ಕರ್ನಾಟಕ

karnataka

By ETV Bharat Karnataka Team

Published : Sep 6, 2024, 8:24 PM IST

ETV Bharat / state

ವಿಶೇಷ ಗಣೇಶ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದ ಪುತ್ತೂರಿನ ವಿಶಿಷ್ಟ ಕಲಾವಿದ - Ganesha artwork

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಕಲಾವಿದ ಪ್ರವೀಣ್ ವರ್ಣಕುಟೀರ ಎಂಬುವವರು ತಮ್ಮ ಕಲಾ ನೈಪುಣ್ಯತೆಯ ಮೂಲಕ ವಿಭಿನ್ನ ಗಣೇಶನ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಅತ್ಯಂತ ನಾಜೂಕಿನ ವಸ್ತುಗಳನ್ನ ಬಳಸಿಕೊಂಡು ಗಣೇಶನ ಮೂರ್ತಿಗಳನ್ನ ತಯಾರಿಸುವುದು ಇವರ ಸ್ಪೆಷಾಲಿಟಿಯಾಗಿದೆ.

praveen varna kuteera
ಕಲಾವಿದ ಪ್ರವೀಣ್ ವರ್ಣಕುಟೀರ (ETV Bharat)

ಕಲಾವಿದ ಪ್ರವೀಣ್ ವರ್ಣಕುಟೀರ ಮಾತನಾಡಿದರು (ETV Bharat)

ಪುತ್ತೂರು (ದಕ್ಷಿಣಕನ್ನಡ) : ಗಣೇಶ ಹಬ್ಬ ಬಂತೆಂದರೆ ಸಾಕು ಎಲ್ಲರಲ್ಲೂ ಸಂಭ್ರಮ. ಪ್ರತಿವರ್ಷದ ಗಣೇಶ ಚತುರ್ಥಿಯಂದು ಏನಾದರೂ ಹೊಸತನ ಮಾಡಬೇಕು ಎನ್ನುವ ಹಂಬಲ ಎಲ್ಲರಲ್ಲೂ ಇರುತ್ತದೆ. ಅದೇ ರೀತಿಯ ಹೊಸತನವನ್ನು ತನ್ನ ಕಲಾ ಚಾತುರ್ಯದ ಮೂಲಕ ಮೂಡಿಸುತ್ತಾ ಬರುತ್ತಿದ್ದಾರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕಲಾವಿದ ಪ್ರವೀಣ್ ವರ್ಣಕುಟೀರ.

ಪ್ರತಿಭಾನ್ವಿತ ಕಲಾಕಾರನಾಗಿರುವ ಪ್ರವೀಣ್ ವರ್ಣಕುಟೀರ ಕಳೆದ ಹಲವು ವರ್ಷಗಳಿಂದ ಕಲಾಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಅದರಲ್ಲೂ ಗಣೇಶ ಚತುರ್ಥಿ ಬಂತೆಂದರೆ ಸಾಕು ಇವರ ಕೈಚಳಕದಲ್ಲಿ ಹಲವು ಭಂಗಿಗಳ ಗಣೇಶನ ಕಲಾಕೃತಿಗಳು ಮೂಡಿ ಬರುತ್ತವೆ.

ಗಣಪತಿ ಕಲಾಕೃತಿ (ETV Bharat)

ಅದರಲ್ಲೂ ಅತ್ಯಂತ ನಾಜೂಕಿನ ವಸ್ತುಗಳನ್ನೇ ಬಳಸಿಕೊಂಡು ಗಣೇಶನ ಕಲಾಕೃತಿಗಳನ್ನು ತಯಾರಿಸೋದು ಇವರ ಸ್ಪೆಷಾಲಿಟಿ. ಅಕ್ಕಿ ಕಾಳಿನಲ್ಲಿ, ಪೆನ್ಸಿಲ್ ತುದಿಯ ಚಾರ್ಕೋಲಿನಲ್ಲಿ, ಬಿದಿರಿನಲ್ಲಿ, ಫೋಮ್ಸ್, ಗಾಜು ಹೀಗೆ ಎಲ್ಲಾ ವಸ್ತುಗಳನ್ನು ಬಳಸಿ ಪ್ರವೀಣ್ ಗಣೇಶನ ಕಲಾಕೃತಿಯನ್ನು ತಯಾರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ‌ ಬಾರಿ ಮರದ ಮುಚ್ಚಳ (ಕೋರ್ಕ್) ಬಳಸಿ ವಿವಿಧ ಭಂಗಿಯ ಗಣೇಶನ ಕಲಾಕೃತಿಗಳನ್ನು ಸಿದ್ಧಪಡಿಸಿದ್ದಾರೆ. ಕೋರ್ಕ್ ನಲ್ಲಿ ಗಣೇಶನ ಕೆತ್ತನೆ ಅತ್ಯಂತ ನಾಜೂಕು‌ ಹಾಗೂ ಕಷ್ಟದ ಕೆಲಸವಾಗಿದ್ದು, ಇದರ ಒಂದು ಪಾರ್ಶ್ವದಲ್ಲಿ ಮಾತ್ರವೇ ಆಕೃತಿಗಳನ್ನು ಮಾಡಬಹುದಾಗಿದೆ.

ನೈಸರ್ಗಿಕ ಬಣ್ಣ ಬಳಕೆ :ಕೋರ್ಕ್​ಗಳನ್ನು ತನ್ನ ಅಗತ್ಯಕ್ಕೆ ಅನುಗುಣವಾಗಿ ಮೊದಲು ಸಿದ್ಧಪಡಿಸಿ, ಬಳಿಕ ಅವುಗಳನ್ನು ಜೋಡಿಸಿ ಸುಂದರ ಲಂಬೋಧರನನ್ನು ತಯಾರಿಸಿದ್ದಾರೆ. ಕಲಾಕೃತಿಗಳು ಇನ್ನಷ್ಟು ಆಕರ್ಷಕವಾಗಿ‌ ಮಾಡುವ ಉದ್ಧೇಶದಿಂದ ಈ ಕಲಾಕೃತಿಗಳಿಗೆ ಚೆನ್ನಪಟ್ಟಣದ ಗೊಂಬೆಗಳಿಗೆ ಬಳಸುವ ನೈಸರ್ಗಿಕ ಬಣ್ಣಗಳನ್ನು ಬಳಿದಿದ್ದಾರೆ.

ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಈ ಕಲಾಕೃತಿಗಳನ್ನು ತಯಾರಿಸಲಾಗಿದೆ‌. ಪ್ರತಿವರ್ಷ ಗಣೇಶನನ್ನು ಹೊಸ ಹೊಸ ವಸ್ತುಗಳನ್ನು ಆರಿಸಿ ಸಿದ್ಧಪಡಿಸುತ್ತಾರೆ. ಕಲಾವಿದರಿಗೆ ಗಣೇಶ ಅತ್ಯಂತ ಪ್ರಿಯವಾದ ದೇವರಾಗಿದ್ದು, ಪ್ರವೀಣ್ ವರ್ಣಕುಟೀರ ಕೂಡಾ ಗಣೇಶನ ಓರ್ವ ಗ್ರೇಟ್ ಫ್ಯಾನ್ ಆಗಿದ್ದಾರೆ.

ಇದನ್ನೂ ಓದಿ :ಕಡಲ ನಗರಿಯಲ್ಲಿ‌ ಕಳೆಗಟ್ಟಿದ ಗಣೇಶೋತ್ಸವ; ಅದ್ದೂರಿ ಆಚರಣೆಗೆ ಭರದ ಸಿದ್ಧತೆ - Ganesha festival

ABOUT THE AUTHOR

...view details