ಕರ್ನಾಟಕ

karnataka

ETV Bharat / state

ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದ ನಟ ಶಿವರಾಜ್ ಕುಮಾರ್ - Shiva Rajkumar - SHIVA RAJKUMAR

ನಟ ಶಿವರಾಜ್ ಕುಮಾರ್ ಅವರು ಸವದತ್ತಿಯ ಯಲ್ಲಮ್ಮ ದೇವಿಯ ದರ್ಶನ ಪಡೆದರು.

SAVADATTI YALLAMMA DEVI  ACTOR SHIVRAJ KUMAR  Belagavi
ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ (ETV Bharat)

By ETV Bharat Karnataka Team

Published : May 29, 2024, 8:09 AM IST

ನಟ ಶಿವರಾಜ್ ಕುಮಾರ್ ಅವರು ಮಂಗಳವಾರ ಸವದತ್ತಿ ಪ್ರಸಿದ್ಧ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಬೆಳಗಾವಿಯಲ್ಲಿ 'ಉತ್ತರಕಾಂಡ' ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ಅವರು ದೇಗುಲಕ್ಕೆ ಆಗಮಿಸಿದರು.

ಸವದತ್ತಿ ಯಲ್ಲಮ್ಮ ದೇವಿಗೆ ನಮಿಸುತ್ತಿರುವ ಶಿವ ರಾಜ್​ಕುಮಾರ್ ದಂಪತಿ (ETV Bharat)

ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ.ರಾಜ್ ಅವರು 'ಉತ್ತರಕಾಂಡ' ನಿರ್ಮಿಸುತ್ತಿದ್ದಾರೆ. ರೋಹಿತ್ ಪದಕಿ ನಿರ್ದೇಶನವಿದೆ. ಇದು ಆ್ಯಕ್ಷನ್ ಡ್ರಾಮಾ ಜಾನರ್‌ನ ಚಿತ್ರವಾಗಿದೆ. ನಟರಾದ ಡಾಲಿ‌ ಧನಂಜಯ, ಐಶ್ವರ್ಯ ರಾಜೇಶ್, ಭಾವನಾ‌ ಮೆನನ್, ದಿಗಂತ್ ಮಂಚಾಲೆ, ರಂಗಾಯಣ ರಘು, ವಿಜಯ್ ಬಾಬು ಮುಂತಾದವರು ನಟಿಸಿದ್ದಾರೆ. ಬಾಲಿವುಡ್‌ ಗಾಯಕ ಹಾಗು ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದಾರೆ. ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿದ್ದಾರೆ.

ಸವದತ್ತಿ ಯಲ್ಲಮ್ಮ ದೇವಸ್ಥಾನದ ಆಡಳಿತ ಅಧಿಕಾರಿಗಳ ಜೊತೆಗೆ ಮಾತುಕತೆ (ETV Bharat)

ಇನ್ನು, ಶಿವರಾಜ್ ಕುಮಾರ್ ಈಗಾಗಲೇ 'ಭೈರತಿ ರಣಗಲ್' ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಇದೀಗ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್​ನಲ್ಲಿ ಬ್ಯುಸಿಯಾಗಿದೆ‌. ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್‍, ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಮುಂತಾದವರು ಈ ಸಿನಿಮಾದ ಭಾಗವಾಗಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸುತ್ತಿದ್ದಾರೆ. ಆಗಸ್ಟ್ 15 ರಂದು ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ತಡರಾತ್ರಿ ಲಂಬೋರ್ಗಿನಿಯಲ್ಲಿ ಲಾಂಗ್​ ಡ್ರೈವ್ ಹೊರಟ ನಟಿ ಶ್ರದ್ದಾ ಕಪೂರ್ - Shraddha Kapoor

ABOUT THE AUTHOR

...view details