ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಯುವಕನ ಕೊಲೆ: ಆರೋಪಿಗಳು ಪರಾರಿ - MURDER CASE - MURDER CASE

ಸೋಮವಾರ ಸಂಜೆ ಮನೆಯಿಂದ ಹೊರಹೋಗಿದ್ದ ಹರೀಶ್​ ಮಂಗಳವಾರ ಗೋವನಕೊಪ್ಪ ಬಳಿಯ ವಾಸುದೇವ ನಗರ ಬಡಾವಣೆಯ ರಸ್ತೆ ಬದಿಯ ಹೆಸರು ಬೇಳೆ ಹೊಲದ ಪಕ್ಕ ಕೊಲೆಗೀಡಾಗಿದ್ದಾನೆ.

A youth who was working on tiles was killed in Dharwad: accused escaped
ಧಾರವಾಡದಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಯುವಕನ ಕೊಲೆ: ಆರೋಪಿಗಳು ಪರಾರಿ (ETV Bharat)

By ETV Bharat Karnataka Team

Published : Jul 23, 2024, 6:04 PM IST

Updated : Jul 23, 2024, 7:40 PM IST

ಧಾರವಾಡ: ಟೈಲ್ಸ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಯುವಕನೋರ್ವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಮಣಕಿಲ್ಲಾ ಬಡಾವಣೆ ಹರೀಶ್ ಶಿಂಧೆ (30) ಮೃತ ಯುವಕನಾಗಿದ್ದಾನೆ.

ಧಾರವಾಡದಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಯುವಕನ ಕೊಲೆ: ಆರೋಪಿಗಳು ಪರಾರಿ (ETV Bharat)

ಸೋಮವಾರ ಸಂಜೆ ಮನೆಯಲ್ಲಿ ಹೇಳಿ ಹೊರಹೋಗಿದ್ದ ಹರೀಶ್ ಮಂಗಳವಾರ ತಾಲೂಕಿನ ಗೋವನಕೊಪ್ಪ ಬಳಿಯ ವಾಸುದೇವ ನಗರ ಬಡಾವಣೆಯ ರಸ್ತೆ ಬದಿಯ ಹೆಸರುಬೇಳೆ ಹೊಲದ ಪಕ್ಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಧಾರವಾಡ ತಾಲೂಕಿನ ಗೋವನಕೊಪ್ಪ ಬಳಿಯ ಕ್ರಾಸ್​ವರೆಗೆ ಬೈಕ್ ಮೇಲೆ ಹೋಗಿದ್ದು, ಸ್ಕೂಟಿ ಪತ್ತೆಯಾಗಿದೆ. ಮೃತದೇಹ ಹೊಲದಲ್ಲಿ ಬಿದ್ದಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಧಾರವಾಡ ಎಸ್ಪಿ ಡಾ. ಗೋಪಾಲಕೃಷ್ಣ, "ಇಂದು ಬೆಳಗ್ಗೆ ಹುಬ್ಬಳ್ಳಿ ರಸ್ತೆಯಲ್ಲಿ ಕೊಲೆಯಾಗಿರುವ ಬಗ್ಗೆ ಸುದ್ದಿ ಬಂತು. ಘಟನೆಗೆ ಸಂಬಂಧಿಸಿ ಸಂದೀಪ್​ ಎನ್ನುವವರು ಠಾಣೆಗೆ ಬಂದು ದೂರು ನೀಡಿದ್ದಾರೆ. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಹರೀಶ್ ಶಿಂಧೆ​ ಎನ್ನುವ ಯುವಕನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದೇವೆ. ತನಿಖೆ ನಂತರ ಎಲ್ಲ ತಿಳಿಯಲಿದೆ." ಎಂದು ತಿಳಿಸಿದರು.

ಇದನ್ನೂ ಓದಿ:ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭೀಕರ ಕೊಲೆ - MURDER CASE

Last Updated : Jul 23, 2024, 7:40 PM IST

ABOUT THE AUTHOR

...view details