ಬೆಂಗಳೂರು:ಎಂಟು ವಲಯಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 50 ಸುಸ್ತಿದಾರರ ಪಟ್ಟಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆ ಮಾಡಿದೆ. ಸ್ಟಾರ್ ಹೋಟೆಲ್ಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು, ಟೆಕ್ ಪಾರ್ಕ್ಗಳು, ಐಟಿ ಕಂಪನಿಗಳು ಮತ್ತು ಶಾಪಿಂಗ್ ಮಾಲ್ಗಳು ಪಾಲಿಕೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿದ್ದು, 400 ತೆರಿಗೆ ಸುಸ್ತಿದಾರರಿಂದ ಒಟ್ಟು 130.79 ಕೋಟಿ ರೂಪಾಯಿ ಹಣ ಪಾಲಿಕೆಗೆ ಬರಬೇಕಿದೆ.
ಸುಸ್ತಿದಾರರ ಪಟ್ಟಿ:
ಪಶ್ಚಿಮ ವಲಯ - ಅಭಿಷೇಕ್ ಡೆವಲಪರ್ಸ್ 33.88 ಕೋಟಿ ರೂಪಾಯಿ, ಶ್ರೀನಿವಾಸ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ 11.59 ಕೋಟಿ ರೂಪಾಯಿ
ದಾಸರಹಳ್ಳಿ ವಲಯ - ಟಿ. ಎನ್. ವೆಂಕಟೇಶ್ ಮತ್ತು ವಿ.ಪುಷ್ಪಕುಮಾರಿ 11.51 ಕೋಟಿ ರೂಪಾಯಿ
ಪೂರ್ವ ವಲಯ - ಜಿಎಸ್ಟಿಎಎಡಿ ಹೋಟೆಲ್ ಪ್ರೈ ಲಿಮಿಟೆಡ್ 2.75 ಕೋಟಿ ರೂಪಾಯಿ.
ಮಹದೇವಪುರ ವಲಯ- ಬ್ರಿಗೇಡ್ ಫೌಂಡೇಶನ್ 1.46 ಕೋಟಿ ರೂಪಾಯಿ