ಕರ್ನಾಟಕ

karnataka

ETV Bharat / state

ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ವಿರುದ್ಧ ಬಿಜೆಪಿ ದೂರು - Sunil Bose - SUNIL BOSE

ಕಾಂಗ್ರೆಸ್​ ಅಭ್ಯರ್ಥಿ ಸುನೀಲ್ ಬೋಸ್ ವಿರುದ್ಧ ಬಿಜೆಪಿ ಮುಖಂಡರೊಬ್ಬರು ದೂರು ನೀಡಿದ್ದಾರೆ.

bjp-leader-narayan-prasad-complains-against-congress-candidate-sunil-bose
ಕೈ ಅಭ್ಯರ್ಥಿ ಸುನಿಲ್ ಬೋಸ್ ವಿರುದ್ಧ ಬಿಜೆಪಿ ದೂರು

By ETV Bharat Karnataka Team

Published : Apr 5, 2024, 10:15 PM IST

ಬಿಜೆಪಿ ಮುಖಂಡ ನಾರಾಯಣಪ್ರಸಾದ್

ಚಾಮರಾಜನಗರ: ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವಿವಾಹಿತರೆಂದು ಸುಳ್ಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಚುನಾವಣಾಧಿಕಾರಿಗೆ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ.

ಏ.3ರಂದು ಚಾಮರಾಜನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿ, ಸುನೀಲ್ ಬೋಸ್ ನಾಮಪತ್ರ ಸಲ್ಲಿಸಿದ್ದರು. ಅಫಿಡವಿಟ್​ನಲ್ಲಿ ಪತ್ನಿ, ಅವಲಂಬಿತರು ಯಾರೂ ಇಲ್ಲ ಎಂದು ನಮೂದಿಸಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ.

ನಾರಾಯಣಪ್ರಸಾದ್ ಮಾಧ್ಯಮವರೊಂದಿಗೆ ಮಾತನಾಡಿ, ಸುನrಲ್ ಬೋಸ್ ಸತ್ಯಾಂಶವನ್ನು ಮರೆಮಾಚಿ ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಪತ್ನಿ ಹಾಗೂ ಮಗಳಿದ್ದಾರೆ.‌ ಮಗಳು ಶಾಲೆಯಲ್ಲಿ ಓದುತ್ತಿರುವ ಬಗ್ಗೆ ಮಾಹಿತಿ ಇದೆ. ಸಾಮಾಜಿಕ ಜಾಲತಾಣದಲ್ಲಿ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇಷ್ಟಾದರೂ ನಾಮಪತ್ರದಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ತಂದೆ-ತಾಯಿ ಆಸ್ತಿ ಬಗ್ಗೆಯೂ ವಿವರ ಕೊಟ್ಟಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಅಸಿಂಧುಗೊಳಿಸಬೇಕು ಎಂದು ದೂರು ಕೊಡಲಾಗಿದೆ" ಎಂದರು.

ಇದನ್ನೂ ಓದಿ:'ಗೋ ಬ್ಯಾಕ್' ಪೋಸ್ಟರ್ ಪ್ರತ್ಯಕ್ಷ: 'ಮರಳು ದಂಧೆ ಸಾಬೀತು ಪಡಿಸಿದರೇ ನಾಮಪತ್ರ ಸಲ್ಲಿಸಲ್ಲ': ಸುನಿಲ್ ಬೋಸ್ - Go Back Sunil Bose Poster

ABOUT THE AUTHOR

...view details