ಕರ್ನಾಟಕ

karnataka

ETV Bharat / state

ಬೆಂಗಳೂರು: ಗ್ರೀನ್‌ ಕಾರಿಡಾರ್‌ನಲ್ಲಿ ಬ್ರೈನ್ ಡೆಡ್‌ ವ್ಯಕ್ತಿಯ ಹೃದಯ, ಶ್ವಾಸಕೋಶ ರವಾನೆ - ಹೃದಯ ಹಾಗೂ ಶ್ವಾಸಕೋಶ ರವಾನೆ

ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟ ವ್ಯಕ್ತಿಯ ಹೃದಯ, ಶ್ವಾಸಕೋಶವನ್ನು ಇಬ್ಬರು ರೋಗಿಗಳಿಗೆ ಕಸಿ ಮಾಡಲು ಸಾಗಿಸುವುದಕ್ಕೆ ಬೆಂಗಳೂರು ಸಂಚಾರ ಪೊಲೀಸರು ನೆರವಾದರು.

ವ್ಯಕ್ತಿಯ ಹೃದಯ ಹಾಗೂ ಶ್ವಾಸಕೋಶ
ವ್ಯಕ್ತಿಯ ಹೃದಯ ಹಾಗೂ ಶ್ವಾಸಕೋಶ

By ETV Bharat Karnataka Team

Published : Feb 29, 2024, 10:53 PM IST

ಬೆಂಗಳೂರು:ಮಿದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ವ್ಯಕ್ತಿಯ ಹೃದಯ ಹಾಗೂ ಶ್ವಾಸಕೋಶವನ್ನು ಅಗತ್ಯವಿರುವ ಇಬ್ಬರು ರೋಗಿಗಳಿಗೆ ಕಸಿಗೊಳಿಸಲು ಸಾಗಿಸಲು ಬೆಂಗಳೂರು ಸಂಚಾರ ಪೊಲೀಸರು ಆ್ಯಂಬುಲೆನ್ಸ್‌ಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.

ಹೆಬ್ಬಾಳದ ಆಸ್ಟರ್ ಸಿ.ಎಮ್.ಐ ಆಸ್ಪತ್ರೆಯಲ್ಲಿ ಮಿದುಳು ನಿಷ್ಕ್ರಿಯವಾಗಿ ಮೃತಪಟ್ಟ ವ್ಯಕ್ತಿಯ ಹೃದಯವನ್ನು ಚೆನ್ನೈನಲ್ಲಿರುವ ಮತ್ತೊಬ್ಬ ರೋಗಿಗೆ ಕಸಿಗಾಗಿ ರವಾನಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಆ್ಯಂಬುಲೆನ್ಸ್​ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಯಿತು. ಅಲ್ಲದೆ ಅದೇ ವ್ಯಕ್ತಿಯ ಶ್ವಾಸಕೋಶವನ್ನು ಜೆ.ಪಿ.ನಗರದ ಆರ್.ವಿ.ಆಸ್ಟರ್ ಆಸ್ಪತ್ರೆಯಲ್ಲಿರುವ ಮತ್ತೊಬ್ಬ ರೋಗಿಗೆ ಕಸಿಗಾಗಿ ರವಾನಿಸಲು ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದರು.

ಇದನ್ನೂ ಓದಿ:ಮೆದುಳು ನಿಷ್ಕ್ರೀಯಗೊಂಡು ಯುವಕ ಸಾವು: ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ

ABOUT THE AUTHOR

...view details