ಕರ್ನಾಟಕ

karnataka

ETV Bharat / state

ಶುಭ ಶುಕ್ರವಾರ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ಶಾಸಕ ಯತ್ನಾಳ್​ - YATNAL VISITS TEMPLE

ನಾಡಿನ ಅದಿದೇವತೆ ಚಾಮುಂಡೇಶ್ವರಿ ದೇವಿಯ ಸನ್ನಿಧಾನಕ್ಕೆ ಭೇಟಿ ನೀಡಿದ ವಿಜಯಪುರದ ಬಿಜೆಪಿ ಶಾಸಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಶೇಷ ಪೂಜೆ ಸಲ್ಲಿಸಿದರು.

YATNAL VISITS CHAMUNDESHWARI TEMPLE
ಶುಭ ಶುಕ್ರವಾರ ನಾಡಿನ ಅದಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ಶಾಸಕ ಯತ್ನಾಳ್​ (ETV Bharat)

By ETV Bharat Karnataka Team

Published : Feb 21, 2025, 12:28 PM IST

ಮೈಸೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಭ ಶುಕ್ರವಾರವಾದ ಇಂದು ನಾಡಿನ ಅದಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ಪೂಜೆ ಬಳಿಕ ಮಾಧ್ಯಮಾಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ದೇವಾಲಯದಿಂದ ಹಾಗೆಯೇ ಹೊರಟು ಹೋದರು.

ಪೂಜೆ ಬಳಿಕ ದೇವಾಲಯದ ಒಳಗೆ ಸ್ವಲ್ಪ ಕಾಲ ವಿಶ್ರಾಂತಿ ಪಡೆದ ಶಾಸಕರು, ದೇವಾಲಯದ ಒಳಗಿರುವ ವಿನಾಯಕಸ್ವಾಮಿ ಮತ್ತು ಆಂಜನೇಯಸ್ವಾಮಿಗೂ ಪೂಜೆ ಸಲ್ಲಿಸಿದರು.

ಶುಭ ಶುಕ್ರವಾರ ನಾಡಿನ ಅದಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ಶಾಸಕ ಯತ್ನಾಳ್​ (ETV Bharat)

ಬಳಿಕ ದೇವಾಲಯದ ಹೊರಭಾಗದಲ್ಲಿ ಅಭಿಮಾನಿಗಳಿಗೆ ಸೆಲ್ಫಿ ನೀಡಿದರು. ಈ ವೇಳೆ ಮಾಧ್ಯಮಗಳು ಅವರ ಪತ್ರಿಕ್ರಿಯೆ ಪಡೆಯಲು ಕರೆದಾಗ ಕೈ ಮುಗಿದು ಅಲ್ಲಿಂದ ಹೊರಟೇ ಹೋದರು.

ಶುಭ ಶುಕ್ರವಾರ ನಾಡಿನ ಅದಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ಶಾಸಕ ಯತ್ನಾಳ್​ (ETV Bharat)

ಈ ಸಂದರ್ಭದಲ್ಲಿ ಭಕ್ತರ ಸಾಲಿನಲ್ಲಿದ್ದ ಒಬ್ಬ, ಯಡಿಯೂರಪ್ಪ ಅವರಿಗೆ ಜೈ...! ವಿಜಯೇಂದ್ರಗೆ ಜೈ..! ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು.

ಶುಭ ಶುಕ್ರವಾರ ನಾಡಿನ ಅದಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ಶಾಸಕ ಯತ್ನಾಳ್​ (ETV Bharat)

ಇಂದು ನಾಡಿನ ಅದಿದೇವತೆ ದರ್ಶನ ಪಡೆಯಲು ಆಗಮಿಸಿದ ಯತ್ನಾಳ್​ ಜೊತೆ ಬೇರೆ ಯಾರೂ ರೆಬಲ್‌ ಶಾಸಕರಾಗಲಿ, ಮಾಜಿ ಶಾಸಕರಾಗಲಿ, ಮಾಜಿ ಸಂಸದ ಪ್ರತಾಪ್‌ ಸಿಂಹ ಅವರಾಗಲಿ ಇರಲಿಲ್ಲ. ಕಳೆದ ವಾರ ಮಾಜಿ ಶಾಸಕ ಕುಮಾರ ಬಂಗಾರಪ್ಪ, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಇತರರು ದೇವಿಯ ದರ್ಶನ ಪಡೆದಿದ್ದರು.

ಶುಭ ಶುಕ್ರವಾರ ನಾಡಿನ ಅದಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ಶಾಸಕ ಯತ್ನಾಳ್​ (ETV Bharat)

ಇದನ್ನೂ ಓದಿ:ಸವದತ್ತಿ ಯಲ್ಲಮ್ಮ ದೇವಿ ಜಾತ್ರೆಗೆ ಹುಬ್ಬಳ್ಳಿ, ನವಲಗುಂದದಿಂದ ವಿಶೇಷ ಬಸ್ - SAVADATTI YALLAM FAIR

ABOUT THE AUTHOR

...view details