IND vs IRE: ಜನವರಿ 10 ರಿಂದ ಆರಂಭವಾಗಲಿರುವ ಐರ್ಲೆಂಡ್ ಜೊತೆಗಿನ ಏಕದಿನ ಸರಣಿಗಾಗಿ 15 ಆಟಗಾರ್ತಿಯರನ್ನು ಒಳಗೊಂಡ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಸೋಮವಾರ (ಇಂದು) ಪ್ರಕಟಿಸಿದೆ.
ಸ್ಮೃತಿ ಮಂಧಾನ ನಾಯಕತ್ವದಲ್ಲಿ ಈ ಸರಣಿಗೆ ತಂಡವನ್ನು ಆಯ್ಕೆ ಮಾಡಲಾಗಿದ್ದು. ದೀಪ್ತಿ ಶರ್ಮಾ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಭಾರತ ಮತ್ತು ಐರ್ಲೆಂಡ್ ನಡುವಿನ ಈ ಸರಣಿ ಜನವರಿ 10 ರಿಂದ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಬಳಿಕ ಜ.12 ಎರಡು ಮತ್ತು ಜ.15 ರಂದು ಅಂತಿಮ ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಎಲ್ಲಾ ಪಂದ್ಯಗಳು ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಟೀಂ ಇಂಡಿಯಾದ ನಿಯಮಿತ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಟಾರ್ ಬೌಲರ್ ರೇಣುಕಾ ಸಿಂಗ್ ಠಾಕೂರ್ಗೆ ವಿಶ್ರಾಂತಿ ನೀಡಲಾಗಿದ್ದು, ಈ ಸರಣಿಯಿಂದ ಹೊರಗುಳಿದಿದ್ದಾರೆ.
ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಏಕದಿನ ಮತ್ತು ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿತ್ತು. ಹರ್ಮನ್‌ಪ್ರೀತ್ ಮತ್ತು ರೇಣುಕಾ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದರು. ಇದೀಗ ಇವರ ಸ್ಥಾನಕ್ಕೆ ಸಯಾಲಿ ಸಯಾಲಿ ಸತ್ಘರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ರೂಪದಲ್ಲಿ ಟೀಂ ಇಂಡಿಯಾ ಹೊಸ ಮುಖವನ್ನು ಸೇರಿಸಿದೆ. ಮುಂಬೈನ ಮೂಲದ ಈ ಆಲ್ ರೌಂಡರ್ ಕಳೆದ ವರ್ಷ ಭಾರತ ಎ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಸಯಾಲಿ ಜೊತೆಗೆ ರಾಘವಿ ಬಿಷ್ತ್ ಕೂಡ ಆಯ್ಕೆಯಾಗಿದ್ದು, ಈ ಸರಣಿ ಮೂಲಕ ಈ ಇಬ್ಬರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.