ಬೆಂಗಳೂರು: ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಬ್ಯಾಗ್ನಿಂದ ಮೊಬೈಲ್ ಫೋನ್‌ಗಳನ್ನು ಎಗರಿಸಿ, ಅದರಲ್ಲಿರುವ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಆರೋಪಿಯನ್ನು ರಾಮಮೂರ್ತಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಘ್ನೇಶ್ ಬಂಧಿತ ಆರೋಪಿ.
ಬಸ್ ನಿಲ್ದಾಣಗಳಲ್ಲಿ ಹೊಂಚು ಹಾಕುತ್ತಿದ್ದ ಆರೋಪಿ, ಬಸ್ ಹತ್ತುವಾಗ ಮಹಿಳೆಯರ ಹಿಂದಿನಿಂದ ತಾನೂ ಬಸ್ ಹತ್ತುವ ನೆಪದಲ್ಲಿ ಅವರ ಬ್ಯಾಗ್‌ನ ಜಿಪ್ ತೆಗೆದು ಮೊಬೈಲ್ ಫೋನ್‌ಗಳನ್ನು ಎಗರಿಸುತ್ತಿದ್ದ. ನಂತರ ಮೊಬೈಲ್ ಫೋನ್‌ನಲ್ಲಿ ಇರುತ್ತಿದ್ದ ಸಿಮ್ ಕಾರ್ಡ್‌ಗಳನ್ನು ಬೇರೊಂದು ಮೊಬೈಲ್ ಫೋನ್‌ಗೆ ಹಾಕಿ ಫೋನ್ ಪೇ, ಗೂಗಲ್ ಪೇಗಳಿಗೆ ಒಟಿಪಿ ಆಯ್ಕೆ ಬಳಸಿ ಲಾಗಿನ್ ಆಗುತ್ತಿದ್ದ. ಮೊಬೈಲ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ತನ್ನ ಪರಿಚಯಸ್ಥನ ಬೇರೊಂದು ಖಾತೆಗೆ ವರ್ಗಾವಣೆ ಮಾಡುತ್ತಿದ್ದ. ಆತನಿಂದ ಹಣ ಪಡೆದುಕೊಂಡು ಆನ್‌ಲೈನ್‌ನಲ್ಲಿ ಇಸ್ಪೀಟ್ ಆಡಲು ಖರ್ಚು ಮಾಡುತ್ತಿದ್ದ.