ರಾಯಚೂರು:ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಸ್ಯಾಂಡಲ್‌ವುಡ್ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಕುಟುಂಬಸ್ಥರೊಂದಿಗೆ ಮಠಕ್ಕೆ ಭೇಟಿ ನೀಡಿದರು.
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ (ETV Bharat) ವಿದೇಶದಲ್ಲಿ ಇತ್ತೀಚಿಗೆ ಚಿಕಿತ್ಸೆ ಪಡೆದ ನಂತರ ರಾಯರ ಸನ್ನಿಧಾನಕ್ಕೆ ಮೊದಲ ಬಾರಿಗೆ ಕುಟುಂಬಸ್ಥರೊಂದಿಗೆ ಆಗಮಿಸಿದ ಶಿವರಾಜ್ ಕುಮಾರ್, ಆರಂಭದ ಆದಿದೇವತೆ ಶ್ರೀಮಾಂಚಲ್ಮದೇವಿ ದರ್ಶನ ಪಡೆದುಕೊಂಡು ವಿಶೇಷ ಪೂಜೆ ನೇರವೇರಿಸಿದರು. ಇದಾದ ನಂತರ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ತೆರಳಿ ದರ್ಶನ ಪಡೆದುಕೊಂಡು ವಿಶೇಷ ಪೂಜೆ ಕೈಂಕರ್ಯ ಮಾಡಿದರು.
ಮಂತ್ರಾಲಯಕ್ಕೆ ನಟ ಶಿವರಾಜ್‌ಕುಮಾರ್ ಕುಟುಂಬ ಭೇಟಿ: ಶ್ರೀ ರಾಘವೇಂದ್ರರಿಗೆ ವಿಶೇಷ ಪೂಜೆ ಸಲ್ಲಿಕೆ (ETV Bharat) ಈ ವೇಳೆ, ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಉಭಯ ಕುಶುಲೋಪರಿ ವಿಚಾರಿಸಿದರು. ಬಳಿಕ ಶ್ರೀ ಮಠದಿಂದ ಶಿವಣ್ಣ ಹಾಗೂ ಕುಟುಂಬಸ್ಥರಿಗೆ ಸನ್ಮಾನಿಸಿ, ಶ್ರೀಗಳು ಆಶೀರ್ವದಿಸಿದರು.
ಶ್ರೀ ರಾಘವೇಂದ್ರರಿಗೆ ವಿಶೇಷ ಪೂಜೆ ಸಲ್ಲಿಕೆ (ETV Bharat) ಇದೇ ಸಂರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ತಮ್ಮ ತಂದೆ ಡಾ. ರಾಜ್‌ಕುಮಾರ್ ಅವರೊಂದಿಗೆ ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ಶ್ರೀ ಮಠದಲ್ಲಿ ಉಳಿದುಕೊಂಡಿದ್ದ ನೆನಪುಗಳನ್ನು ಪ್ರೀತಿಯಿಂದ ನೆನಪಿಸಿಕೊಂಡರು. "ಶ್ರೀಮಠವು ತಮ್ಮ ಎರಡನೇ ಮನೆಯಂತೆ ಭಾಸವಾಗುತ್ತಿದೆ" ಎಂದು ಅವರು ಅಭಿಪ್ರಾಯ ಹಂಚಿಕೊಂಡರು ಎಂದು ಶ್ರೀಮಠ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀ ಮಠದಿಂದ ಶಿವಣ್ಣ ಹಾಗೂ ಕುಟುಂಬಸ್ಥರಿಗೆ ಸನ್ಮಾನ (ETV Bharat) ಇದನ್ನೂ ಓದಿ:ಅಲ್ಲಿಯೂ ಸೈ, ಇಲ್ಲಿಯೂ ಸೈ: ಸವಾಲಿನ ಸಂದರ್ಭ ಶಿವರಾಜ್‌ಕುಮಾರ್ ದಂಪತಿಗೆ ಧೈರ್ಯ ತುಂಬಿದ ಶಾಸಕ ಭೀಮಣ್ಣ