ಚಾಮರಾಜನಗರ:ಆಕಸ್ಮಿಕವಾಗಿ ಕೆರೆಗೆ ಬಿದ್ದ ವಿದ್ಯಾರ್ಥಿನಿಯನ್ನು ಹೋಂ ಗಾರ್ಡ್ ರಕ್ಷಿಸಿರುವ ಘಟನೆ ಕೊಳ್ಳೇಗಾಲದಲ್ಲಿ ಶನಿವಾರ ನಡೆದಿದೆ.
ಚಾಮರಾಜನಗರ: ಕೆರೆಗೆ ಬಿದ್ದ ವಿದ್ಯಾರ್ಥಿನಿ ಪ್ರಾಣ ರಕ್ಷಿಸಿದ ಹೋಂಗಾರ್ಡ್ - RESCUE OF A STUDENT
ಕೆರೆಗೆ ಬಿದ್ದ ವಿದ್ಯಾರ್ಥಿನಿಯನ್ನು ಗೖಹರಕ್ಷಕ ಸಿಬ್ಬಂದಿ ಕೆರೆಗೆ ಹಾರಿ ಜನರ ಸಹಕಾರದಿಂದ ರಕ್ಷಿಸಿದ್ದಾರೆ.
Published : Dec 8, 2024, 11:19 AM IST
ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಾಜಮ್ಮ ಚಿಕ್ಕರಂಗನಾಥನ ಕೆರೆಗೆ ಬಿದ್ದಿದ್ದಳು. ತಕ್ಷಣ ಇದನ್ನು ಕಂಡ ಚಾಮರಾಜನಗರ ನಗರ ಯುನಿಟ್ನ ಗೖಹರಕ್ಷಕ ಸಿಬ್ಬಂದಿ ಕೖಷ್ಣಮೂರ್ತಿ ತಮ್ಮ ಪ್ರಾಣ ಲೆಕ್ಕಿಸದೇ ಕೆರೆಗೆ ಹಾರಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿನಿಯು ನೀರಿನಲ್ಲಿ ಮುಳುಗದಂತೆ ಎಚ್ಚರ ವಹಿಸಿ ಬಳಿಕ ಅಲ್ಲೇ ಸೇರಿದ್ದ ಜನರ ಸಹಕಾರದಿಂದ ಮೇಲಕ್ಕೆತ್ತಲಾಗಿದೆ. ನಂತರ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ರವಾನಿಸಿದ್ದು, ಪ್ರಾಣಾಪಾಯ ಇಲ್ಲವೆಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಗೃಹಿಣಿಯನ್ನು ಮಕ್ಕಳೆದುರೇ ಚೂರಿಯಿಂದ ಇರಿದು, ಸಾಯದೇ ಇದ್ದಾಗ ಕೆರೆಗೆ ಎಸೆದ ಪ್ರಿಯಕರ!