ಬೆಂಗಳೂರು: ಲೋಕಸಭೆ ಚುನಾವಣೆಗೆ ಸಿದ್ದತಾ ಕಾರ್ಯ ಆರಂಭಿಸಿರುವ ಬಿಜೆಪಿ ಇದೀಗ ರಾಜ್ಯ ಚುನಾವಣಾ ಉಸ್ತುವಾರಿ, ಲೋಕಸಭಾ ಕ್ಷೇತ್ರ ಉಸ್ತುವಾರಿ ಮತ್ತು ಸಂಚಾಲಕರ ತಂಡವನ್ನು ರಚಿಸಿದ್ದು, ಹೊಸ ತಂಡ ರಚಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೂಚನೆ ಮೇರೆಗೆ ಆದೇಶ ಹೊರಡಿಸಲಾಗಿದೆ.
ಕರ್ನಾಟಕದ ಚುನಾವಣಾ ಪ್ರಭಾರಿಗಳ ನೇಮಕಗೊಳಿಸಿ ಬಿಜೆಪಿ ಹೈಕಮಾಂಡ್ ಆದೇಶಿಸಿದೆ. ಸಂಸದ ರಾಧಾಮೋಹನ್ ದಾಸ್ ಅಗರ್ ವಾಲ್ ಅವರನ್ನು ರಾಜ್ಯ ಚುನಾವಣಾ ಪ್ರಭಾರಿಯಾಗಿ ನೇಮಿಸಿದ್ದು, ಸಹ ಪ್ರಭಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೂಚನೆ ಮೇರೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ:
- ಮೈಸೂರು: ಉಸ್ತುವಾರಿ ಅಶ್ವತ್ಥನಾರಾಯಣ್, ಸಂಚಾಲಕರು ರವಿಶಂಕರ್ ಹಾಗೂ ರಾಬಿನ್ ದೇವಯ್ಯ.
- ಚಾಮರಾಜನಗರ: ಎಂವಿ ಪನೀಶ್, ಮಲ್ಲಿಕಾರ್ಜುನಪ್ಪ.
- ಮಂಡ್ಯ: ಸುನಿಲ್ ಸುಬ್ರಮಣಿ- ಸಿ.ಪಿ ಉಮೇಶ್.
- ಹಾಸನ: ಎಂಕೆ ಪ್ರಾಣೇಶ್, ಪ್ರಸನ್ನ.
- ದಕ್ಷಿಣ ಕನ್ನಡ: ಕೋಟಾ ಶ್ರೀನಿವಾಸ್ ಪೂಜಾರಿ, ನಿತಿನ್ ಕುಮಾರ್.
- ಉಡುಪಿ ಚಿಕ್ಕಮಗಳೂರು: ಆರಗ ಜ್ಞಾನೇಂದ್ರ, ಕುಟ್ಯಾರು ನವೀನ್ ಶೆಟ್ಟಿ, ರವೀಂದ್ರ ಬೆಳವಾಡಿ.
- ಶಿವಮೊಗ್ಗ: ರಘುಪತಿ ಭಟ್, ಗಿರೀಶ್ ಪಟೇಲ್.
- ಉತ್ತರ ಕನ್ನಡ: ಹರತಾಳು ಹಾಲಪ್ಪ, ಗೋವಿಂದ ನಾಯಕ್.
- ಧಾರವಾಡ: ಈರಣ್ಣ ಕಡಾಡಿ, ನಾಗರಾಜ್.
- ಹಾವೇರಿ: ಅರವಿಂದ್ ಬೆಲ್ಲದ್, ಕಳಕಪ್ಪ ಬಂಡಿ.
- ಚಿಕ್ಕೋಡಿ: ಅಭಯ್ ಪಾಟೀಲ್, ರಾಜೇಶ್ ನೆರ್ಲಿ.
- ಬಾಗಲಕೋಟೆ: ಲಿಂಗಾರಾಜು ಪಾಟೀಲ್, ಸಿದ್ದು ಸವದಿ.
- ವಿಜಯಪುರ: ರಾಜಶೇಖರ್ ಶೀಲವಂತ್, ಅರುಣ್ ಶಹಪುರ.
- ಬೀದರ್: ಅಮರನಾಥ್ ಪಾಟೀಲ್, ಅರಹಂತ ಸಾವ್ಲೆ.
- ಕಲಬುರಗಿ: ರಾಜುಗೌಡ, ಶೋಭಾ ಬನಿ.
- ರಾಯಚೂರು: ದೊಡ್ಡನ ಗೌಡ ಪಾಟೀಲ್, ಗುರು ಕಾಮ.
- ಕೊಪ್ಪಳ: ರಘುನಾಥ್ ರಾವ್ ಮಲ್ಕಾಪುರೆ, ಗಿರಿಗೌಡ.
- ಬಳ್ಳಾರಿ: ಎನ್ ರವಿಕುಮಾರ್, ವೈಎಂ ಸತೀಶ್.
- ದಾವಣಗೆರೆ: ಬೈರತಿ ಬಸವರಾಜ್, ವೀರೇಶ್ ಹನಗವಾಡಿ.
- ಚಿತ್ರದುರ್ಗ: ಚನ್ನಬಸಪ್ಪ, ಲಿಂಗಮಮೂರ್ತಿ.
- ತುಮಕೂರು: ಗೋಪಾಲಯ್ಯ, ಬೈರಣ್ಣ.
- ಚಿಕ್ಕಬಳ್ಳಾಪುರ: ಕಟ್ಟಾಸುಬ್ರಮಣ್ಯ ನಾಯ್ಡು, ಎವಿ ನಾರಾಯಣಸ್ವಾಮಿ.
- ಕೋಲಾರ: ಬಿ. ಸುರೇಶ್ ಗೌಡ, ಮೈಗೇರಿ ನಾರಾಯಣಸ್ವಾಮಿ.
- ಬೆಂಗಳೂರು ಗ್ರಾಮಾಂತರ: ನಿರ್ಮಲ ಕುಮಾರ್ ಸುರಾನಾ, ಮುನಿರತ್ನ.
- ಬೆಂಗಳೂರು ದಕ್ಷಿಣ: ಎಂ ಕೃಷ್ಣಪ್ಪ, ಉಮೇಶ್ ಶೆಟ್ಟಿ.
- ಬೆಂಗಳೂರು ಕೇಂದ್ರ: ಗುರುರಾಜ್ ಗಂಟಿಹೊಳೆ, ಗೌತಮ್ ಕುಮಾರ್ ಜೈನ್.
- ಬೆಂಗಳೂರು ಉತ್ತರ: ಎಸ್ಆರ್ ವಿಶ್ವನಾಥ್, ಸಚ್ಚಿದಾನಂದ ಮೂರ್ತಿ.
ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಚುನಾವಣಾ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳನ್ನು ಬಿಜೆಪಿ ನೇಮಕ ಮಾಡಿದೆ.
ಇದನ್ನೂ ಓದಿ:ಲೋಕಸಭೆಯಲ್ಲಿ ಗೆದ್ದು ರಾಜ್ಯ ವಿಧಾನಸಭೆಯಲ್ಲೂ ಕಮಲ ಅರಳಿಸಬೇಕು: ಭೂಪೇಂದ್ರ ಯಾದವ್