ಬೆಂಗಳೂರು:ನಮ್ಮ ಮೆಟ್ರೋ ಹಸಿರು ಮಾರ್ಗ ನಾಗಸಂದ್ರದಿಂದ ಮಾದಾವರದವರೆಗೆ ವಿಸ್ತರಣೆಯಾಗಿದೆ. ಇಂದು ಬೆಳಗ್ಗೆ 6 ಬೋಗಿಗಳ ರೈಲು, ನಿಲ್ದಾಣಕ್ಕೆ ಆಗಮಿಸುವ ಮೂಲಕ ಸಿಗ್ನಲ್ ಪರೀಕ್ಷೆ ನಡೆಯಿತು. ಸದ್ಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರ ನಡೆಸಲಾಗಿದೆ.
ನಮ್ಮ ಮೆಟ್ರೋ ಗ್ರೀನ್ ಲೇನ್ ವಿಸ್ತರಣಾ ಮಾರ್ಗದ ಪ್ರಾಯೋಗಿಕ ಸಂಚಾರ ಯಶಸ್ವಿ - Namma Metro Green Line - NAMMA METRO GREEN LINE
ನಮ್ಮ ಮೆಟ್ರೋ ಗ್ರೀನ್ ಲೇನ್ ವಿಸ್ತರಣಾ ಮಾರ್ಗದ ಪ್ರಾಯೋಗಿಕ ಸಂಚಾರ ಇಂದು ಯಶಸ್ವಿಯಾಯಿತು.
ನಮ್ಮ ಮೆಟ್ರೋ ಗ್ರೀನ್ ಲೇನ್ ವಿಸ್ತರಣಾ ಮಾರ್ಗದ ಪ್ರಾಯೋಗಿಕ ಸಂಚಾರ (ETV Bharat)
Published : Aug 18, 2024, 5:38 PM IST
ಈ ಕುರಿತು ನಮ್ಮ ಮೆಟ್ರೋ ತನ್ನ 'ಎಕ್ಸ್' ಖಾತೆಯಲ್ಲಿ, 'ರೀಚ್ 3ಸಿ ವಿಸ್ತ್ರತ ಮಾರ್ಗದ ಮಾದಾವರ ಮತ್ತು ನಾಗಸಂದ್ರ ನಡುವಿನ ಮೊದಲ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಇಂದು 3.14 ಕಿ.ಮೀ ನಡುವೆ 6 ಬೋಗಿಗಳ ಮೆಟ್ರೋ ರೈಲು ಕನಿಷ್ಠ 5 ಕಿ.ಮೀ ವೇಗದಿಂದ ಗರಿಷ್ಠ 35 ಕಿ.ಮೀ ವೇಗದಲ್ಲಿ ಚಲಿಸಿ ಪರೀಕ್ಷೆ ನಡೆಯಿತು' ಎಂದು ತಿಳಿಸಿದೆ.
ಇದನ್ನೂ ಓದಿ:ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಾಯೋಗಿಕ ಸಂಚಾರ ಆರಂಭ, ಚಾಲಕರಹಿತ ರೈಲು ಓಡಾಟ! - Namma Metro Yellow Line