ಕರ್ನಾಟಕ

karnataka

ETV Bharat / state

ಬೆಂಗಳೂರು: ಡ್ರೈವಿಂಗ್​ ತಿಳಿಯದ ಯುವಕ ಎಕ್ಸ್​ಲೆಟರ್​ ತುಳಿದ: ಕಾರು ಹರಿದು 5 ವರ್ಷದ ಬಾಲಕ ಸಾವು - car accident - CAR ACCIDENT

ಡ್ರೈವಿಂಗ್​ ತಿಳಿಯದ ಯುವಕ ಎಕ್ಸ್​ಲೆಟರ್​ ತುಳಿದ ಪರಿಣಾಮ ಕಾರು ಹರಿದು ಆಟವಾಡುತ್ತಿದ್ದ 5 ವರ್ಷದ ಬಾಲಕ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಪಘಾತ ನಡೆದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ
ಅಪಘಾತ ನಡೆದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ (ETV Bharat)

By ETV Bharat Karnataka Team

Published : May 12, 2024, 2:49 PM IST

ಬೆಂಗಳೂರು:ಕಾರು ಚಲಾಯಿಸಿದ ಯುವಕನ ನಿರ್ಲಕ್ಷ್ಯಕ್ಕೆ ಐದು ವರ್ಷದ ಬಾಲಕ ಬಲಿಯಾದ ಘಟನೆ ಜೀವನ್ ಭೀಮಾ ನಗರ ಸಂಚಾರ ಠಾಣಾ ವ್ಯಾಪ್ತಿಯ ಮುರುಗೇಶ್ ಪಾಳ್ಯದ ಕಾಳಪ್ಪ ಲೇಔಟ್​ನಲ್ಲಿ ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ. ಆರವ್ (5) ಮೃತ ಬಾಲಕ.

ಆಗಿದ್ದೇನು?:ದೇವರಾಜ್​ (18) ಎಂಬಾತನೇ ಕಾರು ಚಲಾಯಿಸಿದ ಆರೋಪಿ ಯುವಕ. ಯುವಕನ ಕುಟುಂಬ ಬಾಡಿಗೆ ಕಾರಲ್ಲಿ ರೆಸಿಡೆನ್ಶಿಯಲ್ ಏರಿಯಾದ ಬಳಿ ಬಂದಿತ್ತು. ಈ ವೇಳೆ ತಂದೆ ತನ್ನ ಮಗನಿಗೆ ಕಾರನ್ನು ನೋಡಿಕೊಳ್ಳುವಂತೆ ತಿಳಿಸಿದ್ದರು. ಆದರೆ ಯುವಕ ಚಾಲಕನ ಸೀಟಲ್ಲಿ ಕುಳಿತು ಎಕ್ಸ್​ಲೆಟರ್​ ತುಳಿದಿದ್ದಾನೆ. ಇದರಿಂದ ಮುಂದೆ ಚಲಿಸಿದ ಕಾರು ನಿಯಂತ್ರಣ ಕಳೆದುಕೊಂಡು​ ಮೊದಲು ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಬಳಿಕ ಮನೆ ಮುಂದೆ ಆಟವಾಡುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿ ಆತನ ಮೇಲೆ ಹರಿದಿದೆ. ಪರಿಣಾಮ ಬಾಲಕ ಆರವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜೀವನ್ ಭೀಮಾ ನಗರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ಚಲಾಯಿಸಿದ್ದ ಆರೋಪಿ ಯುವಕನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ‌.

ಇದನ್ನೂ ಓದಿ:ತುಮಕೂರಿನಲ್ಲಿ ಭೀಕರ ಕಾರು ಅಪಘಾತ: ಇಬ್ಬರು ಮುಖ್ಯ ಶಿಕ್ಷಕರು ಸಾವು, ಮತ್ತಿಬ್ಬರು ಗಂಭೀರ - Tumakuru Car Accident

ABOUT THE AUTHOR

...view details