ಕರ್ನಾಟಕ

karnataka

ETV Bharat / state

ಸೂರ್ಯ ಚಂದ್ರರಿರುವವರೆಗೂ ಬಸವಣ್ಣನವರ ವಚನಗಳು ಮನುಕುಲಕ್ಕೆ ದಾರಿದೀಪ: ವಿಜಯೇಂದ್ರ - Basaveshwar Jayanti 2024

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಬಸವ ಜಯಂತಿ ಆಚರಿಸಲಾಯಿತು.

Basaveshwar Jayanti 2024
ಬಿಜೆಪಿ ಕಚೇರಿಯಲ್ಲಿ ಬಸವ ಜಯಂತಿ (ETV Bharat)

By ETV Bharat Karnataka Team

Published : May 10, 2024, 12:00 PM IST

ಬಿಜೆಪಿ ಕಚೇರಿಯಲ್ಲಿ ಬಸವ ಜಯಂತಿ (ETV Bharat)

ಬೆಂಗಳೂರು: ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ ಆಗಿದ್ದು, ಸೂರ್ಯ ಚಂದ್ರರು ಎಲ್ಲಿವರೆಗೂ ಇರುತ್ತಾರೋ ಅಲ್ಲಿಯವರೆಗೂ ಬಸವೇಶ್ವರರ ವಚನಗಳು ನಮ್ಮ ಜೀವನಕ್ಕೆ ದಾರಿದೀಪವಾಗಿರಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ವಿಜಯೇಂದ್ರ ಅವರು, ನಾಡಿನ ಸಮಸ್ತ ಜನತೆಗೆ ಮಹಾ ಮಾನವತಾವಾದಿ ಬಸವೇಶ್ವರ ಜಯಂತಿಯ ಶುಭ ಕೋರಿದರು. ಜಗತ್ತಿನಲ್ಲೇ ಪ್ರಥಮ ಸಂಸತ್ತನ್ನು ಸ್ಥಾಪನೆ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲಲಿದೆ. 12ನೆಯ ಶತಮಾನದಲ್ಲಿಯೇ ಬಸವಣ್ಣನವರ ಕನಸು ಸಮಸಮಾಜ ನಿರ್ಮಾಣ ಮಾಡಬೇಕು ಎನ್ನುವುದಾಗಿತ್ತು. ಹಾಗಾಗಿ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ಸಿಗುವಂತೆ ಮಾಡುವ ಜೊತೆಗೆ ಸ್ತ್ರೀ ಸಮಾನತೆಗೆ ಭದ್ರ ಬುನಾದಿಯನ್ನು 12ನೇ ಶತಮಾನದಲ್ಲಿಯೇ ಹಾಕಿದ್ದರು ಎಂದು ಸ್ಮರಿಸಿದರು.

ಇಂದು ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನಾಡಿನ ಬಸವಣ್ಣನವರನ್ನು ಸ್ಮರಿಸುತ್ತಾರೆ. ಅವರ ವಚನಗಳನ್ನು ಮೆಲುಕು ಹಾಕುವ ಕೆಲಸವನ್ನು ಮೋದಿ ಮಾಡುತ್ತಾರೆ. 12ನೇ ಶತಮಾನದಲ್ಲಿ ಕೇವಲ ಭಾರತ ಮಾತ್ರವಲ್ಲ ಇಡೀ ಜಗತ್ತು ವಿಶ್ವ ನಾಯಕ ಎಂದು ಬಸವೇಶ್ವರರನ್ನು ಒಪ್ಪಿಕೊಂಡಿದೆ. ಇಂತಹ ನಾಯಕರ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ. ಇದು ಬಹಳ ಸಂತೋಷ ತರುವ ವಿಚಾರವಾಗಿದೆ ಎಂದರು.

ಇದನ್ನೂ ಓದಿ:ಎಸ್ಎಸ್ಎಲ್​​ಸಿ ಫಲಿತಾಂಶ: ಹಾವೇರಿಗೆ ಸಿಂಚನಾ ಫಸ್ಟ್ ರ‍್ಯಾಂಕ್‌ - SSLC Result

ಬಸವಣ್ಣನವರ ವಚನಗಳು ಬಹಳ ಅರ್ಥಪೂರ್ಣವಾಗಿವೆ. ಅವರ ನಿಜ ಜೀವನದಲ್ಲಿನ ಅನುಭವಗಳನ್ನು ವಚನಗಳ ಮೂಲಕ ಸಾಮಾನ್ಯ ಜನರಿಗೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ನಾಡಿಗೆ, ದೇಶಕ್ಕೆ ಹಾಗೂ ಜಗತ್ತಿಗೆ ವಚನಗಳನ್ನು ಕೊಟ್ಟಿದ್ದಾರೆ. ಸೂರ್ಯ ಚಂದ್ರ ಇರೋವರೆಗೂ ಬಸವೇಶ್ವರರ ವಚನಗಳು ನಮಗೆ ಬೆಳಕಾಗಲಿದೆ ಎಂದು ತಿಳಿಸಿದರು.

ABOUT THE AUTHOR

...view details