ದೇವನಹಳ್ಳಿ:ಹಣದಾಸೆಗೆ ಎರಡು ಮಕ್ಕಳ ತಾಯಿ ಜೊತೆ ಸಂಬಂಧ ಬೆಳೆಸಿ ಬಳಿಕ ಕೈ ಕೊಟ್ಟು ವಂಚಿಸಿರುವ ಆರೋಪ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋಸ ಹೋದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡುವ ಜೊತೆಗೆ ತನ್ನ ಪ್ರಿಯಕರನ ಮನೆ ಮುಂದೆ ತಮಟೆ ಹೊಡೆದು, ಧರಣಿ ಕುಳಿತು ಪ್ರತಿಭಟನೆ ಮಾಡಿದ್ದಾರೆ.
ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಜಯಮಹಲ್ ಲೇಔಟ್ನ ಮಹಿಳೆ ವಂಚನೆಗೊಳಗಾದವರು. ಗಂಡ, ಇಬ್ಬರು ಮಕ್ಕಳ ಜೊತೆ ಮಹಿಳೆ ಜೀವನ ಮಾಡುತ್ತಿದ್ದರು. ಐದು ವರ್ಷದ ಹಿಂದೆ ಪುರುಷೋತ್ತಮ ಎಂಬ ವ್ಯಕ್ತಿ ಪರಿಚಯವಾಗಿದೆ. ಆ ಬಳಿಕ ಆತ ಬೆದರಿಕೆ ಹಾಕಿ ಮಹಿಳೆಯ ಜೊತೆ ಸಂಬಂಧ ಬೆಳೆಸಿದ್ದಲ್ಲದೇ, ಗಂಡನಿಂದ ದೂರ ಮಾಡಿ ಬಾಡಿಗೆ ಮನೆ ಮಾಡಿಕೊಟ್ಟಿದ್ದ. ಮಹಿಳೆಗೆ ತವರು ಮನೆಯಿಂದ 10 ಲಕ್ಷ ರೂ ಹಣ ಬಂದಿತ್ತು. ಈ ಹಣದಲ್ಲಿ ಈತ ಸೈಟ್ ಖರೀದಿ ಮಾಡಿ, ಮನೆ ಕಟ್ಟಿಸಿದ್ದಾನೆ. ಮಹಿಳೆಯ ಬಳಿ ಹಣ ಖಾಲಿ ಆಗುತ್ತಿದ್ದಂತೆ ಕೆಳ ಜಾತಿ ಎಂದು ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.