ ಬ್ಯಾಂಕ್ 2011ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆ ಪಾವತಿಸಿಲ್ಲ. ಅಲ್ಲದೇ, 2022ರ ಡಿಸೆಂಬರ್​ನಿಂದ ಯಾವುದೇ ಬಾಡಿಗೆಯನ್ನು ಪಾವತಿಸದೇ ಇದ್ದ ಕಾರಣ ಹಲವಾರು ಬಾರಿ ನೋಟೀಸ್ ಜಾರಿ ಮಾಡಲಾಗಿದೆ. ಆದರೆ, ಬಾಂಕ್‌ನವರು ಬಾಡಿಗೆಯನ್ನು ಪಾವತಿಸಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬರೋಡಾ ಬ್ಯಾಂಕ್​ನಿಂದ 17.56 ಕೋಟಿ ಬಾಕಿ:ಬರೋಡಾ ಬ್ಯಾಂಕ್​ನವರು 7,61,70,155 ರೂ.ಗಳ ಬಾಡಿಗೆ ಮೊತ್ತ, 1,25,98,845 ರೂ.ಗಳ ಸಿಎಸ್‌ಟಿ/ಜಿಎಸ್‌ಟಿ ಮೊತ್ತ ಹಾಗೂ 8,69,22,095 ರೂ.ಗಳ ಬಡ್ಡಿಯನ್ನು ಸೇರಿ ಒಟ್ಟು 17,56,91,095 ರೂ.ಗಳನ್ನು ಬಿಬಿಎಂಪಿಗೆ ಪಾವತಿ ಮಾಡಬೇಕಾಗಿದೆ.

ಅಂಚೆ ಇಲಾಖೆಯಿಂದ 2.32 ಕೋಟಿ ಬಾಕಿ:ಅದೇ ರೀತಿಯಾಗಿ ಅಂಚೆ ಕಚೇರಿ ಇಲಾಖೆಯವರು 2006ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿಲ್ಲ. ಅಂಚೆ ಕಚೇರಿಯಿಂದ 93,27,168 ರೂ. ಬಾಡಿಗೆ, 10,09,124 ರೂ. ಸಿಎಸ್‌ಟಿ/ಜಿಎಸ್‌ಟಿ ಮೊತ್ತ ಹಾಗೂ 1,29,27,119 ರೂ. ಬಡ್ಡಿ ಸೇರಿ ಒಟ್ಟು 2,32,63,410 ರೂ.ಗಳನ್ನು ಬಿಬಿಎಂಪಿಗೆ ಪಾವತಿಸಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ದಯವಿಟ್ಟು ಗಮನಿಸಿ: ವಿದ್ಯುತ್‌ ಕಂಬಗಳ ಮೇಲಿನ ಅನಧಿಕೃತ ಕೇಬಲ್​ಗಳ ತೆರವಿಗೆ ಬೆಸ್ಕಾಂ ಅಂತಿಮ ಗಡುವು

ABOUT THE AUTHOR

...view details