ಕರ್ನಾಟಕ

karnataka

ETV Bharat / state

ಹತ್ಯೆ ಪ್ರಕರಣ: ದರ್ಶನ್ ಪಾತ್ರದ ಕುರಿತು ತನಿಖೆಯ ನಂತರ ಸ್ಪಷ್ಟತೆ ಸಿಗಲಿದೆ-ಗೃಹ ಸಚಿವ ಜಿ.ಪರಮೇಶ್ವರ್​ - Home Minister G Parameshwar - HOME MINISTER G PARAMESHWAR

ಚಿತ್ರದುರ್ಗದ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪಾತ್ರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

home-minister-dr-g-parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್​ (ETV Bharat)

By ETV Bharat Karnataka Team

Published : Jun 11, 2024, 3:18 PM IST

ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಪ್ರತಿಕ್ರಿಯೆ (ETV Bharat)

ಬೆಂಗಳೂರು:ವ್ಯಕ್ತಿಯೊಬ್ಬರಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರ ಪಾತ್ರದ ಕುರಿತು ತನಿಖೆ ನಡೆಯುತ್ತಿದ್ದು, ನಂತರವೇ ಸ್ಪಷ್ಟತೆ ಸಿಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಕೋರಮಂಗಲದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿಯಲ್ಲಿ ಇಂದು ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಚಿತ್ರದುರ್ಗದ ವ್ಯಕ್ತಿಯೊಬ್ಬರ ಹತ್ಯೆಯಾಗಿದೆ. ಪೊಲೀಸರ ತನಿಖೆಯಲ್ಲಿ ದರ್ಶನ್ ಹೆಸರು ಕೇಳಿ ಬಂದಿದೆ. ಹೀಗಾಗಿ ವಿಚಾರಣೆಗೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಪ್ರಕರಣದಲ್ಲಿ ಮೊದಲು ಬಂಧಿತರಾದ ಆರೋಪಿಗಳು ದರ್ಶನ್ ಹೆಸರು ಹೇಳಿರುವುದರಿಂದ ಮೈಸೂರಿನಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ‌. ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ, ದರ್ಶನ್ ಹೆಸರೇಕೆ ಕೇಳಿ ಬಂದಿದೆ ಎಂಬುದರ ಕುರಿತು ತನಿಖೆಯ ನಂತರವೇ ಸ್ಪಷ್ಟತೆ ಸಿಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಪೊಲೀಸ್​ ವಶಕ್ಕೆ: ಕೇಸ್​ ಬಗ್ಗೆ ಬೆಂಗಳೂರು ಪೊಲೀಸ್​​​​​​​​ ಕಮಿಷನರ್​ ಹೇಳಿದ್ದಿಷ್ಟು! - Actor Darshan

ABOUT THE AUTHOR

...view details