ಬೆಂಗಳೂರು : ಹತ್ತಾರು ಜನರಿಂದ ಚೀಟಿ ಹಣ ಕಟ್ಟಿಸಿಕೊಂಡು ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ದಂಪತಿ ಸೇರಿ ಮೂವರನ್ನ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿಯ ಬೆಳತೂರಿನಲ್ಲಿ ವಾಸವಾಗಿದ್ದ ಮಹದೇವಮ್ಮ, ಪತಿ ಚಂದ್ರಶೇಖರ್ ಹಾಗೂ ಪುತ್ರ ಸಾಗರ್ ಎಂಬುವರನ್ನ ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಹಣ ತೆಗೆದುಕೊಂಡು ರಾತ್ರೋರಾತ್ರಿ ಪರಾರಿ :ತಲಕಾಡು ಮೂಲದ ಮಹದೇವಮ್ಮ ಕುಟುಂಬ 10 ವರ್ಷಗಳಿಂದ ಬೆಳತೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಚಂದ್ರಶೇಖರ್ ಟಿವಿ ರಿಪೇರಿ ಕೆಲಸ ಮಾಡುತ್ತಿದ್ದರೆ, ಪತ್ನಿ ಗೃಹಿಣಿಯಾಗಿ ಚೀಟಿ ವ್ಯವಹಾರ ನಡೆಸುತ್ತಿದ್ದರು. 1 ರಿಂದ 10 ಲಕ್ಷ ರೂಪಾಯಿವರೆಗೆ ಚೀಟಿ ನಡೆಸುತ್ತಿದ್ದ ಮಹದೇವಮ್ಮ ಚೀಟಿ ಹಣ ತೆಗೆದುಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದರು. ಹಣ ಕಳೆದುಕೊಂಡವರು ನೀಡಿದ ದೂರಿನ ಮೇರೆಗೆ ಆರೋಪಿತರನ್ನ ಮೈಸೂರಿನಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.