ETV Bharat / technology

ಒಂದಕ್ಕಿಂತ ಒಂದು ವಿಭಿನ್ನ​! ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್​ಫೋನ್‌ಗಳಿವು - UPCOMING SMARTPHONES IN FEBRUARY

Upcoming Smartphone Launches: ಈ ತಿಂಗಳು ದೇಶೀಯ ಸೇರಿದಂತೆ ಜಾಗತಿಕ​ ಮಾರುಕಟ್ಟೆಗೆ ಅನೇಕ ಸ್ಮಾರ್ಟ್​ಫೋನ್​ಗಳು ಲಗ್ಗೆಯಿಡಲಿವೆ. ಇದರ ಕುರಿತು ಒಂದು ನೋಟ ಇಲ್ಲಿದೆ.

ONEPLUS OPEN 2 LAUNCH DATE IN INDIA  UPCOMING SMARTPHONES IN FEB 2025  FEBRUARY 2025 SMARTPHONE LAUNCHES  IQOO NEO 10R LAUNCH DATE
ಸ್ಮಾರ್ಟ್​ಫೋನ್ಸ್ (Photo Credit- Iqoo/ Vivo/ Samsung)
author img

By ETV Bharat Tech Team

Published : Feb 4, 2025, 5:58 PM IST

Upcoming Smartphone Launches In February: ಇದು ಸ್ಮಾರ್ಟ್​ಫೋನ್​ ಯುಗ. ಕಾಲಕಾಲಕ್ಕೆ ಹೊಸ, ಹೊಸ ಫೀಚರ್‌​ಗಳೊಂದಿಗೆ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಬರುತ್ತಲೇ ಇವೆ. ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ ಸ್ಮಾರ್ಟ್​ಫೋನ್​ ಕಂಪೆನಿಗಳು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ತಮ್ಮ ಲೇಟೆಸ್ಟ್​ ಮಾಡೆಲ್‌ಗಳ ಸ್ಮಾರ್ಟ್​ಫೋನ್​ಗಳನ್ನು ಲಾಂಚ್​ ಮಾಡಲು ಸಿದ್ಧವಾಗಿವೆ.

1. iQOO Neo 10R: ವಿವೋ ಸಬ್​-ಬ್ರ್ಯಾಂಡ್​ ಕಂಪೆನಿ ಐಕ್ಯೂ ಭಾರತದಲ್ಲಿ ಫ್ಲ್ಯಾಗ್​ಶಿಪ್​ ಫರ್ಫಾರ್ಮೆನ್ಸ್​ ಹೊಂದಿರುವ ಐಕ್ಯೂ ನಿಯೋ 10ಆರ್​ ಎಂಬ ಹೊಸ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಲು ರೆಡಿಯಾಗಿದೆ. ಬಳಕೆದಾರರ ಗೇಮಿಂಗ್​ ಅನುಭವ ಇನ್ನಷ್ಟು ಆಸಕ್ತಿಗೊಳಿಸುವ ಗುರಿಯನ್ನು ಕಂಪೆನಿ ಹೊಂದಿದೆ. ಇನ್ನು ಕಂಪೆನಿ ಈ ಫೋನಿನ ಟೀಸರ್​ ಬಿಡುಗಡೆ ಮಾಡಿದ್ದು, ಲಾಂಚಿಂಗ್​ ಡೇಟ್​ ಪ್ರಕಟಿಸಿಲ್ಲ. ಆದ್ರೆ ಈ ಹೊಸ ಸ್ಮಾರ್ಟ್​ಫೋನ್​ ಈ ತಿಂಗಳು ಬಿಡುಗಡೆಯಾಗುವ ಎಲ್ಲ ಲಕ್ಷಣಗಳಿವೆ.

ಮಾಹಿತಿ ಪ್ರಕಾರ, ಈ ಫೋನ್​ 6400mAh ಬ್ಯಾಟರಿ, 144Hz ರಿಪ್ರೆಶ್​ ರೇಟ್​ನೊಂದಿಗೆ 1.5K AMOLED ಡಿಸ್​​ಪ್ಲೇ ಹೊಂದಿದೆ. ಅಷ್ಟೇ ಅಲ್ಲ, ಇದರೊಂದಿಗೆ ಅನೇಕ ಫೀಚರ್​ಗಳನ್ನು ಈ ಫೋನ್​ ಹೊಂದಿದೆ. ಅಪ್​ಕಮಿಂಗ್​ ಸ್ಮಾರ್ಟ್​ಫೋನ್​ ಬಗ್ಗೆ ಇನ್ನಷ್ಟು ತಿಳಿಯಲು ಕೆಳಗೆ ನೀಡಿರುವ ಲಿಂಕ್​ ಮೇಲೆ ಕ್ಲಿಕ್​ ಮಾಡಿ.

ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕ್ಯೂ ನ್ಯೂ ಸ್ಮಾರ್ಟ್​ಫೋನ್​: ಇದರ ಹೆಸರೇನು ಗೊತ್ತಾ?

2. Vivo V50 Series: ವಿವೋ ಹೊಸ ಸ್ಮಾರ್ಟ್​ಫೋನ್​ ಸೀರೀಸ್​ ಅನ್ನು ಸ್ವದೇಶಿ ಮಾರುಕಟ್ಟೆಗೆ ಪರಿಚಯಿಸಲು ಕಾತುರದಿಂದ ಕಾಯುತ್ತಿದೆ. ಕಂಪೆನಿ ವಿವೋ ವಿ50 ಸೀರೀಸ್​ ಹೆಸರಿನಲ್ಲಿ ಈ ಲೈನ್​ಅಪ್​ ಅನ್ನು ಪ್ರಾರಂಭಿಸಲಿದೆ. ಸೀರೀಸ್​ನಲ್ಲಿ ವಿವೋ ವಿ50, ವಿವೋ ವಿ50 ಪ್ರೋ ಎಂಬೆರಡು ಮಾಡೆಲ್ಸ್​ ಅನ್ನು ಪರಿಚಯಿಸಲಿದೆ. ಫೋನ್​ಗಳಲ್ಲಿ 6000mAh ಬ್ಯಾಟರಿ, 50ಎಂಪಿ ಮೇನ್​ ಕ್ಯಾಮೆರಾ ಸೇರಿದಂತೆ ಅನೇಕ ಫೀಚರ್​ಗಳಿವೆ. ಈ ಸ್ಮಾರ್ಟ್​ಫೋನ್​ ಕುರಿತು ಇನ್ನಷ್ಟು ತಿಳಿಯಲು ಕೆಳಗೆ ನೀಡಿರುವ ಲಿಂಕ್​ ಮೇಲೆ ಕ್ಲಿಕ್​ ಮಾಡಿ.

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ ವಿವೋ ಸ್ಮಾರ್ಟ್​ಫೋನ್​ಗಳು, ಲಾಂಚ್​ಗೂ ಮುನ್ನವೇ ಸ್ಪೆಕ್ಸ್​ ಲೀಕ್​

3. Xiaomi 15 Series: ಶಿಯೋಮಿ ಸಹ ಈ ಫೆಬ್ರವರಿ ತಿಂಗಳಲ್ಲಿ ತನ್ನ ಹೊಸ ಸ್ಮಾರ್ಟ್​ಫೋನ್​ ಸೀರಿಸ್​ ಬಿಡುಗಡೆ ಮಾಡಲು ಕಸರತ್ತು ನಡೆಸುತ್ತಿದೆ. ಶಿಯೋಮಿ 15 ಹೆಸರಿನಲ್ಲಿ ಈ ಸೀರಿಸ್​ ಅನ್ನು ಪರಿಚಯಿಸಲಿದೆ. ಶಿಯೋಮಿ ಈ ಸೀರಿಸ್​ನಲ್ಲಿ ಶಿಯೋಮಿ 15 ಮತ್ತು ಶಿಯೋಮಿ 15 ಪ್ರೋ ಎಂಬ ಎರಡು ಫೋನ್​ಗಳನ್ನು ರಿಲೀಸ್ ಮಾಡಲಿದೆ. ಆದ್ರೆ ಕಂಪನಿ ಈ ಫೋನಿನ ಲಾಂಚಿಂಗ್​ ಡೇಟ್​ ಅನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಫೆಬ್ರವರಿ ಕೊನೆಯ ವಾರದಲ್ಲಿ ಈ ಸ್ಮಾರ್ಟ್​ಫೋನ್​ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಬಹುದಾಗಿದೆ.

4. Realme P3 Pro: ಮಾರುಕಟ್ಟೆಗೆ ತನ್ನ ಹೊಸ ಸ್ಮಾರ್ಟ್​ಫೋನ್​ ಪರಿಚಯಿಸಲು ರಿಯಲ್​ಮಿ ಸಿದ್ಧಗೊಂಡಿದೆ. ರಿಯಲ್​ಮಿ ಪಿ3 ಪ್ರೋ ಮಾಡೆಲ್​ ಹೆಸರಿನ ಈ ಫೋನ್​ ಬಗ್ಗೆ ಸಾಕಷ್ಟು ಸುದ್ದಿ ಹೊರ ಬಿದ್ದಿವೆ. ಈ ಫೋನ್​ ಅನ್ನು ಕಂಪನಿ ಫೆಬ್ರವರಿ ಮೂರನೇ ವಾರದಲ್ಲಿ ಬಿಡುಗಡೆ ಮಾಡಲಿದೆ. ಆದ್ರೆ ಕಂಪನಿ ಈ ರಿಯಲ್​ಮಿ ಪಿ3 ಪ್ರೋ ಸ್ಮಾರ್ಟ್​ಫೊನ್​ ಲಾಂಚ್​ ಡೇಟ್​ ಅನ್ನು ಮಾತ್ರ ರಿವಿಲ್​ ಮಾಡಿಲ್ಲ. ಮಾಹಿತಿ ಪ್ರಕಾರ, ಈ ಫೋನ್​ 5000mAh ಬ್ಯಾಟರಿ, 65W ಫಾಸ್ಟ್​ ಚಾರ್ಜಿಂಗ್​, 50MP ಡ್ಯುಯಲ್​ ಕ್ಯಾಮೆರಾ ಸೆಟಪ್​ನಂತಹ ಅನೇಕ ಪ್ರತ್ಯೇಕ ಫೀಚರ್​ಗಳೊಂದಿಗೆ ಬರಲಿದೆ.

5. Samsung Galaxy A56 5G: ಸ್ಯಾಮ್​ಸಂಗ್​ ಸಹ ಈ ತಿಂಗಳಲ್ಲಿ ತನ್ನ ‘A’ ಲೈನ್​ಅಪ್​ ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎ56 5ಜಿ ಎಂಬ ಹೊಸ ಫೋನ್​ ಅನ್ನು ಬಿಡುಗಡೆ ಮಾಡಲು ಆಲೋಚಿಸುತ್ತಿದೆ. ಟಿಪ್​ಸ್ಟಾರ್​ ಪ್ರಕಾರ ಈ ಫೋನ್​ 120Hz ರಿಫ್ರೇಶ್​ ರೇಟ್​ ಜೊತೆ ಫುಲ್​ ಹೆಚ್​ಡಿ ಪ್ಲಸ್​ ಡೈನಾಮಿಕ್​ AMOLED ಡಿಸ್​ಪ್ಲೇಯೊಂದಿಗೆ ಬರಬಹುದು. ಅಷ್ಟೇ ಅಲ್ಲ ಇದು 50ಎಂಪಿ ಕ್ಯಾಮೆರಾ, 5000mAh ಬ್ಯಾಟರಿ, 45W ಫಾಸ್ಟ್​ ಚಾರ್ಜಿಂಗ್ ಸಪೋರ್ಟ್​ನೊಂದಿಗೆ ಬರಲಿದೆ.

6. Samsung Galaxy A36 5G: ಇದಲ್ಲದೇ ಸ್ಯಾಮ್​ಸಂಗ್​ ತನ್ನ ‘A’ ಲೈನ್​ಅಪ್ ಮತ್ತೊಂದು ಹೊಸ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡಬಹುದಾಗಿದೆ. ಅದರಲ್ಲಿ ಎರಡನೇ ಮಾಡೆಲ್​ ಫೋನ್​ ಹೆಸರೇ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ36 5ಜಿ ಆಗಿರಬಹುದು. ವರದಿ ಪ್ರಕಾರ, ಕಂಪೆನಿ ಈ ಫೋನ್​ನಲ್ಲಿ ಪ್ರೊಸೆಸರ್​ಗಾಗಿ Qualcomm Snapdragon 6 Gen 3 SoC ಅಥವಾ Snapdragon 7s Gen 2 ಚಿಪ್‌ಸೆಟ್ ಅನ್ನು ಬಳಸಬಹುದಾಗಿದೆ. ಸಾಫ್ಟ್‌ವೇರ್‌ಗೋಸ್ಕರ್​ Android 15 ಆಧಾರಿತ One UI 7 ಆಪರೇಟಿಂಗ್ ಸಿಸ್ಟಮ್ ಅನ್ನು ನೀಡಬಹುದು. ಇವುಗಳ ಜೊತೆಗೆ ಈ ಫೋನ್ 50ಎಂಪಿ ರಿಯರ್​ ಕ್ಯಾಮೆರಾದೊಂದಿಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ.

7. Oppo Find N5/OnePlus Open 2: ಒಪ್ಪೋ ಚೀನಾದಲ್ಲಿ ಹೊಸ ಫೋನ್​ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದನ್ನು ಒಪ್ಪೋ ಫೈಂಡ್​ ಎನ್​5 ಎಂಬ ಹೆಸರಿನಲ್ಲಿ ಪರಿಚಯಿಸಲಿದೆ. ಆದ್ರೆ ಭಾರತದ ಮಾರುಕಟ್ಟೆಯಲ್ಲಿ ಮಾತ್ರ ಈ ಫೋನ್​ ಅನ್ನು ಒನ್​ಪ್ಲಸ್​ ಹೊಸ ಫೋಲ್ಡಬಲ್​ ಫೋನ್​​ ಅಂದ್ರೆ ಒನ್​ಪ್ಲಸ್​ ಓಪನ್​ 2 ಎಂಬ ಹೆಸರಿನಲ್ಲಿ ರಿಲೀಸ್​ ಮಾಡಬಹುದು.

ಈ ಲಾಂಚಿಂಗ್​ನೊಂದಿಗೆ ಇದು ವಿಶ್ವದ ಅತ್ಯಂತ ಸ್ಲಿಮ್​ ಫೋಲ್ಡಬಲ್​ ಸ್ಮಾರ್ಟ್​ಫೋನ್​ ಎಂಬ ಖ್ಯಾತಿ ಪಡೆಯಲಿದೆ ಎಂದು ಕಂಪೆನಿ ಹೇಳಿದೆ. ಒಪ್ಪೋ ಫೈಂಡ್​ ಎನ್​5 ಹೆಸರಿನ ಈ ಫೋನ್​ ಚೀನಾದಲ್ಲಿ ಈ ತಿಂಗಳಲ್ಲೇ ಪ್ರಾರಂಭಿಸಬಹುದು. 5900mAh ಬ್ಯಾಟರಿ, 80W ವೈರ್ಡ್​ ಮತ್ತು 50W ವೈರ್​ಲೆಸ್​ ಫಾಸ್ಟ್​ ಚಾರ್ಜಿಂಗ್​ ಸಪೋರ್ಟ್​, ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಂತಹ ಹಲವು ವಿಶೇಷ ವೈಶಿಷ್ಟ್ಯಗಳೊಂದಿಗೆ ಎಂಟ್ರಿ ಕೊಡಲಿದೆ ಎಂದು ತೋರುತ್ತದೆ.

8. Realme Neo 7: ರಿಯಲ್​ಮಿ ನಿಯೋ 7 ಸ್ಮಾರ್ಟ್​ಫೋನ್​ ಸಹ ಈ ಫೆಬ್ರುವರಿಯಲ್ಲಿ ಲಾಂಚ್​ ಆಗುವುದಕ್ಕೆ ರೆಡಿಯಾಗಿದೆ. ಕಂಪನಿ ಈ ಫೋನ್​ ಅನ್ನು ಗ್ಲೋಬಲ್​ ಮಾರ್ಕೆಟ್​ನಲ್ಲಿ ಲಾಂಚ್​ ಮಾಡಲಿದೆ. ಆದ್ರೆ ಈ ಲಾಂಚ್​ ದಿನಾಂಕವನ್ನು ಮಾತ್ರ ಪ್ರಕಟಿಸಿಲ್ಲ. ಇದು 6.78 ಇಂಚಿನ LTPO ಸ್ಕ್ರೀನ್​ ಒಳಗೊಂಡಿದೆ ಎಂಬ ಸಮಾಚಾರ. ಇದರ ಪೀಕ್​ ಬ್ರೈಟ್​ನೆಸ್​ 6000 ನೀಟ್ಸ್​ ಇರಬಹುದು. ಈ ಫೋನ್​ನಲ್ಲಿ ಮಿಡಿಯಾಟೆಕ್ ಡೈಮೆನ್ಶನ್ 9300+ SoC ಚಿಪ್‌ಸೆಟ್, 50MP ರಿಯರ್​ ಕ್ಯಾಮೆರಾ ಸೆಟಪ್​, 7000mAh​ ಬ್ಯಾಟರಿ ಅಂಡ್ 80W ಫಾಸ್ಟ್​ ಚಾರ್ಜಿಂಗ್​ ಸಪೋರ್ಟ್​ ಜೊತೆ ಬರಬಹುದು.

9. Asus Zenfone 12 Ultra: ಈ ಹೊಸ ಫೋನ್​ ಅನ್ನು ಪ್ರಪಂಚಕ್ಕೆ ಪರಿಚಯಿಸಲು Asus ಸಿದ್ಧವಾಗಿದೆ. ಇದು 6.78 ಇಂಚಿನ ಫುಲ್​ ಹೆಚ್​ಡಿ AMOLED LTPO ಸ್ಕ್ರೀನ್​, 165Hz ರಿಫ್ರೆಶ್ ರೇಟ್, 50MP ಟ್ರಿಪಲ್ ರಿಯರ್ ಕ್ಯಾಮೆರಾ, 32MP ಫ್ರಂಟ್ ಕ್ಯಾಮೆರಾ, 5800mAh ಬ್ಯಾಟರಿ ಮತ್ತು 65W ಫಾಸ್ಟ್ ಚಾರ್ಜಿಂಗ್ ಸಪೋರ್ಟ್​ನೊಂದಿಗೆ ಬರಲಿದೆ ಎಂಬ ಮಾಹಿತಿ ಇದೆ.

10. Poco F7: ಪೋಕೋ ಎಫ್​7 ಸ್ಮಾರ್ಟ್​ಫೋನ್​ ಸಹ ಈ ಫೆಬ್ರವರಿಯಲ್ಲಿ ಲಾಂಚ್​ ಆಗುವ ಅವಕಾಶ ಹೆಚ್ಚಿದೆ. ಈ ಫೊನ್​ ಅನ್ನು ರೆಡ್​ಮಿ ಟರ್ಬೋ 4 ಪ್ರೋ 5ಜಿ ರಿಬ್ರ್ಯಾಂಡೆಡ್​ ವರ್ಷನ್​ ಆಗಿ ಬರಬಹುದೆಂದು ಹೇಳಲಾಗುತ್ತಿದೆ. ಇದು ಡೈಮೆನ್ಸಿಟಿ 8400 SoC ಚಿಪ್‌ಸೆಟ್, 1.5K ರೆಸಲ್ಯೂಶನ್ ಡಿಸ್‌ಪ್ಲೇ, 6000mAh ಬ್ಯಾಟರಿ ಮತ್ತು 90W ಫಾಸ್ಟ್​ ಚಾರ್ಜಿಂಗ್ ಸಪೋರ್ಟ್​ ಹೊಂದಿರಬಹುದು. ಆದ್ರೆ ಕಂಪೆನಿ ಈ ಫೋನ್​ ಲಾಂಚ್​ ಡೇಟ್​ ಅನ್ನು ಇನ್ನೂ ಪ್ರಕಟಿಸಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ: ಇಸ್ರೇಲಿ ಸ್ಪೈವೇರ್ ಕಂಪೆನಿಯಿಂದ ವಾಟ್ಸ್‌ಆ್ಯಪ್​ ಬಳಕೆದಾರರ ಮೇಲೆ ದಾಳಿ: ಪಾರಾಗುವ ವಿಧಾನ ತಿಳಿಯಿರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.