ಕಾರವಾರ(ಉತ್ತರ ಕನ್ನಡ):ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ದೋಣಿಯಲ್ಲಿದ್ದ ಮೂವರ ಪೈಕಿ ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಕುಮಟಾದ ಅಘನಾಶಿನಿ ನದಿಯ ಬೇಲೆಕಾನ್ ಬಳಿ ನಡೆದಿದೆ. ಯುವಕ ಮುಳುಗುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾರವಾರ: ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ: ಒಬ್ಬ ನಾಪತ್ತೆ, ಈಜಿ ದಡ ಸೇರಿದ ಮತ್ತಿಬ್ಬರು - fishing boat capsized live
ಅಘನಾಶಿನಿ ನದಿಯ ಬೇಲೆಕಾನ್ ಬಳಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿಗೊಂಡು ಓರ್ವ ಮೀನುಗಾರ ನಾಪತ್ತೆಯಾಗಿದ್ದಾನೆ. ಘಟನೆಯ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ.
Published : Aug 29, 2024, 12:12 PM IST
ಕುಮಟಾ ತಾಲೂಕಿನ ವಿನೋದ್ ಅಂಬಿಗ (37) ನಾಪತ್ತೆಯಾದ ಮೀನುಗಾರ. ಒಟ್ಟು ಮೂರು ಮಂದಿ ಸೇರಿ ಮುಂಜಾನೆ ಮೀನುಗಾರಿಕೆಗೆ ತೆರಳಿದ್ದರು. ಆದರೆ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ದೋಣಿ ಪಲ್ಟಿಯಾಗಿತ್ತು. ಈ ವೇಳೆ, ಇಬ್ಬರು ಮೀನುಗಾರರು ಈಜಿಕೊಂಡು ದಡ ಸೇರಿದ್ದು, ಓರ್ವ ಮಾತ್ರ ಅಲೆಗಳ ರಭಸಕ್ಕೆ ದಡಕ್ಕೆ ಬರಲಾಗದೆ ಕೊಚ್ಚಿ ಹೋಗಿದ್ದಾನೆ. ಈ ದೃಶ್ಯವನ್ನು ದಡದಲ್ಲಿದ್ದ ಕೆಲವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಮರಕ್ಕೆ ಕಾರು ಡಿಕ್ಕಿ: ಮಗನ ಮದುವೆ ಸಂಭ್ರಮದಲ್ಲಿದ್ದ ತಾಯಿ ಸಾವು - Road Accident