ETV Bharat / state

ಟಿಬಿ ಡ್ಯಾಂನಿಂದ ಮಾರ್ಚ್ ಅಂತ್ಯದವರೆಗೆ ಮಾತ್ರ ಬೆಳೆಗಳಿಗೆ ನೀರು: ಅಲ್ಪಾವಧಿ ಬೆಳೆ ಬೆಳೆಯುವಂತೆ ಅಧಿಕಾರಿಗಳ ಸಲಹೆ - TUNGA BHADRA DAM

ಮಾರ್ಚ್ 31ರವರೆಗೆ ಮಾತ್ರ ಬೆಳೆಗಳಿಗೆ ನೀರು ಬಿಡುವುದರಿಂದ ರೈತರು ಭತ್ತದ ಬದಲಾಗಿ ಅಲ್ಪಾವಧಿ ಬೆಳೆ ಬೆಳೆಯುವಂತೆ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ತುಂಗಭದ್ರಾ ಜಲಾಶಯ,TB dam
ತುಂಗಭದ್ರಾ ಜಲಾಶಯ (ETV Bharat)
author img

By ETV Bharat Karnataka Team

Published : Feb 6, 2025, 1:38 PM IST

ಬಳ್ಳಾರಿ: ತುಂಗಭದ್ರಾ ಜಲಾಶಯ ಅವಲಂಬಿತ ಕೊಪ್ಪಳ,ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಯ ಭತ್ತ ಬೆಳೆಯುವ ರೈತರನ್ನು ನೀರಾವರಿ ಇಲಾಖೆಯ ಅಧಿಕಾರಿಗಳು ಸೂಚನೆ ಜತೆಗೆ ಸಲಹೆಯನ್ನೂ ನೀಡಿದ್ದಾರೆ.

ರೈತರು ಈಗಾಗಲೇ ಸುಗ್ಗಿ ಬೆಳೆಯನ್ನು ತೆಗೆದುಕೊಂಡಿದ್ದು, ಇದೀಗ ಬೇಸಿಗೆ ಬೆಳೆಗೆ ಭತ್ತ ನಾಟಿ ಮಾಡುತ್ತಿದ್ದಾರೆ. ಆದರೆ, ಈಗಾಗಲೇ ಭತ್ತ ನಾಟಿ ಮಾಡಿದ್ದರೆ ಏನು ಸಮಸ್ಯೆ ಇಲ್ಲ. ಈಗ ಪ್ರಸ್ತುತ ಭತ್ತ ನಾಟಿ ಮಾಡುವವರಿಗೆ ನೀರಿನ ಕೊರತೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಈಗ ಭತ್ತ ನಾಟಿ ಮಾಡಬಾರದು ಎಂದು ಅಧಿಕಾರಿಗಳ ಸಲಹೆ ರೈತರಿಗೆ ತಲೆಬಿಸಿ ಉಂಟು ಮಾಡಿದೆ.

ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ (ETV Bharat)

ಮಾರ್ಚ್ ಅಂತ್ಯದವರಗೆ ಮಾತ್ರ ನೀರು: ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯ ನಾಲ್ಕು ಜಿಲ್ಲೆಗಳ ಜೀವನಾಡಿ. ಇಲ್ಲಿಂದಲೇ ಅನೇಕ ಗ್ರಾಮ, ನಗರಗಳಿಗೆ ನೀರು ಸರಬರಾಜು ಆಗುತ್ತದೆ. ಈ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ವರ್ಷದಲ್ಲಿ ಎರಡು ಬೆಳೆಯನ್ನು ಬೆಳೆಯುತ್ತಿದ್ದಾರೆ. ಜಲಾಶಯದಿಂದ ಎರಡು ಬೆಳೆಗೆ ನೀರು ಹರಿಸಲಾಗುತ್ತಿತ್ತು. ಹಾಗೆಯೇ ಈಗಾಗಲೇ ಅನೇಕ ರೈತರು ಎರಡನೇ ಬೆಳೆಯಾಗಿ ಭತ್ತವನ್ನು ನಾಟಿ ಮಾಡಿದ್ದು, ಅವರ ಜಮೀನಿಗೆ ನೀರು ಹರಿಸಲಾಗುತ್ತಿದೆ. ಆದರೆ ಇದೀಗ ಇನ್ನು ಕೆಲ ರೈತರು ಭತ್ತದ ನಾಟಿ ಮಾಡುತ್ತಿದ್ದು, ಅಂತಹವರಿಗೆ ಸಮಸ್ಯೆ ಎದುರಾಗಲಿದೆ. ಏಕೆಂದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ರೈತರ ಬೆಳೆಗೆ ಮಾರ್ಚ್ ಅಂತ್ಯದವರಗೆ ಮಾತ್ರ ನೀರು ಬಿಡ್ತೇವೆ. ಆ ನಂತರ ನೀರು ಬಿಡಲ್ಲ ಅಂತ ಹೇಳ್ತಿದ್ದಾರೆ. ಇದರಿಂದಾಗಿ ಈಗಾಗಲೇ ಭತ್ತ ನಾಟಿ ಮಾಡಿದವರ ಫಸಲು ಮಾರ್ಚ್ ಅಂತ್ಯದ ವೇಳೆ ಬರಲಿದೆ. ಆದರೆ ಈಗ ಭತ್ತ ನಾಟಿ ಮಾಡಿದರ ಬೆಳೆಗೆ ನೀರು ಏಪ್ರಿಲ್ ಅಂತ್ಯದವರೆಗೆ ಬೇಕಾಗಲಿದೆ.

ಭತ್ತ ಬಿಟ್ಟು ಅಲ್ಪಾವಧಿ ಬೆಳೆ ಬೆಳೆಯುವಂತೆ ಸಲಹೆ: ಕಳೆದ ನವಂಬರ್ ತಿಂಗಳಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಜನವರಿ 1 ರಿಂದ ಮಾರ್ಚ್​ 31 ರವರಗೆ ಎರಡನೇ ಬೆಳೆಗೆ ನೀರನ್ನು ಹಂಚಿಕೆ ಮಾಡಲಾಗಿದೆ. ಎಡದಂಡೆ ಕಾಲುವೆಗೆ ಪ್ರತಿ ದಿನ 3800 ಕ್ಯೂಸೆಕ್ ನೀರನ್ನು ಇದೀಗ ನಿತ್ಯ ಹರಿಸಲಾಗುತ್ತಿದೆ. ಏಪ್ರಿಲ್ 1 ರಿಂದ ಕೇವಲ ಕುಡಿಯುವ ನೀರಿಗಾಗಿ ಮಾತ್ರ ಜಲಾಶಯ ನೀರು ಮೀಸಲಾಗಿರುತ್ತದೆ. ಸದ್ಯ ಜಲಾಶಯದಲ್ಲಿ 53 ಟಿಎಂಸಿ ನೀರು- ಸಂಗ್ರಹವಿದ್ದು, ಜಲಾಶಯಕ್ಕೆ ಯಾವುದೇ ಒಳಹರಿವು ಇಲ್ಲ. ಎಲ್ಲ ಕಾಲುವೆ, ಆಂಧ್ರದ ಕೋಟಾ ಬಿಟ್ಟು ಏಪ್ರಿಲ್ ನಂತರ ಜಲಾಶಯದಲ್ಲಿ ಅಂದಾಜು 8 -10 ಟಿಎಂಸಿ ನೀರು ಉಳಿಯುವ ಸಾಧ್ಯತೆಯಿದೆ. ಇದರಲ್ಲಿ ಡೆಡ್ ಸ್ಟೋರೇಜ್ ತೆಗೆದು ಆರೇಳು ಟಿಎಂಸಿ ನೀರು ಮಾತ್ರ ಉಳಿಯುತ್ತದೆ. ಅದನ್ನು ಕಡ್ಡಾಯವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕಾಯ್ದಿರಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಏಪ್ರಿಲ್ 1 ರಿಂದ ರೈತರ ಬೆಳೆಗಳಿಗೆ ನೀರು ಬಿಡುವುದಿಲ್ಲ. ಇದೀಗ ನಾಟಿ ಮಾಡಿದ್ರೆ, ಏಪ್ರಿಲ್ ಅಂತ್ಯದವರಗೆ ನೀರು ಬೇಕಾಗುತ್ತದೆ. ಅಲ್ಲಿವರಗೆ ನೀರು ಬಿಡಲು ಆಗುವುದಿಲ್ಲ. ಇದನ್ನು ರೈತರು ಅರ್ಥ ಮಾಡಿಕೊಂಡು, ಭತ್ತದ ಬದಲಾಗಿ, ಅಲ್ಪಾವಧಿ ಬೆಳೆಗಳನ್ನು ಬೇಕಾದ್ರೆ ಬೆಳೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ರೈತರಿಗೆ ನೀರಾವರಿ ಸಲಹಾ ಸಮಿತಿಯ ಮಾಹಿತಿ ನೀಡಲಾಗಿದೆ. ಆದರೂ ರೈತರು ನಾಟಿ ಮಾಡಿದ್ರೆ, ಅವರ ಬೆಳೆಗೆ ಬೇಕಾದ ನೀರಿನ ಜವಾಬ್ದಾರಿ ನಮ್ಮದಲ್ಲಾ ಅಂತ ಟಿಬಿ ಡ್ಯಾಂನ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ದೇಸಿ ತಳಿಗಳನ್ನು ಸಂರಕ್ಷಣೆ ಮಾಡಿ ಸೈ ಎನಿಸಿಕೊಂಡಿರುವ ರೈತರು: 210 ಭತ್ತದ ತಳಿ ಉಳಿಸಿ ಮಾದರಿ!

ಇದನ್ನೂ ಓದಿ: ಮೂರು ದಶಕ ಕಳೆದರೂ ಕೈಗೂಡದ ನೀರಾವರಿ ಕನಸು: ಸಿಂಗಟಾಲೂರು ಏತ ನೀರಾವರಿ ನಂಬಿದ್ದ ರೈತರಿಗೆ ನಿರಾಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.