ಕರ್ನಾಟಕ

karnataka

ETV Bharat / state

ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇಮೇಲ್: ಪ.ಬಂಗಾಳದ ಆರೋಪಿ ಬಂಧನ

ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಹಾಗೂ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿರುವ ಬಿಎಂಎಸ್ ಕಾಲೇಜುಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಂಬ್ ಬೆದರಿಕೆ ಮೇಲ್ ರವಾನಿಸಿದ್ದ ಆರೋಪಿ
ಆರೋಪಿ ದೀಪಾಂಜನ್ ಮಿತ್ರಾ (ETV Bharat)

By ETV Bharat Karnataka Team

Published : Oct 18, 2024, 2:41 PM IST

ಬೆಂಗಳೂರು: ಕಾಲೇಜಿನ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್ ಕಳುಹಿಸಿದ್ದ ಆರೋಪಿಯನ್ನು ವಿ.ವಿ.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಿವಾಸಿ ದೀಪಾಂಜನ್ ಮಿತ್ರಾ (48) ಬಂಧಿತ ಆರೋಪಿ.

ಈತ ಅಕ್ಟೋಬರ್​ 4ರಂದು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಹಾಗೂ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿರುವ ಬಿಎಂಎಸ್ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳಿಸಿದ್ದ. ತಾಂತ್ರಿಕ ವಿಧಾನಗಳ ಮೂಲಕ ಇಮೇಲ್ ಕಳುಹಿಸಲಾದ ಐಡಿಯ ಮೂಲ ಬೆನ್ನತ್ತಿದ ಪೊಲೀಸರು ಅ.17ರಂದು ಡಾರ್ಜಿಲಿಂಗ್ ಜಿಲ್ಲೆಯ ಸಾಲ್‌ಬರಿ ಟೌನ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಿ.ಕಾಂ. ವ್ಯಾಸಂಗ ಮಾಡಿರುವ ಈತನ ವಿರುದ್ಧ ಪ.ಬಂಗಾಳದ ವಿವಿಧೆಡೆ ಇದೇ ರೀತಿಯ 10 ಪ್ರಕರಣಗಳು ದಾಖಲಾಗಿವೆ. ಇದೀಗ ಬಂಧಿತನಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಬೆಂಗಳೂರಿಗೆ ಕರೆತರಲು ಸ್ಥಳೀಯ ನ್ಯಾಯಾಲಯದಿಂದ ಟ್ರಾನ್ಸಿಟ್ ವಾರೆಂಟ್​ ಸಿಗದ ಕಾರಣ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಈ ಹಿಂದೆ ಬೆಂಗಳೂರಿನ ವಿವಿಧ ಶಾಲಾ-ಕಾಲೇಜುಗಳಿಗೆ ಬಂದಿರುವ ಬಾಂಬ್‌ ಬೆದರಿಕೆ ಇಮೇಲ್‌ಗಳ ಹಿಂದೆ ಆರೋಪಿಯ ಕೈವಾಡವಿರುವುದರ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಹುಸಿ ಬಾಂಬ್​ ಕರೆ ಮಾಡುವವರನ್ನು 'ನೋ ಫ್ಲೈ ಲಿಸ್ಟ್​'ಗೆ ಸೇರಿಸಲು ಕೇಂದ್ರ ಸರ್ಕಾರ ಚಿಂತನೆ

ABOUT THE AUTHOR

...view details