ಹುಬ್ಬಳ್ಳಿ:ಲೋಕಸಭಾ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಲೋಕ ಚುನಾವಣೆ ಕಾವು ನಿಧಾನಕ್ಕೆ ಏರುತ್ತಿದ್ದಂತೆ ಪ್ರಚಾರದ ಭರಾಟೆ ಸಹ ವೇಗ ಪಡೆಯುತ್ತಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ದೇಶಾದ್ಯಂತ ಬೈಕ್ ಸಂಚಾರ ಆರಂಭಿಸಿರುವ ತಮಿಳುನಾಡಿನ ಬುಲೆಟ್ ರಾಣಿ ರಾಜಲಕ್ಷ್ಮಿ ಮಂದಾಜೀ ಇಂದು (ಸೋಮವಾರ) ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ್ದರು. ಈಗಾಗಲೇ 4,600 ಕಿಲೋ ಮೀಟರ್ ಕ್ರಮಿಸಿರುವ ಅವರು ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ಕೈಗೊಂಡಿದ್ದಾರೆ.
ದೇಶಾದ್ಯಂತ 15 ರಾಜ್ಯಗಳನ್ನು ಸಂಪರ್ಕಿಸಿ 21 ಸಾವಿರ ಕಿಲೋ ಮೀಟರ್ ಕ್ರಮಿಸುವ ಗುರಿಯೊಂದಿಗೆ ತಮಿಳುನಾಡಿನ ಮಧುರೈನಿಂದ ಫೆ. 12 ರಿಂದ ಬುಲೆಟ್ ರಾಣಿ ರಾಜಲಕ್ಷ್ಮಿ ಮಂದಾಜೀ ನೇತೃತ್ವದಲ್ಲಿ ಬೈಕ್ ರ‍್ಯಾಲಿ ಆರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ಕೈಗೊಂಡಿರುವ 22 ಜನರ ತಂಡವು ಇಂದು ಹುಬ್ಬಳ್ಳಿ ನಗರಕ್ಕೆ ಆಗಮಿಸಿ, ಮತ್ತೊಮ್ಮೆ ಮೋದಿ ಆಯ್ಕೆಗೆ ಸಹಕರಿಸಬೇಕೆಂದು ಜನರಲ್ಲಿ ಮನವಿ ಮಾಡಿತು. ನಗರದ ಪ್ರವಾಸಿ ಮಂದಿರದಲ್ಲಿ ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ರಾಜಲಕ್ಷ್ಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಬಿಳ್ಕೋಟ್ಟರು. ಈ ವೇಳೆ ನಗರದ ವಿವಿಧೆಡೆ ಸಂಚರಿಸಿದ ತಂಡ ಪ್ರಧಾನಿ ಮೋದಿ ಆಡಳಿತದ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಿದರು.
ಈ ಕುರಿತು ರಾಜಲಕ್ಷ್ಮಿ ಅವರು ಮಾತನಾಡಿ, ''ದೇಶದಲ್ಲಿ ಬಡವರ ಬಗ್ಗೆ ಕಾಳಿಜಿಯನ್ನು ಮೋದಿ ವಹಿಸಿದ್ದಾರೆ. ದೇಶದ ರಕ್ಷಣೆಯಲ್ಲಿ ಪ್ರಧಾನಿ ಮೋದಿ ಅವರ ಪಾತ್ರ ಬಹಳ ದೊಡ್ಡದು, ಮಹಿಳೆಯರ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು'' ಎಂದು ಹೇಳಿದರು.