ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಏರೋ ಇಂಡಿಯಾ ಶೋ: ಈ ರಸ್ತೆಗಳಲ್ಲಿ ಸಂಚಾರ ನಿಷೇಧ - ಬದಲಿ ಮಾರ್ಗ, ಪಾರ್ಕಿಂಗ್ ಸ್ಥಳದ ವಿವರ ಹೀಗಿದೆ - AERO INDIA SHOW

ಏರೋ ಇಂಡಿಯಾ ಹಿನ್ನೆಲೆ ಬೆಂಗಳೂರು ಸಂಚಾರ ಪೊಲೀಸರು ಮುಂಜಾಗ್ರತ ಕ್ರಮವಾಗಿ ಮಾರ್ಗ ಬದಲಾವಣೆ, ಏಕ ಮುಖ ಸಂಚಾರ ಸೇರಿದಂತೆ ತಾತ್ಕಾಲಿಕವಾಗಿ ಕೆಲ ಬದಲಾವಣೆ ಮಾಡಿದ್ದಾರೆ.

ಬೆಂಗಳೂರಲ್ಲಿ ಏರೋ ಇಂಡಿಯಾ, Aero india, Bengaluru Air show
ಬೆಂಗಳೂರಲ್ಲಿ ಏರೋ ಇಂಡಿಯಾ ಹಿನ್ನೆಲೆ ಈ ರಸ್ತೆಗಳಲ್ಲಿ ಸಂಚಾರ ನಿಷೇಧ (IANS)

By ETV Bharat Karnataka Team

Published : Feb 6, 2025, 8:27 AM IST

ಬೆಂಗಳೂರು:ಯಲಹಂಕ ವಾಯುನೆಲೆಯಲ್ಲಿ ಫೆ.10 ರಿಂದ 14ರವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ-2025 ಹಿನ್ನೆಲೆಯಲ್ಲಿ ಸಂಚಾರದಟ್ಟಣೆ ಆಗದಿರಲು ನಗರ ಸಂಚಾರ ಪೊಲೀಸರು ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಏಕಮುಖ ಸಂಚಾರ, ಮಾರ್ಗ ಬದಲಾವಣೆ ಸೇರಿದಂತೆ ತಾತ್ಕಾಲಿಕ ಬದಲಿ ವ್ಯವಸ್ಥೆ ಬಳಸುವಂತೆ ಸವಾರರಿಗೆ ಮನವಿ ಮಾಡಿದ್ದಾರೆ.

ಪೆ.10ರಂದು ಬೆಳಗ್ಗೆ ಏರೋ ಶೋ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಗಣ್ಯರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳವು ಯಲಹಂಕ ವಾಯುಸೇನಾ ನೆಲೆಯ ಅಂತಾರಾಷ್ಟ್ರೀಯ ಏರ್‌ಪೋರ್ಟ್ ರಸ್ತೆಗೆ ಹೊಂದಿಕೊಂಡಿದೆ. ಈ ರಸ್ತೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು, ತುರ್ತು ಸೇವಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡಲಿವೆ. ಆದ್ದರಿಂದ ಸುಗಮ ಸಂಚಾರದ ದೃಷ್ಟಿಯಿಂದ ಫೆ.10ರ ಬೆಳಗ್ಗೆ 5ರಿಂದ ಫೆ. 14ರ ರಾತ್ರಿ 10ವರೆಗೆ ಈ ಕೆಳಕಂಡ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.

ಏಕಮುಖ ಸಂಚಾರ ವ್ಯವಸ್ಥೆ:

  • ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ (ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ)
  • ಬಾಗಲೂರು ಮುಖ್ಯರಸ್ತೆ : (ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ)

ಏರೋ ಇಂಡಿಯಾ ಪಾರ್ಕಿಂಗ್: ಜಿ.ಕೆ.ವಿ.ಕೆ ಕ್ಯಾಂಪಸ್​ನಲ್ಲಿ ಉಚಿತ ಪಾರ್ಕಿಂಗ್

ಜಿಕೆವಿಕೆ ಪಾರ್ಕಿಂಗ್ ಸ್ಥಳದಿಂದ ಅಡ್ವಾ ಪಾರ್ಕಿಂಗ್ (Air Display View Area) ಹಾಗೂ ಡೊಮೆಸ್ಟಿಕ್ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಹಾಗೂ ವಾಪಸ್ ಜಿಕೆವಿಕೆ ಪಾರ್ಕಿಂಗ್ ಸ್ಥಳಕ್ಕೆ ಬರಲು ಬಿಎಂಟಿಸಿ ವತಿಯಿಂದ ಉಚಿತ ಎಸಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಡ್ವಾ ಪಾರ್ಕಿಂಗ್​ಗಾಗಿ (Air Display View Area) 08 & 09 ಹಾಗೂ ಡೊಮೆಸ್ಟಿಕ್ ಪಾರ್ಕಿಂಗ್​​ಗಾಗಿ ಗೇಟ್ ನಂ. 05ರ ಮೂಲಕ ಪ್ರವೇಶಿಸಿ ಹಣ ಪಾವತಿಸಿ ಪಾರ್ಕಿಂಗ್ ಮಾಡಬಹುದಾಗಿದೆ.

ಸೂಚಿಸಲಾದ ಮಾರ್ಗಗಳು :ಬೆಂಗಳೂರು ಪೂರ್ವ ದಿಕ್ಕಿನಿಂದ ಅಡ್ವಾ (Air Display View Area) ಪಾರ್ಕಿಂಗ್ ಕಡೆ ಬರುವವರಿಗೆ ಕೆ.ಆರ್.ಪುರ ನಾಗವಾರ ಜಂಕ್ಷನ್ ಎಡ ತಿರುವು - ಟೆಲಿಕಾಂ ಲೇಔಟ್ ಬೈಪಾಸ್ ಯಲಹಂಕ ಕಾಫಿ ಡೇ ಫೋರ್ಡ್ ಷೋ ರೂಂ ಎಡ ತಿರುವು, ನಿಟ್ಟೇ ಮಿನಾಕ್ಷಿ ಕಾಲೇಜು ರಸ್ತೆ- ಅಡ್ವಾ ಪಾರ್ಕಿಂಗ್.

  • ಬೆಂಗಳೂರು ಪೂರ್ವ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆ ಬರುವವರಿಗೆ: ಕೆ.ಆರ್. ಪುರಂ ಬಾಗಲೂರು ಹೆಣ್ಣೂರು ಕ್ರಾಸ್ ಕೊತ್ತನೂರು - ಗುಬ್ಬಿ ಕ್ರಾಸ್ - ಕಣ್ಣೂರು ಬಾಗಲೂರು ಲೇಔಟ್ ರಜಾಕ್ ಪಾಳ್ಯ ವಿದ್ಯಾನಗರ ಕ್ರಾಸ್ - Domestic Parking.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಅಡ್ವಾ ಪಾರ್ಕಿಂಗ್ ಕಡೆಗೆ ಬರುವವರಿಗೆ:ಗೊರಗುಂಟೆಪಾಳ್ಯ ಉನ್ನಿಕೃಷ್ಣನ್ ರಸ್ತೆ ದೊಡ್ಡಬಳ್ಳಾಪುರ ರಸ್ತೆ ಬಿ.ಇ.ಎಲ್ ವೃತ್ತ - ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್-ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್ ಎಡ ತಿರುವು ನಾಗೇನಹಳ್ಳಿ ಗೇಟ್ ಬಲ ತಿರುವು ಗಂಟಿಗಾನಹಳ್ಳಿ ಸರ್ಕಲ್ ಬಲ ತಿರುವು ಪಡೆದು - ADVA Parking ಹಾರೋಹಳ್ಳಿ.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರಿಗೆ:ಗೊರಗುಂಟೆಪಾಳ್ಯ ಬಿ.ಇ.ಎಲ್ ವೃತ್ತ ಗಂಗಮ್ಮ ವೃತ್ತ ಉನ್ನಿಕೃಷ್ಣನ್ ರಸ್ತೆ ಮದರ್ ಡೈರಿ ಜಂಕ್ಷನ್ – ಉನ್ನಿಕೃಷ್ಣನ್ ಜಂಕ್ಷನ್ ಎಡ ತಿರುವು ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ Domestic Parking. ಬಲ ತಿರುವು ಅದ್ದಿಗಾನಹಳ್ಳಿ ತಿಮ್ಮಸಂದ್ರ ವಿದ್ಯಾನಗರ ಕ್ರಾಸ್ ಯು ತಿರುವು - ಹುಣಸಮಾರನಹಳ್ಳಿ ಮೂಲಕ ಎಂ.ಎಸ್ ಪಾಳ್ಯ ಸರ್ಕಲ್.
  • ಬೆಂಗಳೂರು ದಕ್ಷಿಣ ದಿಕ್ಕಿನಿಂದ ಆಡ್ವಾ ಪಾರ್ಕಿಂಗ್ ಕಡೆಗೆ ಬರುವವರಿಗೆ:ಮೈಸೂರು ರಸ್ತೆ-ನಾಯಂಡನಹಳ್ಳಿ-ಚಂದ್ರಾ ಲೇಔಟ್-ಗೊರಗುಂಟೆಪಾಳ್ಯ-ಬಿ.ಇ.ಎಲ್ ವೃತ್ತ-ಗಂಗಮ್ಮ ವೃತ್ತ-ಎಂ.ಎಸ್ ಪಾಳ್ಯ ಸರ್ಕಲ್-ಮದರ್ ಡೈರಿ ಜಂಕ್ಷನ್ ಉನ್ನಿ ಕೃಷ್ಣನ್ ಜಂಕ್ಷನ್ – ದೊಡ್ಡಬಳ್ಳಾಪುರ ಮುಖ್ಯ ರಸ್ತೆ ನಾಗೇನಹಳ್ಳಿ ಗೇಟ್ -ಬಲ ತಿರುವು -ಹಾರೋಹಳ್ಳಿ - ADVA Parking.
  • ಬೆಂಗಳೂರು ದಕ್ಷಿಣ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರಿಗೆ :ಮೈಸೂರು ರಸ್ತೆ-ನಾಯಂಡನಹಳ್ಳಿ -ಚಂದ್ರಾ ಲೇಔಟ್- ಗೊರಗುಂಟೆಪಾಳ್ಯ -ಬಿ.ಇ.ಎಲ್. ವೃತ್ತ-ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್- ಮದರ್ ಡೈರಿ-ಉನ್ನಿ ಕೃಷ್ಣನ್ ಜಂಕ್ಷನ್ ತಿರುವು ದೊಡ್ಡಬಳ್ಳಾಪುರ ರಸ್ತೆ- ರಾಜಾನುಕುಂಟೆ ಬಲ ತಿರುವು ಅಡ್ಡಿಗಾನಹಳ್ಳಿ ಎಂ.ವಿ.ಐ.ಟಿ ಕ್ರಾಸ್- ವಿದ್ಯಾನಗರ ಕ್ರಾಸ್-ಯು ತಿರುವು ಪಡೆದು Domestic ಹುಣಸಮಾರನಹಳ್ಳಿ.
  • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAL) ಕಡೆಗೆ ತಲುಪಲು ಪರ್ಯಾಯ ಮಾರ್ಗ :
    ಬೆಂಗಳೂರು ಪೂರ್ವ ದಿಕ್ಕಿನಿಂದ :ಕೆ.ಆರ್.ಪುರಂ-ಹೆಣ್ಣೂರು ಕ್ರಾಸ್ -ಕೊತ್ತನೂರು- ಗುಬ್ಬಿ ಕ್ರಾಸ್ ಕಣ್ಣೂರು ಬಾಗಲೂರು ಮೈಲನಹಳ್ಳಿ - ಬೇಗೂರು -ನೈರುತ್ಯ ಪ್ರವೇಶದ್ವಾರದ ಮೂಲಕ- KIAL ತಲುಪಬಹುದು.
  • ಬೆಂಗಳೂರು ಪಶ್ಚಿಮ ದಿಕ್ಕಿನಿಂದ :ಗೊರಗುಂಟೆಪಾಳ್ಯ - ಬಿ.ಇ.ಎಲ್ ವೃತ್ತ ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್ ಮದರ್ ಡೈರಿ ರಾಜಾನುಕುಂಟೆ ಮೂಲಕ ಉನ್ನಿ ಕೃಷ್ಣನ್ ಜಂಕ್ಷನ್ ಎಡ ತಿರುವು ದೊಡ್ಡಬಳ್ಳಾಪುರ ರಸ್ತೆ ಅದ್ದಿಗಾನಹಳ್ಳಿ - ತಿಮ್ಮಸಂದ್ರ ಎಂ.ವಿ.ಐ.ಟಿ ಕ್ರಾಸ್ ವಿದ್ಯಾನಗರ ಕ್ರಾಸ್ KIAL ತಲುಪುವುದು.
  • ಬೆಂಗಳೂರು ದಕ್ಷಿಣ ದಿಕ್ಕಿನಿಂದ : ಮೈಸೂರು ರಸ್ತೆ - ನಾಯಂಡನಹಳ್ಳಿ ಚಂದ್ರಾ ಲೇಔಟ್ - ಗೊರಗುಂಟೆಪಾಳ್ಯ-ಬಿಇಎಲ್ ವೃತ್ತ - ಗಂಗಮ್ಮ ವೃತ್ತ ಎಂ.ಎಸ್ ಪಾಳ್ಯ ಸರ್ಕಲ್ - ಮದರ್‌ಡೈರಿ ಜಂಕ್ಷನ್ ಉನ್ನಿಕೃಷ್ಣನ್ ಜಂಕ್ಷನ್ ಎಡ ತಿರುವು – ದೊಡ್ಡಬಳ್ಳಾಪುರ ರಸ್ತೆ - ರಾಜಾನುಕುಂಟೆ ಅದ್ದಿಗಾನಹಳ್ಳಿ-ಎಂ.ವಿ.ಐ.ಟಿ ಕ್ರಾಸ್ ವಿದ್ಯಾನಗರ ಕ್ರಾಸ್ ಮೂಲಕ KIAL ತಲುಪಬಹುದು.

ಲಾರಿ, ಟ್ರಕ್, ಖಾಸಗಿ ಬಸ್​​​ಗಳು ಹಾಗೂ ಇತರೇ ಭಾರೀ ಸರಕು ಸಾಗಾಣಿಕೆಯ ವಾಹನಗಳ ಸಂಚಾರ ನಿರ್ಬಂಧಿಸಿರುವ ರಸ್ತೆಗಳ ವಿವರ:
ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಮೇಖಿ ವೃತ್ತದಿಂದ-ಎಂವಿಐಟಿ ಕ್ರಾಸ್​ವರೆಗೆ ಮತ್ತು ಎಂ.ವಿ.ಐ.ಟಿ. ಕ್ರಾಸ್​​ನಿಂದ ಮೇದ್ರಿ ವೃತ್ತದ ವರೆಗೆ, ರಸ್ತೆಯ ಎರಡೂ ದಿಕ್ಕಿನಲ್ಲಿ ಸಂಚಾರ ನಿಷೇಧಿಸಲಾಗಿದೆ.

ಗೊರಗುಂಟೆ ಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್​ವರೆಗೆ ರಸ್ತೆಯ ಎರಡು ದಿಕ್ಕಿನಲ್ಲಿ ಮತ್ತು ನಾಗವಾರ ಜಂಕ್ಷನ್‌ನಿಂದ - ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರು ಮುಖ್ಯ ರಸ್ತೆ, ರೇವಾ ಕಾಲೇಜ್ ಜಂಕ್ಷನ್​​ವರೆಗೆ ಹಾಗೂ ಹೆಸರಘಟ್ಟ ಮತ್ತು ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಎಲ್ಲಿಲ್ಲಿ ವಾಹನ ನಿಲುಗಡೆ ನಿಷೇಧ (ಎಲ್ಲಾ ಮಾದರಿಯ ವಾಹನಗಳಿಗೆ ರಸ್ತೆಯ ಎರಡೂ ಬದಿಗಳಲ್ಲಿ):
ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮಾರ್ಗವಾಗಿ ಬೆಂಗಳೂರು -ಬಳ್ಳಾರಿ ರಸ್ತೆಯನ್ನು ಸೇರುವ ಫೋರ್ಡ್ ಷೋರೂಂ ಕ್ರಾಸ್‌ವರೆಗೆ (ಬಿಬಿ ರಸ್ತೆ).

ಬೆಂಗಳೂರು-ಬಳ್ಳಾರಿ ರಸ್ತೆಯ ಮೇಖಿ ಸರ್ಕಲ್ ನಿಂದ ದೇವನಹಳ್ಳಿವರೆಗೆ, ಬಾಗಲೂರು ಕ್ರಾಸ್ ಜಂಕ್ಷನ್​​ನಿಂದ ಬಾಗಲೂರು ಮುಖ್ಯ ರಸ್ತೆಯ ಮಾರ್ಗವಾಗಿ ಸಾತನೂರು, ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ರೇವಾ ಕಾಲೇಜ್ ಜಂಕ್ಷನ್, ಎಫ್‌ಟಿಐ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್ ಜಂಕ್ಷನ್, ಹೆಣ್ಣೂರು ಕ್ರಾಸ್​​ನಿಂದ ಬೇಗೂರು ಬ್ಯಾಕ್ ಗೇಟ್, ನಾಗೇನಹಳ್ಳಿ ಗೇಟ್ ಜಂಕ್ಷನ್​​ನಿಂದ ಯಲಹಂಕ ಸರ್ಕಲ್, ಎಂವಿಐಟಿ ಕ್ರಾಸ್​​ನಿಂದ ನಾರಾಯಣಪುರ ರೈಲ್ವೆ ಕ್ರಾಸ್, ಕೋಗಿಲು ಕ್ರಾಸ್ ಜಂಕ್ಷನ್​ನಿಂದ ಕಣ್ಣೂರು ಜಂಕ್ಷನ್, ಮತ್ತಿಕೆರೆ ಕ್ರಾಸ್​​ನಿಂದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಉನ್ನಿಕೃಷ್ಣನ್ ಜಂಕ್ಷನ್ ಮತ್ತು ಜಾಲಹಳ್ಳಿ ಕ್ರಾಸ್ ಜಂಕ್ಷನ್​​ನಿಂದ ಗಂಗಮ್ಮ ಸರ್ಕಲ್ ಜಂಕ್ಷನ್ ವರೆಗೆ ಪಾರ್ಕಿಂಗ್​ಗೆ ನಿಷೇಧಿಸಲಾಗಿದೆ.

ಕ್ಯೂ ಆರ್ ಕೋಡ್ ಸ್ಕ್ಯಾನ್: ಏರ್ ಶೋ ವೀಕ್ಷಣೆಗೆ ಬರುವವರು ತಮಗೆ ನೀಡಲಾಗಿರುವ ಟಿಕೆಟ್ ಅಥವಾ ಪಾಸ್‌ನ ಕ್ಯೂ ಆರ್ ಕೋಡ್ ಅನ್ನು ಮೊದಲೇ ಸ್ಕ್ಯಾನ್ ಮಾಡಿ ಯಾವ ಗೇಟ್‌ನಿಂದ ಪ್ರವೇಶಿಸಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಂಡು ಪ್ರಯಾಣಿಸಿದ್ದಲ್ಲಿ ಅನವಶ್ಯಕ ವಿಳಂಬಕ್ಕೆ ಅವಕಾಶವಿರುವುದಿಲ್ಲ. ಅಲ್ಲದೆ ವೀಕ್ಷಣೆಗೆ ಬರುವವರು ಉಚಿತ ವಾಹನ ನಿಲುಗಡೆ ಲಭ್ಯವಿರುವ ಜಿಕೆವಿಕೆ ಆವರಣ ಮತ್ತು ಶಟಲ್ ಬಸ್ ಸೇವೆಯನ್ನು ಉಪಯೋಗಿಸಲು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಏರೋ ಇಂಡಿಯಾ ಶೋ: ವಾಯಪ್ರದೇಶ ಮುಚ್ಚುವ ಅವಧಿ ಪ್ರಕಟ, ವಿಮಾನ ವೇಳಾಪಟ್ಟಿ ಪರಿಶೀಲಿಸಿ

ಇದನ್ನೂ ಓದಿ:ಏರ್ ಶೋ ಹಿನ್ನೆಲೆ ಮಾಂಸ ಮಾರಾಟ ನಿಷೇಧ: ಪಾಲಿಕೆ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್​

ABOUT THE AUTHOR

...view details