ಮಂಡ್ಯ:ಪಾಂಡವಪುರ ತಾಲೂಕಿನ ಶಂಭೂವಿನಹಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ. ಪತ್ನಿ ಜೊತೆ ಅಕ್ರಮ ಸಂಬಂಧ ಆರೋಪದ ಮೇಲೆ ಯುವಕನ ಮೇಲೆ ಹಿನ್ನಲೆ ಗನ್ ನಿಂದ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಮಂಜು(29) ಗುಂಡೇಟು ದಾಳಿಯಿಂದ ಗಾಯಗೊಂಡ ಯುವಕ. ಶಿವರಾಜು(37) ಗುಂಡು ಹಾರಿಸಿದ ಆರೋಪಿಯಾಗಿದೆ.
ಶಿವರಾಜು ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆಯ ಮುಂದೆ ಸ್ನೇಹಿತರೊಂದಿಗೆ ಕುಳಿತಿದ್ದ ಮಂಜು ಮೇಲೆ ಏಕಾಏಕಿ ಪಿಸ್ತೂಲ್‌ನಿಂದ ಎರಡು ಬಾರಿ ಗುಂಡು ಹಾರಿಸಿದ್ದು, ಎರಡನೇ ಗುಂಡು ಹಣೆ ಭಾಗಕ್ಕೆ ತಗುಲಿದೆ. ಈ ವೇಳೆ ಮಂಜು ಸ್ನೇಹಿತರು ಹಾಗೂ ಸ್ಥಳೀಯರು ಶಿವರಾಜುನನ್ನು ಕಟ್ಟಿಹಾಕಿದ್ದಾರೆ. ಗಾಯಗೊಂಡಿದ್ದ ಮಂಜುನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ (ETV Bharat) ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆಯೂ ಹತ್ಯೆಗೆ ಯತ್ನ:ಆರೋಪಿ ಶಿವರಾಜು ಮುಂಬೈನ ಹೋಟೆಲ್ವೊಂದರಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇನ್ನು, ಶಿವರಾಜು ಪತ್ನಿ ಜೊತೆ ಲಾರಿ ಡ್ರೈವರ್ ಆಗಿದ್ದ ಮಂಜು ವಿವಾಹೇತರ ಸಂಬಂಧ ಹೊಂದಿದ್ದನಂತೆ. ಈ ವಿಚಾರ ತಿಳಿದು ಎರಡು ವರ್ಷಗಳ ಹಿಂದೆಯೇ ಶಿವರಾಜು, ಮಂಜುನ ಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಮಂಜು ಬಚಾವ್ ಆಗಿದ್ದ. ಅನಂತರ ಶಿವರಾಜು ಪತ್ನಿ ತವರು ಮನೆ ಸೇರಿದ್ದಳು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, "ಶಂಭೂವಿನಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ಶಿವರಾಜು ಎಂಬ ವ್ಯಕ್ತಿ ಮಂಜು ಎಂಬ ಯುವಕನ ಮೇಲೆ ಗುಂಡು ಹಾರಿಸಿದ್ದಾನೆ. ಮಂಜು ಹಣೆಗೆ ಗುಂಡು ತಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳೀಯರು ಆರೋಪಿ ಶಿವರಾಜುನನ್ನು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಕ್ರಮ ಸಂಬಂಧ ವಿಚಾರವಾಗಿ ಘಟನೆ ನಡೆದಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಬೆಂಗಳೂರು: ನಿಲ್ಲಿಸಿದ್ದ ಸ್ಕೂಟರ್‌ಗೆ ಟಚ್ ಆಗಿ ಬಿದ್ದ ಬಾಲಕ, ಗೂಡ್ಸ್ ವಾಹನದ ಚಕ್ರಕ್ಕೆ ಸಿಲುಕಿ ಸಾವು