ETV Bharat / entertainment

ನಾಳೆ ಸಂಜು ವೆಡ್ಸ್ ಗೀತಾ 2 ರಿಲೀಸ್​: ಮೊದಲ ಭಾಗದ ಯಶಸ್ಸನ್ನು ಮೀರಿಸುವ ಭವರಸೆಯಲ್ಲಿ ಕನ್ನಡ ಸಿನಿಮಾ - SANJU WEDS GEETHA 2

2011ರ ಏಪ್ರಿಲ್​ 1ರಂದು ತೆರೆಕಂಡು ಯಶಸ್ವಿಯಾಗಿದ್ದ ಸಂಜು ವೆಡ್ಸ್ ಗೀತಾ ಚಿತ್ರದ ಮತ್ತೊಂದು ಭಾಗ ನಾಳೆ ತೆರೆಕಾಣುತ್ತಿದ್ದು, ಭರ್ಜರಿ ಯಶಸ್ಸು ಕಾಣುವ ಭರವಸೆ ಇದೆ.

Srinagara Kitty, Rachita Ram
ಶ್ರೀನಗರ ಕಿಟ್ಟಿ, ರಚಿತಾ ರಾಮ್​ (Photo: ETV Bharat)
author img

By ETV Bharat Entertainment Team

Published : 9 hours ago

ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಜತೆಗೊಂದು ಅದ್ಭುತ ಪ್ರೇಮ ಕಾವ್ಯವನ್ನು ನಿರ್ದೇಶಕ ನಾಗಶೇಖರ್ ಅವರು "ಸಂಜು ವೆಡ್ಸ್ ಗೀತಾ 2" ಮೂಲಕ ಬೆಳ್ಳಿತೆರೆ ಮೇಲೆ ಹೇಳಹೊರಟಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಚಿತ್ರ ಜ.10ರಂದು ಅಂದರೆ ನಾಳೆ ಕರ್ನಾಟಕ ಅಲ್ಲದೇ ವಿದೇಶಗಳಲ್ಲೂ ಸಹ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಚಲವಾದಿ ಕುಮಾರ್ ನಿರ್ಮಿಸಿರುವ ಸಿನಿಮಾಗೆ ನಾಗಶೇಖರ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಕನ್ನಡ ಚಿತ್ರರಂಗದ ಬಹುಬೇಡಿಕೆ ತಾರೆಯರಾದ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್​​ ತೆರೆ ಹಂಚಿಕೊಂಡಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಈಗಾಗಲೇ ಸಂಗೀತಪ್ರಿಯರ ಮನಗೆದ್ದಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ಕುತೂಹಲ ಹೆಚ್ಚಿದೆ.

Srinagara Kitty, Rachita Ram
ರಚಿತಾ ರಾಮ್​, ಶ್ರೀನಗರ ಕಿಟ್ಟಿ (Photo: ETV Bharat)

ಚಿತ್ರದ ಮೊದಲ ಭಾಗ 2011ರ ಏಪ್ರಿಲ್​ 1ರಂದು ತೆರೆಕಂಡು ಯಶಸ್ವಿಯಾಗಿತ್ತು. ಸಿನಿಮಾದ ಹಾಡುಗಳು ದೊಡ್ಡ ಮಟ್ಟದಲ್ಲೇ ಸದ್ದು ಮಾಡಿದ್ದವು. ಚಿತ್ರದ ಹಾಡುಗಳು ಈಗಲೂ ಅಷ್ಟೇ ಜನಪ್ರಿಯವಾಗಿದ್ದು, ಸೀಕ್ವೆಲ್ ಸಾಂಗ್ಸ್​ ಕೂಡಾ ಪ್ರೇಕ್ಷಕರನ್ನು ತಲುಪಿವೆ. ನಾಗಶೇಖರ್ ನಿರ್ದೇಶನದ ಮೊದಲ ಭಾಗದಲ್ಲಿ ಶ್ರೀನಗರ ಕಿಟ್ಟಿ ಜೊತೆಗೆ ಮೋಹಕತಾರೆ ರಮ್ಯಾ ಅಭಿನಯಿಸಿದ್ದರು. ಸಿನಿಮಾ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

Srinagara Kitty, Rachita Ram
ಶ್ರೀನಗರ ಕಿಟ್ಟಿ, ರಚಿತಾ ರಾಮ್​ (Photo: ETV Bharat)

ಇತ್ತೀಚೆಗೆ ಚಿತ್ರದ ಬಗ್ಗೆ ಮಾತನಾಡಿದ್ದ ಚಂದ್ರಚೂಡ್​, ಒಮ್ಮೆ ನನ್ನ ಗೆಳೆಯ, ನಿರ್ದೇಶಕ ಆರ್.ಚಂದ್ರು ಅವರ ಜತೆ ಶಿಡ್ಲಘಟ್ಟಕ್ಕೆ ಹೋಗಿದ್ದೆ. ಆಗ ರೇಶ್ಮೆ ಬೆಳೆಯುವ ರೈತರ ಕಷ್ಟವನ್ನರಿತೆ. ಅವರ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದೆ. ಅವರು ಎಷ್ಟು ರೇಶ್ಮೆ ಬೆಳೆಯುತ್ತಾರೆ, ಅದು ಎಲ್ಲಿಗೆ ಹೋಗುತ್ತದೆ, ಜಾಗತೀಕರಣದ ಜಗತ್ತಿನಲ್ಲಿ ಬೆಳೆಗಾರರಿಗೆ ಅದರಿಂದ ಎಷ್ಟು ಪ್ರತಿಫಲ ಸಿಗುತ್ತಿದೆ, ಅವರಿಗೆ ಏಕೆ ಮಾರುಕಟ್ಟೆ ದೊರಕುತ್ತಿಲ್ಲ - ಇದನ್ನೆಲ್ಲಾ ನೋಡಿದಾಗ ಈ ಬಗ್ಗೆಯೇ ಒಂದು ಕಥೆ ಮಾಡಬಾರದೇಕೆ ಎಂದನಿಸಿತು. ಒಮ್ಮೆ ನಾಗಶೇಖರ್ ಸಿಕ್ಕಾಗ ಸಂಜು ವೆಡ್ಸ್ ಗೀತಾ 2 ಮಾಡುತ್ತಿದ್ದೇನೆ ಎಂದರು. ನಟ ಕಿಟ್ಟಿ, ನಿರ್ದೆಶಕ ನಾಗಶೇಖರ್, ನಿರ್ಮಾಪಕ ಕುಮಾರ್ ಎಲ್ಲರೂ ಸೇರಿ ಕಥೆ ಬಗ್ಗೆ ಚರ್ಚಿಸುತ್ತಿರುವಾಗ ಈ ಅಂಶವನ್ನು ಹೇಳಿದೆ. ಎಲ್ಲರಿಗೂ ಇಷ್ಟವಾಯ್ತು. ಕೊನೆ ಹಂತದಲ್ಲಿದ್ದ ಕಥೆಗೆ ಹೊಸ ರೂಪ ಸಿಕ್ಕಿತು. ರೇಶ್ಮೆ ಬೆಳೆಯುವ ರೈತರು, ಸ್ವಿಟ್ಜರ್‌ಲ್ಯಾಂಡ್‌ನ ರಾಣಿ ಮತ್ತು ಸೈನಿಕನ ಕಥೆ ಇವೆರಡನ್ನೂ ಸೇರಿಸಿ ಹೊಸದೊಂದು ಚಿತ್ರಕಥೆ ರೆಡಿಯಾಯಿತು.

ರೇಶ್ಮೆ ಬೆಳೆಯುವ ಸಾಕಷ್ಟು ರೈತರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಂಎನ್‌ಸಿ, ಕಾರ್ಪೊರೇಟ್ ಕಂಪನಿಗಳು ಅವರನ್ನೆಲ್ಲ ಹೇಗೆ ತುಳಿಯುತ್ತಿದ್ದಾರೆಂಬುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ನೂಲಿನ ಮಹತ್ವದ ಜತೆಗೊಂದು ಮಧುರ ಪ್ರೇಮ ಕಾವ್ಯವಿದೆ. ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಈ ಕಥೆ ಸ್ವಿಟ್ಜಲ್ಯಾಂಡ್‌ವರೆಗೂ ಸಾಗುತ್ತದೆ. ರೇಶ್ಮೆ ಬೆಳೆಗಾರ ಸಂಜು ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಗೀತಾ ಆಗಿ ರಚಿತಾ ರಾಮ್ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಶಿಡ್ಲಘಟ್ಟದಿಂದ ಸ್ವಿಟ್ಜರ್​ಲ್ಯಾಂಡ್​ವರೆಗೆ: 'ಸಂಜು ವೆಡ್ಸ್ ಗೀತಾ 2' ಕಥೆ ಕೊಟ್ಟಿದ್ದು ಸುದೀಪ್

ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಮಾತನಾಡಿ, ಚಿತ್ರಕ್ಕೆ ಸಂಗೀತ ಮಾಡುವ ಸದಾವಕಾಶ ಸಿಕ್ಕಿದ್ದು ಅದೃಷ್ಟವೇ ಸರಿ. ಒಮ್ಮೆ ನಾಗಶೇಖರ್ ನನಗೆ ಕರೆ ಮಾಡಿ ಈ ಸಿನಿಮಾಗೆ ಮ್ಯೂಸಿಕ್ ಮಾಡಿಕೊಡಿ ಎಂದಾಗ ಆ ರಾತ್ರಿಯಿಡೀ ನಾನು ನಿದ್ದೆ ಮಾಡಲಿಲ್ಲ. ಮುಸ್ಸಂಜೆ ಮಾತು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣಲೀಲಾ ನಂತರ ನನ್ನ ಕೆರಿಯರ್‌ನ ಮತ್ತೊಂದು ಬೆಸ್ಟ್ ಸಿನಿಮಾ ಇದಾಗಲಿದೆ ಎಂದರು.

ಇದನ್ನೂ ಓದಿ: 'ಸಂಜು ವೆಡ್ಸ್ ಗೀತಾ 2 ಬಿಡುಗಡೆಯಾಗುತ್ತಿರುವುದು ಗೊತ್ತಿರಲಿಲ್ಲ': ಮದುವೆ, ಸಿನಿಮಾ, ರಾಜಕೀಯದ ಬಗ್ಗೆ ರಮ್ಯಾ ಮಾತು​​

ಇನ್ನೂ ನಾಯಕ ನಟ ಶ್ರೀನಗರ ಕಿಟ್ಟಿ ಮಾತನಾಡಿ, ನಿರ್ಮಾಪಕ ಕುಮಾರ್ 16 ರಿಂದ 17 ಕೋಟಿ ಬಂಡವಾಳ ಹಾಕಿ ಈ ಚಿತ್ರ ನಿರ್ಮಿಸಿದ್ದಾರೆ. 60 ರಿಂದ 65ರಷ್ಟು ಸಿನಿಮಾ ಕಥೆ ಸ್ವಿಟ್ಜರ್​ಲ್ಯಾಂಡ್‌ನಲ್ಲೇ ನಡೆಯುತ್ತದೆ. ವಿಶೇಷವಾಗಿ ಈ ಚಿತ್ರದಲ್ಲಿ ಚೇತನ್ ಚಂದ್ರ, ರಾಗಿಣಿ ಅವರ ಗೆಸ್ಟ್ ಅಪಿಯರೆನ್ಸ್ ಇದೆ. ಉಳಿದಂತೆ ಸತ್ಯ ಹೆಗಡೆ ಅವರ ಛಾಯಾಗ್ರಹ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೇ ಖಳನಟ ಸಂಪತ್‌ಕುಮಾರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.