ಕರ್ನಾಟಕ

karnataka

ETV Bharat / state

ನೆಲಮಂಗಲ: ಸಾಲ, ಬಡ್ಡಿ ಹಣ ಕೊಟ್ಟಿಲ್ಲವೆಂದು ಬಾಲಕಿ ಮೇಲೆ ಅತ್ಯಾಚಾರ ಆರೋಪ, ಓರ್ವ ಅರೆಸ್ಟ್ - RAPE ON MINOR GIRL

17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಮಾದನಾಯಕಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾದನಾಯಕಹಳ್ಳಿ ಪೊಲೀಸ್ ಠಾಣೆ
ಮಾದನಾಯಕಹಳ್ಳಿ ಪೊಲೀಸ್ ಠಾಣೆ (ETV Bharat)

By ETV Bharat Karnataka Team

Published : Oct 20, 2024, 7:34 PM IST

ನೆಲಮಂಗಲ: ಬಡ್ಡಿ ಹಣ ಕೊಟ್ಟಿಲ್ಲವೆಂದು ಸಾಲ ಪಡೆದ ವ್ಯಕ್ತಿಯ 17 ವರ್ಷದ ಮಗಳ ಮೇಲೆ ಹಾಡಹಗಲೇ ಅತ್ಯಾಚಾರ ಎಸಗಿರುವ ಆರೋಪ ಸಂಬಂಧ ಮಾದನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಅಮಾನವೀಯ ಘಟನೆಯೊಂದು ನಡೆದಿದೆ. ಬಾಲಕಿ ನೀಡಿದ ದೂರಿನ ಮೇಲೆ ಆರೋಪಿ ರವಿಕುಮಾರ್ (39)ನನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ತಂದೆಯು ಆರೋಪಿಯಿಂದ 70 ಸಾವಿರ ಹಣವನ್ನ ಸಾಲವಾಗಿ ಪಡೆದಿದ್ದರು. ಈ ಹಣದಲ್ಲಿ ಈಗಾಗಲೇ 30 ಸಾವಿರ ತೀರಿಸಿದ್ದರು, ಇನ್ನುಳಿದ 40 ಸಾವಿರ ಹಣ ಮತ್ತು ಬಡ್ಡಿ ದುಡ್ಡು ಕೊಡುವಂತೆ ಆರೋಪಿ ಪೀಡಿಸುತ್ತಿದ್ದರು. ಈ ಹಿಂದೆ ತನ್ನ ಕೆನ್ನೆಗೆ ಕಿಸ್ ಕೊಟ್ಟಿದ್ದ ಆರೋಪಿ, ಇದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಕೂಡ ಹಾಕಿದ್ದ. ಇಂದು ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಆರೋಪಿ, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ.

ಇದನ್ನೂ ಓದಿ: ಹೆಚ್ಚಿದ ಚಂಡಮಾರುತ ಪ್ರಭಾವ: 17 ಜಿಲ್ಲೆಗಳಿಗೆ ಯೆಲ್ಲೋ, 2 ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ

ABOUT THE AUTHOR

...view details