ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿದೆ.
ಪ್ರಕರಣ ದಾಖಲಾದ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲ್ಯೂ ಕಾರ್ನರ್ ಹೊರಡಿಸಿದ್ದರೂ ಪತ್ತೆಯಾಗಿರಲಿಲ್ಲ. ರೆಡ್ ಕಾರ್ನರ್ ನೋಟಿಸ್ ನೀಡಲು ಕಾನೂನು ಪ್ರಕ್ರಿಯೆ ಅಡ್ಡಿಯಾಗಿತ್ತು. ಈವರೆಗೂ ಕೈಗೊಂಡ ಕಾನೂನು ಕ್ರಮಗಳ ಬಗ್ಗೆ ಕೋರ್ಟ್ಗೆ ಎಸ್ಐಟಿ ಮನವರಿಕೆ ಮಾಡಿತ್ತು. ಹೊರಡಿಸಲಾದ ಲುಕ್ ಔಟ್ ನೋಟಿಸ್ ಹಾಗೂ ಬ್ಲ್ಯೂ ಕಾರ್ನರ್ ನೋಟಿಸ್ಗಳ ಬಗ್ಗೆ ತಿಳಿಸಿ ಪ್ರಸ್ತಕ ಚಾರ್ಜ್‌ಶೀಟ್ ಸಲ್ಲಿಕೆ ಅವಶ್ಯಕತೆ ಇಲ್ಲ ಎಂದು ಎಸ್ಐಟಿ ವಿಸ್ತಾರವಾಗಿ ತಿಳಿಸಿತ್ತು. ಇದನ್ನ ಮನಗಂಡ ನ್ಯಾಯಾಲಯವು ಪ್ರಜ್ವಲ್ ವಿರುದ್ಧ ಅರೆಸ್ಟ್ ವಾರಂಟ್ ಅದೇಶ ಹೊರಡಿಸಿದೆ.
ಆದೇಶ ಹೊರಡಿಸಿದ್ದರಿಂದ ಏಕಾಏಕಿ ರೆಡ್ ಕಾರ್ನರ್ ನೊಟೀಸ್ ಹೊರಡಿಸಲು ಸಾಧ್ಯವಿಲ್ಲ. ಈ ನೊಟೀಸ್ ಜಾರಿ ಮಾಡಬೇಕಾದರೆ ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲೇಬೇಕಿದೆ. ಎಸ್ಐಟಿಗೆ ರೇವಣ್ಣ ವಿರುದ್ಧ ಕಾನೂನಿನ ಅಸ್ತ್ರವಾಗಿದೆ ಹೊರತು ವಿದೇಶದಲ್ಲಿರುವಾಗಲೇ ಬಂಧನಕ್ಕೆ ಅವಕಾಶವಿಲ್ಲ.. ದೇಶದ ಗಡಿಯೊಳಗೆ ಬಂದಾಗವಷ್ಟೇ ಪ್ರಜ್ವಲ್ ನನ್ನ ಬಂಧಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಜ್ವಲ್ ಸಂಸದರಾಗಿದ್ದಾಗಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ- ಹೆಚ್ಡಿಕೆ: ನಮ್ಮ ಸಂಪರ್ಕಕ್ಕೂ ಬಂದಿಲ್ಲ, ಕುಟುಂಬದವರಿಗೂ ಮಾಹಿತಿ ಇಲ್ಲ- ಜಿಟಿಡಿ - GT Deve Gowda on Prajwal Revanna
ಲೈಂಗಿಕ ದೌರ್ಜನ್ಯ ಆರೋಪದಡಿ ಹೊಳೆನರಸೀಪುರ ಪೊಲೀಸ್ ಠಾಣೆ ಸೇರಿ ಮೂರು ಠಾಣೆಗಳಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ. ವಿಶೇಷ ತನಿಖಾ ತಂಡ (ಎಸ್ಐಟಿ) ಪ್ರಕರಣದ ತನಿಖೆ ಕೈಗೊಂಡಿದೆ. ಈಗಾಗಲೇ ಸಂತ್ರಸ್ತೆಯ ವಿಚಾರಣೆಯನ್ನು ನಡೆಸಿರುವ ಎಸ್ಐಟಿ, ಸ್ಥಳ ಮಹಜರು ಕಾರ್ಯವನ್ನು ಕೂಡ ಮುಗಿಸಿದೆ. ಸದ್ಯ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣಗಾಗಿ ಎಸ್ಐಟಿ ತಂಡ ಕಾಯುತ್ತಿದೆ.