ಮಂಗಳೂರು :ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ನ 5ನೇ ಆವೃತ್ತಿ ಇಂದು ಆರಂಭವಾಗಿದೆ. ಇಂದಿನಿಂದ ಜೂನ್ 2 ವರೆಗೆ ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಸರ್ಫಿಂಗ್ ಸ್ಪರ್ಧೆ ನಡೆಯುತ್ತಿದೆ.
ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2024 ರ ರಾಷ್ಟ್ರೀಯ ಸರ್ಫಿಂಗ್ ಮತ್ತು ಸ್ಟ್ಯಾಂಡ್ - ಅಪ್ ಪ್ಯಾಡ್ಲಿಂಗ್ ಕ್ರೀಡೆಗಳ ಆಡಳಿತ ಮಂಡಳಿಯಾದ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಇಂಡಿಯನ್ ಓಪನ್ ಸರ್ಫಿಂಗ್ (ಐಒಎಸ್) ನಿಂದ ಈ ಐದನೇ ಆವೃತ್ತಿಯ ಸರ್ಫಿಂಗ್ ಸ್ಪರ್ಧೆ ನಡೆಯುತ್ತಿದೆ.
ಇಂಟರ್‌ನ್ಯಾಷನಲ್ ಸರ್ಫಿಂಗ್ ಅಸೋಸಿಯೇಷನ್‌ನಿಂದ ಮಾನ್ಯತೆ ಪಡೆದಿರುವ ಈ ಪ್ರೀಮಿಯರ್ ಸರ್ಫಿಂಗ್ ಸ್ಪರ್ಧೆಯನ್ನು ಮಂತ್ರ ಸರ್ಫ್ ಕ್ಲಬ್ ಕರ್ನಾಟಕದ ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಆಯೋಜಿಸುತ್ತದೆ. ಭಾರತದಲ್ಲಿ ಅಗ್ರ ಶ್ರೇಯಾಂಕದ ಸರ್ಫರ್‌ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.