ಕರ್ನಾಟಕ

karnataka

ETV Bharat / state

ಬಸ್​ ಚಲಾಯಿಸುತ್ತಿರುವಾಗಲೇ ಹೃದಯಾಘಾತದಿಂದ ಬಿಎಂಟಿಸಿ ಚಾಲಕ ಸಾವು! ನಿರ್ವಾಹಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಬಿಎಂಟಿಸಿ ಬಸ್ ಚಾಲಕನೊಬ್ಬ ಬಸ್ ಚಾಲನೆ ಮಾಡುವಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

BMTC Bus Driver Heart Attack
ಹೃದಯಾಘಾತದಿಂದ ಬಿಎಂಟಿಸಿ ಚಾಲಕ ಸಾವು (ETV Bharat)

By ETV Bharat Karnataka Team

Published : Nov 6, 2024, 6:37 PM IST

Updated : Nov 6, 2024, 7:13 PM IST

ಬೆಂಗಳೂರು:ಬಿಎಂಟಿಸಿ ಬಸ್​ ಚಲಾಯಿಸುತ್ತಿರುವಾಗಲೇ ಹೃದಯಾಘಾತದಿಂದ ಚಾಲಕ ಮೃತಪಟ್ಟ ಘಟನೆ ಯಶವಂತಪುರ ಬಳಿ ನಡೆದಿದೆ. ಬಿಎಂಟಿಸಿ ಡಿಪೋ 40ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಸನ ಮೂಲದ ಕಿರಣ್ ಕುಮಾರ್​ (38) ಮೃತಪಟ್ಟ ಬಸ್​ ಚಾಲಕ ಎಂದು ಬಿಎಂಟಿಸಿ ಅಧಿಕಾರಿಗಳು ದೃಢಪಡಿಸಿದ್ದಾರೆ.

ಕರ್ತವ್ಯ ಮುಗಿಸಿ ಕೊನೆಯ ಸುತ್ತುವಳಿಯಲ್ಲಿ, ನೆಲಮಂಗಲದಿಂದ ದಾಸನಪುರ ಘಟಕಕ್ಕೆ ಬರುವಾಗ ಚಾಲಕ ಕಿರಣ್​ಗೆ ಹಠಾತ್ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಡ್ರೈವರ್​ ಸೀಟ್​ನಿಂದ ಪಕ್ಕಕ್ಕೆ ಜಾರಿ ಬಿದ್ದಿದ್ದಾನೆ. ಚಲನೆಯಲ್ಲಿದ್ದ ಬಸ್,​ ಈ ವೇಳೆ ಪಕ್ಕದಲ್ಲಿದ್ದ ಮತ್ತೊಂದು ಬಿಎಂಟಿಸಿ ಬಸ್​ಗೆ ಸ್ವಲ್ಪ ಡಿಕ್ಕಿ​ ಹೊಡೆದಿದೆ.

ಇದನ್ನು ಗಮನಿಸಿದ ನಿರ್ವಾಹಕ ಓಬಳೇಶ್ ಚಲಿಸುತ್ತಿದ್ದ​ ಬಸ್ ಕೂಡಲೇ ನಿಲ್ಲಿಸಿ ಚಾಲಕನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕಿರಣ್‌ ಕುಮಾರ್ ಕೊನೆಯುಸಿರೆಳೆದಿದ್ದು, ಮರಣ ಹೊಂದಿರುವ ಬಗ್ಗೆ ವೈದ್ಯರು ಕೂಡ ಧೃಢಪಡಿಸಿದ್ದಾರೆ.

ಬಸ್ ರಸ್ತೆಯ ಒಂದು ಬದಿಗೆ ವಾಲುತ್ತಾ ಸಾಗಿತ್ತು. ಪಕ್ಕದಲ್ಲಿದ್ದ ಮತ್ತೊಂದು ಬಿಎಂಟಿಸಿ ಬಸ್​ಗೆ ಸ್ಪಲ್ಪ ಡಿಕ್ಕಿಯೂ ಹೊಡೆದಿದೆ. ಇನ್ನೇನು ದೊಡ್ಡ ಪ್ರಮಾಣದ ಅನಾಹುತ ಸಂಭವಿಸಬೇಕು ಅನ್ನುವಷ್ಟರಲ್ಲೇ ನಿರ್ವಾಹಕ ಓಬಳೇಶ್ ಚಾಲಕನ ಸೀಟಿನಲ್ಲಿ ಕುಳಿತು ಬಸ್ ಅನ್ನು ತಕ್ಷಣ ನಿಲ್ಲಿಸಿದ್ದಾರೆ. ಮಾರ್ಗ ಸಂಖ್ಯೆ 256M/1, ವಾಹನ ಸಂಖ್ಯೆ F- 4007 ಆಗಿದ್ದು, ನಿರ್ವಾಹಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: ಬೆಂಗಳೂರು: ಕರ್ತವ್ಯನಿರತ ಟ್ರಾಫಿಕ್‌ ಎಎಸ್ಐ ಹೃದಯಾಘಾತದಿಂದ ಸಾವು

Last Updated : Nov 6, 2024, 7:13 PM IST

ABOUT THE AUTHOR

...view details