ಕರ್ನಾಟಕ

karnataka

ETV Bharat / state

ವಕ್ಫ್​ ಆಸ್ತಿ ವಿವಾದ: ನೈಜ ವರದಿ ಸಂಗ್ರಹಕ್ಕೆ ಬಿಜೆಪಿಯಿಂದ ಮೂರು ತಂಡಗಳ ರಚನೆ - BJP FORMED THREE TEAMS

ವಕ್ಫ್​ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನೈಜ ವರದಿ ಸಂಗ್ರಹಿಸಲು ಬಿಜೆಪಿ ಮೂರು ತಂಡಗಳನ್ನ ರಚನೆ ಮಾಡಿದೆ.

bjp
ಬಿಜೆಪಿ ನಾಯಕರು (ETV Bharat)

By ETV Bharat Karnataka Team

Published : Nov 15, 2024, 10:35 PM IST

Updated : Nov 15, 2024, 10:50 PM IST

ಬೆಂಗಳೂರು : ವಕ್ಫ್​ ಆಸ್ತಿ ವಿವಾದ ವಿಚಾರವಾಗಿ ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ ಮುಂದಾಗಿರುವ ಬೆನ್ನಲ್ಲೇ ಇದೀಗ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಈ ಬಾರಿ ಅಸಮಾಧಾನಿತ ನಾಯಕರಿಗೂ ಸ್ಥಾನ ನೀಡಲಾಗಿದೆ.

ರಾಜ್ಯದಲ್ಲಿ ವಕ್ಫ್​ ಆಸ್ತಿ ವಿವಾದ ಸಂಬಂಧ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ನೈಜ ವರದಿ ಸಂಗ್ರಹಕ್ಕೆ ‘ನಮ್ಮ ಭೂಮಿ - ನಮ್ಮ ಹಕ್ಕು' ಘೋಷವಾಕ್ಯದಡಿ ರಾಜ್ಯ ಬಿಜೆಪಿ ಮೂರು ತಂಡಗಳನ್ನ ರಚನೆ ಮಾಡಿದೆ. ಉಪ ಚುನಾವಣೆ ಸೇರಿದಂತೆ ಯಾವುದಕ್ಕೂ ರೆಬೆಲ್​ ನಾಯಕರನ್ನು ಗಣನೆಗೆ ತೆಗೆದುಕೊಳ್ಳದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ತಂಡದಲ್ಲಿ ಅವರಿಗೆ ಸ್ಥಾನ ನೀಡಿದ್ದಾರೆ.

ಬಿಜೆಪಿಯಿಂದ ಮೂರು ತಂಡ ರಚನೆ (ETV Bharat)

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ನೇತೃತ್ವದ ತಂಡದಲ್ಲಿ ಶಾಸಕ ರಮೇಶ್​ ಜಾರಕಿಹೊಳಿ, ಪ್ರತಿಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದ ತಂಡದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​ ಮತ್ತು ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡದಲ್ಲಿ ಮಾಜಿ ಸಂಸದ ಅರವಿಂದ ಲಿಂಬಾವಳಿಗೆ ಸ್ಥಾನ ನೀಡಲಾಗಿದೆ. ‘ನಮ್ಮ ಭೂಮಿ-ನಮ್ಮ ಹಕ್ಕು' ಘೋಷವಾಕ್ಯದಡಿ ರಚನೆಯಾಗಿರುವ ತಂಡ ಈ ಕೆಳಕಂಡಂತೆ ಇದೆ.

ಬಿ. ವೈ ವಿಜಯೇಂದ್ರ ನೇತೃತ್ವದ ತಂಡ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬೀದರ್ - ಜಗದೀಶ್ ಶೆಟ್ಟರ್, ಕಲಬುರಗಿ-ಭಗವಂತ ಖೂಬಾ, ಯಾದಗಿರಿ-ಡಾ. ಸಿ. ಎನ್. ಅಶ್ವಥ್ ನಾರಾಯಣ, ರಾಯಚೂರು- ಮುರುಗೇಶ್ ನಿರಾಣಿ, ಕೊಪ್ಪಳ- ಬಿ. ಶ್ರೀರಾಮುಲು, ಗದಗ- ರಮೇಶ್ ಜಾರಕಿಹೊಳಿ, ವಿಜಯಪುರ- ಈರಣ್ಣ ಕಡಾಡಿ, ಬಾಗಲಕೋಟೆ-ಹಾಲಪ್ಪ ಆಚಾರ್, ಸುನೀಲ್ ವಲ್ಯಾಪುರೆ, ಎಂ. ಬಿ ಜಿರಲಿ, ವಕೀಲರು, ಪಿ. ರಾಜೀವ್- ಸಂಚಾಲಕರು, ಅರುಣ್ ಶಹಾಪುರ, ಹರೀಶ್ ಪೂಂಜಾ, ಡಾ. ಶೈಲೇಂದ್ರ ಬೆಲ್ದಾಳೆ- ಸಂಯೋಜಕರು.

ಬಿಜೆಪಿಯಿಂದ ಮೂರು ತಂಡ ರಚನೆ (ETV Bharat)

ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ತಂಡ : ಚಾಮರಾಜನಗರ - ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ನಗರ/ ಗ್ರಾಮಾಂತರ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಂಡ್ಯ- ಬಸನಗೌಡ ಪಾಟೀಲ್ ಯತ್ನಾಳ್, ಹಾಸನ- ರಾಜೂಗೌಡ, ಕೊಡಗು-ಎಂ. ಪಿ ರೇಣುಕಾಚಾರ್ಯ, ದಕ್ಷಿಣ ಕನ್ನಡ- ಎನ್. ಮಹೇಶ್, ಉಡುಪಿ- ದೊಡ್ಡನಗೌಡ ಪಾಟೀಲ್, ಚಿಕ್ಕಮಗಳೂರು- ಭಾರತಿ ಶೆಟ್ಟಿ, ಶಿವಮೊಗ್ಗ- ಬಿ. ಸಿ ನವೀನ್‌ ಕುಮಾರ್, ಉತ್ತರ ಕನ್ನಡ- ವಸಂತಕುಮಾರ್, ವಕೀಲರು, ಸಂಚಾಲಕರು- ಜೆ. ಪ್ರೀತಂ ಗೌಡ, ಸಂಯೋಜಕರು ವಿನಯ್ ಬಿದರೆ, ಡಿ. ಎಸ್. ಅರುಣ್, ಲಕ್ಷ್ಮೀ ಅಶ್ವಿನ್ ಗೌಡ.

ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ : ರಾಮನಗರ- ಮಾಜಿ ಸಿಎಂ ಡಿ. ವಿ ಸದಾನಂದಗೌಡ, ಬೆಂಗಳೂರು ಗ್ರಾಮಾಂತರ ಕೇಂದ್ರ ಸಚಿವ ವಿ. ಸೋಮಣ್ಣ, ಕೋಲಾರ- ಸಿ. ಟಿ ರವಿ, ಚಿಕ್ಕಬಳ್ಳಾಪುರ- ನಳೀನ್‌ ಕುಮಾರ್ ಕಟೀಲ್, ತುಮಕೂರು- ಅರವಿಂದ ಲಿಂಬಾವಳಿ, ಮಧುಗಿರಿ- ಎಸ್​. ಮುನಿಸ್ವಾಮಿ, ಚಿತ್ರದುರ್ಗ- ಆರಗ ಜ್ಞಾನೇಂದ್ರ, ದಾವಣಗೆರೆ- ಬಿ. ಸಿ ಪಾಟೀಲ್​, ಹಾವೇರಿ- ವೈ. ಎ ನಾರಾಯಣಸ್ವಾಮಿ, ವಿವೇಕ್ ಸುಬ್ಬಾರೆಡ್ಡಿ, ವಕೀಲರು, ಸಂಚಾಲಕರು. ವಿ. ಸುನೀಲ್​ ಕುಮಾರ್​, ಸಂಯೋಜಕರು ಅಶ್ವಥ್​ ನಾರಾಯಣ, ತಮ್ಮೇಶ್​ಗೌಡ, ಹಾಗೂ ಅಂಬಿ ಹುಲಿನಾಯ್ಕರ್.

ಇದನ್ನೂ ಓದಿ :ವಕ್ಫ್ ಬೋರ್ಡ್​ನಿಂದ ರೈತರ ಜಮೀನಿಗೆ ನೋಟಿಸ್ ಆರೋಪ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ

Last Updated : Nov 15, 2024, 10:50 PM IST

ABOUT THE AUTHOR

...view details