ನವದೆಹಲಿ:2024ರ ಮಹಿಳಾ ಏಷ್ಯಾ ಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ 10ನೇ ಬಾರಿಗೆ ಏಷ್ಯಾಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಈ ಪೈಕಿ ಭಾರತ 8 ಬಾರಿ ಏಷ್ಯಾಕಪ್‌ನ ಚಾಂಪಿಯನ್ ಆಗಿತ್ತು. ಒಂದು ಬಾರಿ ಬಾಂಗ್ಲಾದೇಶ ತಂಡ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿತ್ತು.
ಇಂದು ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸೆಮಿಫೈನಲ್ ಪಂದ್ಯದ ಕುರಿತು ತಿಳಿಯುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶವು ಭಾರತಕ್ಕೆ 81 ರನ್‌ಗಳ ಗೆಲುವಿನ ಟಾರ್ಗೆಟ್ ನೀಡಿತ್ತು. ಇದಕ್ಕೆ ಉತ್ತರವಾಗಿ ಭಾರತ 11 ಓವರ್‌ಗಳಲ್ಲಿ 83 ರನ್ ಗಳಿಸುವ ಮೂಲಕ 10 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
10 ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸಿದ ಭಾರತ:ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ನಾಯಕಿ ನಿಗರ್ ಸುಲ್ತಾನ 51 ಎಸೆತಗಳಲ್ಲಿ 2 ಬೌಂಡರಿ ಸಹಿತ 32 ರನ್ ಹಾಗೂ ಶರ್ನಾ ಅಖ್ತರ್ ಅವರ 19 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತು. ಭಾರತ ತಂಡ 11 ಓವರ್‌ಗಳಲ್ಲಿ ಶೆಫಾಲಿ ವರ್ಮಾ 26 ಮತ್ತು ಸ್ಮೃತಿ ಮಂದಾನ 55 ರನ್‌ಗಳ ನೆರವಿನಿಂದ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು.
ತಲಾ ಮೂರು ವಿಕೆಟ್ ಪಡೆದ ರೇಣುಕಾ, ರಾಧಾ:ಬಾಂಗ್ಲಾದೇಶದ ದಿಲಾರಾ ಅಖ್ತರ್ ಮತ್ತು ಮುರ್ಷಿದಾ ಖಾತೂನ್ ಅವರ ವಿಕೆಟ್ ಅನ್ನು ಪಡೆದ ರೇಣುಕಾ ಸಿಂಗ್ ಅವರು, ಮೊದಲ ಓವರ್‌ನಲ್ಲೇ ಭಾರತಕ್ಕೆ ಯಶಸ್ಸನ್ನು ತಂದುಕೊಟ್ಟರು. ಇದಾದ ಬಳಿಕ ಕ್ರೀಸ್ಗೆ ಬಂದ ಇಶ್ಮಾ ತಂಝೀಮ್ 8 ರನ್ ಗಳಿಸಿ ಪೆವಿಲಿಯನ್‌ಗೆ ಕಳುಹಿಸಿದರು. ಭಾರತದ ಬೌಲರ್‌ಗಳು 33 ರನ್‌ಗಳಿಗೆ ಅರ್ಧದಷ್ಟು ಬಾಂಗ್ಲಾದೇಶ ತಂಡವನ್ನು ಪೆವಿಲಿಯನ್‌ಗೆ ಕಳುಹಿಸಿದರು.