ಕಲಬುರಗಿ: ಕುಖ್ಯಾತ ಕಳ್ಳನೋರ್ವನನ್ನು ಬಂಧಿಸಿ ಆತನಿಂದ 1 ಬೊಲೆರೋ ವಾಹನ, 11 ದ್ವಿಚಕ್ರವಾಹನ, ಚಿನ್ನಾಭರಣ ಸೇರಿದಂತೆ ಒಟ್ಟು 11.23 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಅಫಜಲಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಫಜಲಪುರ ಪಟ್ಟಣದ ಉಸ್ಮಾನಿಯಾ ಕಾಲೋನಿಯ ನಿವಾಸಿ 23 ವರ್ಷದ ಮುಜಾಫರ್ ಬಂಧಿತ ಆರೋಪಿ. ಇನ್ನು ಬಂಧಿತನಿಂದ 6,13,000ರೂ. ಮೌಲ್ಯದ ವಿವಿಧ ಕಂಪನಿಯ11 ದ್ವಿಚಕ್ರವಾಹನಗಳು, 4.5 ಲಕ್ಷದ ಬೊಲೆರೋ ವಾಹನ, 12 ಗ್ರಾಂ ಚಿನ್ನಾಭರಣ ಸೇರಿ 11.23 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೊಲೆರೋ ವಾಹನ ಕಳ್ಳತನವಾದ ಬಗ್ಗೆ ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ವೇಳೆ ಆರೋಪಿಯನ್ನು ತಂದು ವಿಚಾರಣೆಗೆ ಒಳಪಡಿಸಿದಾಗ ಬೊಲೆರೋ ವಾಹನ ಮಾತ್ರವಲ್ಲ, ಬೈಕ್ಗಳು ಹಾಗೂ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.