ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿರುವ 'ಸಿಪೆಟ್‌' ಗೊತ್ತೇ? ಇಲ್ಲಿ ಡಿಪ್ಲೋಮಾ ಕೋರ್ಸ್‌ ಮಾಡಿದವರಿಗೆ ಜಗತ್ತಿನಾದ್ಯಂತ ಉದ್ಯೋಗಾವಕಾಶ - CIPET Diploma Courses

ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್‌) 3 ವರ್ಷದ ಡಿಪ್ಲೋಮಾ ಕೋರ್ಸ್​ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಕೋರ್ಸ್​ಗೆ ಪ್ರವೇಶ ಹೇಗೆ?. ಉದ್ಯೋಗಾವಕಾಶಗಳೇನು?. ಶುಲ್ಕ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

CIPET MYSURU
ಮೈಸೂರಿನ ಸಿಪೆಟ್​ (ETV Bharat)

By ETV Bharat Karnataka Team

Published : Jun 25, 2024, 9:27 PM IST

Updated : Jun 25, 2024, 10:23 PM IST

ಮೈಸೂರು: ರಾಜ್ಯದಲ್ಲಿರುವ ಏಕೈಕ ಕೇಂದ್ರೀಯ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್‌) 3 ವರ್ಷದ ಡಿಪ್ಲೋಮಾ ಕೋರ್ಸ್​ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.

ಸಿಪೆಟ್‌ ಸಹಾಯಕ ಟೆಕ್ನಿಕಲ್‌ ಅಧಿಕಾರಿ ಲಕ್ಷ್ಮಣ್‌ 'ಈಟಿವಿ ಭಾರತ​' ಜೊತೆ ಮಾತನಾಡಿ, "ಸಿಪೆಟ್‌ ಎಂದರೆ ಕೇಂದ್ರೀಯ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಎಂದರ್ಥ. ಇದರಲ್ಲಿ ಡಿಪ್ಲೋಮಾ ಇನ್‌ ಪ್ಲಾಸ್ಟಿಕ್‌ ಪ್ರೊಸೆಸಿಂಗ್​ ಟೆಕ್ನಾಲಜಿ (DPT) ಮತ್ತು ಡಿಪ್ಲೋಮಾ ಇನ್‌ ಪ್ಲಾಸ್ಟಿಕ್‌ ಮೌಲ್ಟ್‌ ಟೆಕ್ನಾಲಜಿ (DPMT) ಎಂಬ ಎರಡು ಡಿಪ್ಲೋಮಾ ಕೋರ್ಸ್​ಗಳಿವೆ. ಪ್ಲಾಸ್ಟಿಕ್‌ ಟೆಕ್ನಾಲಜಿ ಇಡೀ ಪ್ರಪಂಚದಾದ್ಯಂತ ಇದೆ. ನಮ್ಮ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ಕೆಲಸ ಮಾಡುತ್ತಿದ್ದಾರೆ. ಈ ಕೋರ್ಸ್​ ಮಾಡಿದರೆ ಬೇರೆ ದೇಶಗಳಲ್ಲಿಯೂ ವಿಫುಲ ಅವಕಾಶಗಳಿವೆ. ಪ್ರತಿ ಕೋರ್ಸ್​ಗೆ 60 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಎರಡು ಕೋರ್ಸ್​ಗಳಿಂದ 120 ವಿದ್ಯಾರ್ಥಿಗಳು ಮಾತ್ರ ಇರುತ್ತಾರೆ" ಎಂದರು.

ಇದನ್ನೂ ಓದಿ;ರಾಜ್ಯದಲ್ಲಿ ಡೆಂಗ್ಯೂ ಜ್ವರ ಹೆಚ್ಚಳ: ಆರೋಗ್ಯ ಇಲಾಖೆಯ ಸಲಹೆಗಳೇನು? - Dengue cases are on the rise

ಉದ್ಯೋಗಾವಕಾಶ ಹೇಗಿದೆ?: "ಈ ಕೋರ್ಸ್​ಗಳಿಗೆ ತುಂಬಾ ಬೇಡಿಕೆ ಇದೆ. ಯಾಕೆಂದರೆ ಕೃಷಿ, ಮೆಡಿಕಲ್, ಎಲೆಕ್ಟ್ರಾನಿಕ್ಸ್​ ಸೇರಿದಂತೆ ವಿವಿಧ ರಂಗಗಳಲ್ಲಿ ಪ್ಲಾಸ್ಟಿಕ್​ ಬಳಕೆಯಾಗುತ್ತಿದೆ. ಆಟೋಮೊಬೈಲ್​ ರಂಗದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಇದರಿಂದ ತಯಾರಿಕೆ ಪ್ರಕ್ರಿಯೆ ವೇಗವಾಗಿ ಆಗುತ್ತದೆ ಮತ್ತು ವೆಚ್ಚ ಕಡಿಮೆ ಇರುತ್ತದೆ. ಹೀಗಾಗಿ ಪ್ಲಾಸ್ಟಿಕ್​ ಟೆಕ್ನಾಲಜಿ ಅಗಾಧ​ವಾಗಿ ಬೆಳೆದಿದೆ. ಈ ಕೋರ್ಸ್​ಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುತ್ತಾರೆ. ಜೊತೆಗೆ ತಾವೇ ಕೈಗಾರಿಕೆ ನಡೆಸುವ ಮಟ್ಟಿಗೆ ಬೆಳೆಯುತ್ತಾರೆ" ಎಂದು ಅವರು ತಿಳಿಸಿದರು.

ಇದನ್ನೂ ಓದಿ; ಕೃತಕ ಬಣ್ಣದ ಸೇವನೆಯಿಂದ ಆಗುವ ಸಮಸ್ಯೆಗಳಿವು: ಇದೇ ಕಾರಣಕ್ಕೆ ಸರ್ಕಾರದಿಂದ ನಿಷೇಧ - artificial food colours side effect

"ಪ್ಲಾಸ್ಟಿಕ್​ ಪ್ರಾಡಕ್ಟ್​ ಇಂಡಸ್ಟ್ರಿ ಬಂಡವಾಳ ಕಡಿಮೆ, ಲಾಭ ಹೆಚ್ಚು. ಉದಾಹರಣೆಗೆ, 10 ಲೀಟರ್​ ವಾಟರ್​ ಬಾಟಲ್​ ತಯಾರಿಕೆಗೆ ಎರಡ್ಮೂರು ರೂಪಾಯಿ ಖರ್ಚಾಗುತ್ತದೆ. ಅದನ್ನು ನಾವು ಹತ್ತಿಪ್ಪತ್ತು ರೂಪಾಯಿಗೆ ಮಾರಾಟ ಮಾಡುತ್ತೇವೆ. ಹೀಗಾಗಿ ಹೆಚ್ಚು ಲಾಭ ಸಿಗುತ್ತದೆ" ಎಂದು ಹೇಳಿದರು.

ಇದನ್ನೂ ಓದಿ;ನೈಸರ್ಗಿಕವಾಗಿಯೇ ಮುಖದಲ್ಲಿನ ಅನಗತ್ಯ ಕೂದಲು ತೆಗೆಯಲು ಇಲ್ಲಿದೆ ಉಪಾಯ! - HOME REMEDIES TO REMOVE FACIAL HAIR

ಪ್ರವೇಶಾತಿಗೆ ಅರ್ಹತೆಗಳು: "ಎಸ್​ಎಸ್​ಎಲ್​ಸಿ ಉತ್ತಿರ್ಣರಾದ ವಿದ್ಯಾರ್ಥಿಗಳು ಈ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶ ಪಡೆಯಬಹುದು. ಮೊದಲು ಸಿಪೆಟ್‌ ಅಡ್ಮಿಷನ್​ ಟೆಸ್ಟ್​ ಇರುತ್ತದೆ. ಸದ್ಯ ಟೆಸ್ಟ್​ ಮುಗಿದಿದೆ. ಆದರೂ ನಾವು ಡೈರೆಕ್ಟ್​ ಅಡ್ಮಿಷನ್​ಗೆ ಅನುಮತಿ ನೀಡುತ್ತಿದ್ದೇವೆ. ಆಸಕ್ತ ವಿದ್ಯಾರ್ಥಿ ನೇರವಾಗಿ ಬಂದ ಪ್ರವೇಶ ಪಡೆಯಬಹುದು. ಎಂಎಸ್​ಸಿ ಪಾಲಿಮರ್ಸ್​ ಕೋರ್ಸ್​ಗೆ ಬಿಎಸ್​ಸಿ ಮುಗಿಸಿರುವ ವಿದ್ಯಾರ್ಥಿಗಳು ಸೇರಬಹುದು. ಇದು ಮೂರು ವರ್ಷದ ಕೋರ್ಸ್​. ಇದನ್ನೂ ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಪ್ರಾರಂಭಿಸಿದ್ದೇವೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ;ಪುರುಷರಿಗಿಂತ ಮಹಿಳೆಯರಲ್ಲೇ ಆತಂಕ ಹೆಚ್ಚು; ಇದಕ್ಕೆ ಕಾರಣಗಳೇನು? - Why Women are More Anxiety

ಕೋರ್ಸ್​ಗಳಿಗೆ ಶುಲ್ಕ ಎಷ್ಟು?:ಸಿಪೆಟ್‌ ಸಹಾಯಕ ಟೆಕ್ನಿಕಲ್‌ ಅಧಿಕಾರಿ ಶ್ರೀನಾಥ್‌ ಮಾತನಾಡಿ, "3 ವರ್ಷದ ಡಿಪ್ಲೋಮಾ ಕೋರ್ಸ್​ಗಳಲ್ಲಿ ಸೆಮಿಸ್ಟರ್​ ಸಿಸ್ಟಮ್​ ಇರುತ್ತದೆ. ಒಂದು ಸೆಮಿಸ್ಟರ್​ಗೆ ಪರೀಕ್ಷಾ ಶುಲ್ಕ ಸೇರಿ 22,500 ರಿಂದ 25,000 ಸಾವಿರ ರೂ. ಇರುತ್ತದೆ. ಒಂದು ವರ್ಷಕ್ಕೆ 40 ರಿಂದ 45 ಸಾವಿರ ಶುಲ್ಕ ಇರುತ್ತದೆ. ಎಸ್​ಸಿ, ಎಸ್​ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿಯಾಗುತ್ತದೆ. 6ನೇ ಸೆಮಿಸ್ಟರ್​ನಲ್ಲಿ ವಿದ್ಯಾರ್ಥಿಗಳನ್ನು ತರಬೇತಿಗೆ ಕಳುಹಿಸುತ್ತೇವೆ. ಆಗ ಅವರಿಗೆ 15,000 ರೂ. ಸ್ಟೈಫಂಡ್ ಇರುತ್ತದೆ" ಎಂದು ತಿಳಿಸಿದರು.

ಪ್ಲಾಸ್ಟಿಕ್​ ಮರುಬಳಕೆ ತರಬೇತಿ: ತಮ್ಮದೇಯಾದ ಬಟ್ಟೆ ಚೀಲ ತನ್ನಿ..' ಎಂದು ಅಂಗಡಿಗಳ ಮುಂದೆ ಬೋರ್ಡ್​ಗಳನ್ನು ಸಾಮಾನ್ಯವಾಗಿ ಕಾಣುತ್ತೇವೆ. ಕಾರಣ ಸರ್ಕಾರ ಪ್ಲಾಸ್ಟಿಕ್‌ ಬ್ಯಾನ್‌ ಮಾಡಿದೆ ಎಂದು. ಪ್ಲಾಸ್ಟಿಕ್‌ ಎಂದಾಕ್ಷಣ ನಕಾರಾತ್ಮಕ ಭಾವನೆಯೇ ಮೂಡುತ್ತದೆ. ಆದರೆ ಎಲ್ಲಿ ಎಷ್ಟು ಉಪಯೋಗಿಸಬೇಕು, ಹೇಗೆ ಮರುಬಳಕೆ ಮಾಡಬೇಕು ಅದರ ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷ್ಟಿಸುವುದು ಹೇಗೆ ಎಂಬುದರ ಅರಿವು ನಮಗಿರಬೇಕು. ಇವೆಲ್ಲವನ್ನೂ ಕಲಿಸಿಕೊಡಲಿದೆ ಸಿಪೆಟ್‌.

ಪ್ಲಾಸ್ಟಿಕ್‌ ಮಾನವ ಜೀವನದ ಅವಿಭಾಜ್ಯ ನಿರ್ವಹಣೆಯಾಗಿದೆ. ಪ್ಲಾಸ್ಟಿಕ್‌ ಇಲ್ಲದೇ ಜೀವನ ಸಾಧ್ಯವಿಲ್ಲ ಎನ್ನುವಂತಾಗಿದೆ. ಲೋಹದ ಬೆಲೆ ಮತ್ತು ಕೊರತೆ ಹೆಚ್ಚಿದಂತೆಲ್ಲಾ ಪ್ರತಿ ಕ್ಷೇತ್ರದಲ್ಲೂ ಪ್ಲಾಸ್ಟಿಕ್‌ ನ ಬಳಕೆ ದಿನೇ ದಿನೇ ಅಧಿಕಗೊಳ್ಳುತ್ತಿದೆ. ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ ಬಳಕೆಯಿಂದ ತೊಂದರೆಗಳಿಲ್ಲ. ಆಟೋಮೊಬೈಲ್‌, ಕೃಷಿ , ಆರೋಗ್ಯ, ಶಿಕ್ಷಣ, ಸಾರಿಗೆ, ವಿದ್ಯುನ್ಮಾನ ಮುಂತಾದ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಕಾಣುತ್ತಿದ್ದೇವೆ. ಹಾಗಾಗಿ ಪ್ಲಾಸ್ಟಿಕ್‌ ಆಧಾರಿತ ಕೋರ್ಸ್‌ ಗಳಿವೆ ಎಂಬುದು ಎಷ್ಟು ಆಶ್ವರ್ಯವೋ, ಇಂತಹ ಕೋರ್ಸ್​ಗಳು ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಿಂದಲೇ ನಡೆಯುತ್ತಿವೆ ಎಂಬುದು ಸಂತಸದ ಸಂಗತಿ.

ಮೈಸೂರಿನಲ್ಲಿರುವ ಕೇಂದ್ರಿಯ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆಯು ಇಂತಹ ಅನೇಕ ಕೋರ್ಸ್‌ ಗಳ ಮೂಲಕ ತರಬೇತಿ ನೀಡುವ ಮೂಲಕ ಯುವಕ, ಯುವತಿಯರಲ್ಲಿ ವೃತ್ತಿ ಕೌಶಲ್ಯ ಹೆಚ್ಚಿಸಿ ಸ್ವಾಲಂಭಿಗಳನ್ನಾಗಿ ಮಾಡುವ ಉದ್ದೇಶ ಹೊಂದಿದೆ.

ಇದನ್ನೂ ಓದಿ: ಬೋಳು ತಲೆಗೆ ವಿಗ್​ ಧರಿಸುವ ಮುನ್ನ ಎಚ್ಚರ! ಇದು ನಿಮ್ಮ ಜೀವಕ್ಕೆ ಕುತ್ತು ತರಬಹುದು ಜೋಕೆ.. - Wig Is Poison

"ಕೋರ್ಸ್​ ಮುಗಿಸಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್​ ಸೆಲೆಕ್ಷನ್​ ಮೂಲಕ ಉದ್ಯೋಗ ಕೊಡಿಸುತ್ತೇವೆ. ಸಿಪೆಟ್‌ ಸಂಸ್ಥೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು www.cipet.gov.inಪಡೆಯಬಹುದು" ಎಂದರು.

ಸಿಪೆಟ್‌ ಇತಿಹಾಸ: ಕೇಂದ್ರೀಯ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ 1991ರಲ್ಲಿ ಮೈಸೂರಲ್ಲಿ ಆರಂಭವಾಯಿತು. ಪಾಲಿಮರ್ಸ್​ ಅಥವಾ ಪ್ಲಾಸ್ಟಿಕ್‌ ಕೈಗಾರಿಕೆ ಕುರಿತು ಕೋರ್ಸ್​ಗಳನ್ನು ಹೊಂದಿರುವ ರಾಜ್ಯದ ಏಕೈಕ ಸಂಸ್ಥೆ ಇದಾಗಿದೆ. ಅಲ್ಲದೆ, ದೇಶದ 40 ಸಂಸ್ಥೆಗಳ ಪೈಕಿ ಇದು ಒಂದಾಗಿದೆ ಅನ್ನೋದು ಹೆಮ್ಮೆಯ ವಿಷಯ.

ರಾಜ್ಯದ ವಿದ್ಯಾರ್ಥಿಗಳಿಗೆ ಕರೆ; ಕರ್ನಾಟಕದ ಯುವಕರಿಗೆ ಇದರ ಅರಿವೇ ಇಲ್ಲ. ಆದ್ದರಿಂದ ಹೊರ ರಾಜ್ಯಗಳಿಂದ ಬರುವವರೇ ಹೆಚ್ಚು. ವಿವಿಧ ಪರಿಕರಗಳ ಉತ್ಪಾದನೆ ಹಾಗೂ ಸಂರಕ್ಷಣಾ ಘಟಕಗಳಿಗೆ ಕೊಂಡಿಯಾಗಿ ಕಾರ್ಯನಿರ್ವಹಸುತ್ತಿರುವ ಸಿಪೆಟ್‌ ಸ್ವಾಯತ್ತ ಸಂಸ್ಥೆಯಾಗಿ ಬೆಳೆದಿದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳು ಸಹ ಇದರ ಪ್ರಯೋಜನ ಪಡೆಯಬೇಕಿದೆ ಎಂದು ಸಿಪೆಟ್‌ ಸಹಾಯಕ ಟೆಕ್ನಿಕಲ್‌ ಅಧಿಕಾರಿ ಲಕ್ಷ್ಮಣ್‌ ಕರೆ ನೀಡಿದರು.

ಇದನ್ನೂ ಓದಿ:ತೋಟಗಾರಿಕಾ ಬೆಳೆಯತ್ತ ಮುಖಮಾಡಿದ ರೈತ; ಪೇರಲ ಹಣ್ಣಿನಿಂದ ದಿನಕ್ಕೆ 7 ಸಾವಿರ ರೂಪಾಯಿ ಗಳಿಕೆ - Guava Farming

Last Updated : Jun 25, 2024, 10:23 PM IST

ABOUT THE AUTHOR

...view details