ಕಾರವಾರ:ಪ್ರಪಂಚದಾದ್ಯಂತ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ ಆಚರಣೆಗೆ ಮುಸ್ಲಿಂ ಬಾಂಧವರು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ವಿವಿಧ ತಳಿಯ ಕುರಿ ಹಾಗೂ ಮೇಕೆಗಳ ವ್ಯಾಪಾರ ಭಾನುವಾರವೂ ಜೋರಾಗಿ ನಡೆಯಿತು.
ಸೋಮವಾರ ಹಬ್ಬ ಇರುವ ಹಿನ್ನೆಲೆಯಲ್ಲಿ ಭಾನುವಾರವೂ ನಗರದ ಕಾಜುಭಾಗ, ಸದಾಶಿವಗಡ ಸೇರಿದಂತೆ ಇತರ ಕಡೆ ಮುಸ್ಲಿಮರು ಕುರಿ/ಮೇಕೆಗಳ ವ್ಯಾಪಾರದಲ್ಲಿ ತೊಡಗಿದ್ದರು. ಕಳೆದ ಒಂದು ವಾರದಿಂದ ದೇವದುರ್ಗ, ಅಮೀನಗಡದಿಂದ ತಂದಿರುವ ಮೇಕೆಗಳನ್ನು ತೂಕದ ಆಧಾರದ ಮೇಲೆ 25 ಸಾವಿರ ದಿಂದ 60 ಸಾವಿರದ ರೂ.ಗೆ ಮಾರಾಟ ಮಾಡುತ್ತಿರುವುದಾಗಿ ವ್ಯಾಪಾರಸ್ಥರು ತಿಳಿಸಿದ್ದಾರೆ.
ಮತ್ತೊಂದೆಡೆ, ಇಬ್ರಾಹಿಂ ಶೇಖ್ ಎಂಬುವರು ಮುಂಬೈನಿಂದ ಲಕ್ಷಾಂತರ ರೂ. ಮೌಲ್ಯದ ಕುರಿಗಳನ್ನು ಖರೀದಿಸಿ ಕಾರವಾರಕ್ಕೆ ತಂದಿದ್ದಾರೆ. ಈ ಪೈಕಿ ಮೂರು ಲಕ್ಷ ರೂ. ನ ಆಫ್ರಿಕನ್ ಬೋಯರ್ ಜಾತಿಯ ಶ್ವೇತ ವರ್ಣದ ಮೇಕೆ ಗಮನ ಸೆಳೆಯುತ್ತಿದೆ. ಇದು ಒಂದೂವರೆ ಕ್ವಿಂಟಲ್ ತೂಕವಿದೆ. ಇದರ ಮರಿಗಳನ್ನು 80 ಸಾವಿರ ದಿಂದ 1 ಲಕ್ಷ ಕೊಟ್ಟು ಖರೀದಿಸಿ ತಂದಿದ್ದಾರೆ.