ETV Bharat / sports

ಶಾಕಿಂಗ್​ ನ್ಯೂಸ್​! ಚಾಂಪಿಯನ್ಸ್​ ಟ್ರೋಫಿಗೂ ಮೊದಲೇ ಭಾರತಕ್ಕೆ ಆಘಾತ: ಸ್ಟಾರ್​ ಪ್ಲೇಯರ್​ ಔಟ್​? - ICC CHAMPIONS TROPHY

ಚಾಂಪಿಯನ್ಸ್​ ಟ್ರೋಫಿಗೂ ಮೊದಲೇ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ವೇಗದ ಬೌಲರ್​ ಈ ಸರಣಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

ICC CHAMPIONS TROPHY 2025  JASPRIT BUMRAH  ಐಸಿಸಿ ಚಾಂಪಿಯನ್ಸ್​ ಟ್ರೋಫಿ  ENGLAND SERIES
ಭಾರತ ತಂಡ (IANS)
author img

By ETV Bharat Sports Team

Published : Jan 7, 2025, 4:56 PM IST

ಹೈದರಾಬಾದ್​: ಫೆಬ್ರವರಿ 19ರಿಂದ ಪ್ರತಿಷ್ಠಿ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಪ್ರಾರಂಭವಾಗಲಿದೆ. ಒಟ್ಟು 15 ದಿನಗಳ ಕಾಲ ನಡೆಯಲಿರುವ ಈ ಸರಣಿಯಲ್ಲಿ ಭಾರತ ಸೇರಿ 8 ತಂಡಗಳು ಭಾಗವಹಿಸುತ್ತಿವೆ. ಪಾಕಿಸ್ತಾನ ಇದರ ಆತಿಥ್ಯ ವಹಿಸಿಕೊಂಡಿದೆ. ಭಾರತ ಹೊರತು ಪಡಿಸಿ ಎಲ್ಲಾ ತಂಡಗಳು ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡಲಿದೆ.

ಆದ್ರೆ ಭದ್ರತಾ ದೃಷ್ಟಿಯಿಂದಾಗಿ ಭಾರತ ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕಿದ್ದು ಹೈಬ್ರಿಡ್​ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಅಂದರ ಭಾರತ ಆಡುವ ಎಲ್ಲಾ ಪಂದ್ಯಗಳು ಪಾಕಿಸ್ತಾನದ ಬದಲಿಗೆ ದುಬೈನಲ್ಲಿ ನಡೆಯಲಿವೆ. ಒಂದು ವೇಳೆ ಭಾರತ ಫೈನಲ್​ ತಲುಪುವಲ್ಲಿ ವಿಫಲವಾದ್ರೆ ಅಂತಿಮ ಪಂದ್ಯವನ್ನು ಪಾಕಿಸ್ತಾನದಲ್ಲೇ ಆಡಲಾಗುತ್ತದೆ.

ಈ ಸರಣಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಫೆ.20 ರಂದು ಆಡಲಿದೆ. ನಂತರ ಫೆ.23ಕ್ಕೆ ಪಾಕಿಸ್ತಾನ, ಮಾರ್ಚ್​ 2ಕ್ಕೆ ನ್ಯೂಜಿಲೆಂಡ್​ ವಿರುದ್ಧ ಆಡಲಿದೆ. ಆದ್ರೆ ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಸಂಕಷ್ಟ ಎದುರಾಗಿದೆ. ಭಾರತದ ಸ್ಟಾರ್​ ಬೌಲರ್​ ಆಗಿರುವ ಜಸ್ಪ್ರೀತ್​ ಬುಮ್ರಾ ಈ ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಹೌದು, ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಬುಮ್ರಾ ಕೊನೆಯ ಪಂದ್ಯದಲ್ಲಿ ಬೆನ್ನಿನ ಸ್ನಾಯು ಸೆಳೆತಕ್ಕೆ ತುತ್ತಾಗಿ ಪಂದ್ಯದ ಅರ್ಧದಲ್ಲೇ ಮೈದಾನವನ್ನು ತೊರೆದಿದ್ದರು. ಇದೇ ಕಾರಣಕ್ಕಾಗಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಯಿಂದಲೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಸಧ್ಯ ಅವರ ಬೆನ್ನು ನೋವಿನ ಸಮಸ್ಯೆ ಗ್ರೇಡ್​1 ಹಂತದಲ್ಲಿದೆ. ಸಧ್ಯ ಅವರು ಇದರಿಂದ ಚೇತರಿಸಿಕೊಳ್ಳಲು 3 ವಾರಗಳ ಸಮಯ ಬೇಕಾಗುತ್ತದೆ ಎಂದು ವರದಿ ಆಗಿದೆ.

ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೂ ಮೊದಲು ಬುಮ್ರಾಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಂಪೂರ್ಣವಾಗಿ ಚೇತರಿಸಿಕೊಂಡು ಫಿಟ್ನೆಸ್​ ಹೊಂದಿದ್ದರೆ ಮಾತ್ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾಗಿಯಾಗಲಿದ್ದಾರೆ. ಒಂದು ವೇಳೆ ಬುಮ್ರಾ ಅವರ ಸಮಸ್ಯೆ ಗ್ರೇಡ್​ 2 ಎಂದಾದರೇ ಕನಿಷ್ಠ 6 ವಾರಗಳ ಕಾಲ ಕ್ರಿಕೆಟ್​ನಿಂದ ಹೊರ ಉಳಿಯಲಿದ್ದಾರೆ.

ಇಂಗ್ಲೆಂಡ್​ ಸರಣಿ

ಐಸಿಸಿ ಚಾಂಪಿಯನ್ಸ್​ ಟ್ರೋಫಿಗೂ ಮೊದಲು ಭಾರತ ತವರಿನಲ್ಲಿ ಇಂಗ್ಲೆಂಡ್​ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ. ಇದರಲ್ಲಿ ಉಭಯ ತಂಡಗಳ ನಡುವೆ 5 ಏಕದಿನ ಪಂದ್ಯ ಮತ್ತು 3 ಟಿ20 ಪಂದ್ಯಗಳು ನಡೆಯಲಿ. ಈ ಸರಣಿಯು ಜನವರಿ 22 ರಿಂದ ಶುರವಾಗಲಿದೆ.

ಇದನ್ನೂ ಓದಿ: ಆಸೀಸ್​ ವಿರುದ್ಧ ಒಂದೇ ಒಂದು​ ಪಂದ್ಯ ಆಡದೇ ಕೋಟಿಗಟ್ಟಲೆ ಹಣ ಸಂಪಾದಿಸಿದ ಯುವ ಕ್ರಿಕೆಟರ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.