ಧಾರವಾಡ:ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಮೂಡಿಸುವ ದೃಷ್ಟಿಯಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಒಂದು ಹೆಜ್ಜೆ ಮುಂದಿಟ್ಟಿದ್ದು, ನಗರದ ಹಲವೆಡೆ ಪೊಲೀಸರಿಂದ ಏರಿಯಾ ಡಾಮಿನೇಷನ್ ಕಾರ್ಯ ನಡೆಯುತ್ತಿದೆ.
ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಏರಿಯಾ ಡಾಮಿನೇಷನ್ ನಡೆದಿದೆ. ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 243 ಜನರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. 50 ರೌಡಿಶೀಟರ್, 36 MOB, 9 NDPS, ಖಾಲಿ ಜಾಗ, ರಸ್ತೆ ಪಕ್ಕ ಕುಡಿಯುತ್ತ ಕುಳಿತಿದ್ದ 61 ಜನ, ಇತರೆ 18 ಜನ ಸೇರಿ 170 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.