ETV Bharat / state

ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ ಆರೋಪ : ಫೈನಾನ್ಸ್ ಮ್ಯಾನೇಜರ್ ಬಂಧನ - GOLD FRAUD CASE

ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂಪಾಯಿ ಹಣವನ್ನು ಪಡೆದು ಕಂಪನಿಗೆ ವಂಚಿಸಿದ ಆರೋಪದಡಿ ಪರಾರಿಯಾಗಿದ್ದ ಫೈನಾನ್ಸ್ ಮ್ಯಾನೇಜರ್​ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

GOLD FRAUD CASE
ಜಗಳೂರು ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Feb 4, 2025, 5:30 PM IST

ದಾವಣಗೆರೆ : ಸ್ನೇಹಿತರ ಹೆಸರಿನಲ್ಲಿ ಖಾತೆಗಳನ್ನು ತೆರೆದು ತಮ್ಮದೇ ಫೈನಾನ್ಸ್ ಕಂಪನಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು, ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪದಡಿ ಮ್ಯಾನೇಜರ್​ವೊಬ್ಬರನ್ನು ಜಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಗಳೂರು ಪಟ್ಟಣದ ಕೆಎಲ್ಎಂ ಆ್ಯಕ್ಸಿವ್ ಫಿನ್ ವೆಸ್ಟ್ ಫೈನಾನ್ಸ್ ಕಂಪನಿಯ ವ್ಯವಸ್ಥಾಪಕ ಅರವಿಂದ ಹನುಮಂತ ಬಂಧಿತ ಆರೋಪಿ.‌

ಬಂಧಿತ ಆರೋಪಿಯು ಫೈನಾನ್ಸ್ ಕಂಪನಿಯಲ್ಲಿ ಮ್ಯಾನೇಜರ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸ್ನೇಹಿತರ ಹೆಸರಿನಲ್ಲಿ ಖಾತೆಗಳನ್ನು ತೆರೆದು ನಕಲಿ ಬಂಗಾರದ ಆಭರಣಗಳನ್ನು ಅಡವಿಟ್ಟಿದ್ದರು. ಬಳಿಕ ಲಕ್ಷಾಂತರ ರೂಪಾಯಿ ಹಣವನ್ನು ಪಡೆದು ಕಂಪನಿಗೆ ವಂಚಿಸಿ ಪರಾರಿಯಾಗಿದ್ದನು. ಈ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಅವರದ್ದೇ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಕೊಂಡು ಅರವಿಂದ ಹನುಮಂತನನ್ನು ಬಂಧಿಸಿರುವುದಾಗಿ ಜಗಳೂರು ಠಾಣೆಯ ಪಿಐ ರಾಷ್ಟ್ರಪತಿ ರಾಜು ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಚಿತ್ರದುರ್ಗ ಬಸ್ ನಿಲ್ದಾಣದಲ್ಲಿ ಬಂಧನ : ನಕಲಿ ಚಿನ್ನ ಅಡವಿಟ್ಟು ಹಣ ಲಪಟಾಯಿಸಿ ಪರಾರಿಯಾಗಿದ್ದ ಅರವಿಂದ ಅವರ ಬಂಧನ ಜಗಳೂರು ಪೊಲೀಸರಿಗೆ ಆರಂಭದಲ್ಲಿ ತಲೆನೋವಾಗಿತ್ತು. ಈ ಪ್ರಕರಣದ ತನಿಖೆಗೆ ತನಿಖಾಧಿಕಾರಿಯಾಗಿ ಪಿಎಸ್ಐ ಆಶಾ ಅವರನ್ನು ನೇಮಿಸಲಾಗಿತ್ತು.

''ಲಕ್ಷಾಂತರ ರೂಪಾಯಿ ವಂಚಿಸಿದ್ದ ಮ್ಯಾನೇಜರ್ ಅರವಿಂದ ಅವರನ್ನು ಚಿತ್ರದುರ್ಗ ಬಸ್ ನಿಲ್ದಾಣದಲ್ಲಿ ಬಂಧಿಸಿ ಕರೆ ತಂದು ನ್ಯಾಯಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಕಳಿಸಲಾಗಿದೆ. ಅದರೆ, ಹಣದ ಬಗ್ಗೆ ಕೇಳಿದರೆ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುವುದು'' ಎಂದು ಪಿಎಸ್​ಐ ಆಶಾ ಅವರು ದೂರವಾಣಿಯಲ್ಲಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್ ಗ್ರಾಹಕರ ಸೋಗಿನಲ್ಲಿ ಹಣ ದೋಚುತ್ತಿದ್ದ ಇಬ್ಬರು ಆರೋಪಿಗಳ ಬಂಧನ - ROBBERY CASE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.