ಬೆಂಗಳೂರು:2025ನೇ ಸಾಲಿನಲ್ಲಿ 19 ಸಾರ್ವತ್ರಿಕ ರಜೆ ಹಾಗೂ 20 ಪರಿಮಿತ ರಜೆಗಳ ಪಟ್ಟಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (26.01.2025), ಯುಗಾದಿ ಹಬ್ಬ (30.03.2025), ಮೊಹರಂ ಕಡೆ ದಿನ (06.07.2025), ಮಹಾಲಯ ಅಮಾವಾಸ್ಯೆ (21.09.2025) ಹಾಗೂ ಎರಡನೇ ಶನಿವಾರದಂದು ಬರುವ ಕನಕದಾಸ ಜಯಂತಿಯನ್ನು (08.11.2025) ನಮೂದಿಸಿಲ್ಲ.
ಸಾರ್ವತ್ರಿಕ ರಜೆಗಳು (ETV Bharat) ರಜಾ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದಾಗಿದೆ.
ಪರಿಮಿತ ರಜೆಗಳು (ETV Bharat) ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಿದು: 03.09.2025 (ಬುಧವಾರ) ಕೈಲ್ ಮೂಹೂರ್ತ, 18.10.2025 (ಶನಿವಾರ) ತುಲಾ ಸಂಕ್ರಮಣ ಹಾಗೂ 5.12.2025 (ಶುಕ್ರವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
1.04.2025 ವಾಣಿಜ್ಯ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನ ಆಗಿರುವುದರಿಂದ, ಆ ದಿನದಂದು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಇರಲಿದೆ.
20 ಪರಿಮಿತ ರಜಾ ದಿನಗಳು: 2025ನೇ ಸಾಲಿನಲ್ಲಿ 20 ಪರಿಮಿತ ರಜೆಗಳನ್ನು ಘೋಷಿಸಲಾಗಿದೆ. ರಾಮನವಮಿ (06.04.2025), ಬ್ರಹ್ಮಶ್ರೀ ನಾರಾಯಣಗುರು ಜಯಂತಿ (07.09.2025), ಭಾನುವಾರದಂದು ಹಾಗೂ ಋಗ್ ಉವಕರ್ಮ ಮತ್ತು ಯಜುರ್ ಉಪಕರ್ಮ (09.08.2025) ಎರಡನೇ ಶನಿವಾರದಂದು ಬರುವುದರಿಂದ ಪರಿಮಿತ ರಜೆ ಪಟ್ಟಿಯಲ್ಲಿ ನಮೂದಿಸಿದಿಲ್ಲ.
ಇದನ್ನೂ ಓದಿ:ಅಕ್ರಮ ಗಣಿಗಾರಿಕೆ: 10 ಸಿ ಪ್ರವರ್ಗ ಗಣಿ ಗುತ್ತಿಗೆ ಎಸ್ಐಟಿ ತನಿಖೆಗೆ ವಹಿಸಲು ಸಂಪುಟ ತೀರ್ಮಾನ