ಕರ್ನಾಟಕ

karnataka

ETV Bharat / sports

2017ರ ಬಳಿಕ ಐಸಿಸಿ ಚಾಂಪಿಯನ್ಸ್​ ಟ್ರೋಫಿಯನ್ನು 8 ವರ್ಷ ಏಕೆ ನಿಲ್ಲಿಸಲಾಗಿತ್ತು? - ICC CHAMPIONS TROPHY

ಚಾಂಪಿಯನ್ಸ್​ ಟ್ರೋಫಿಯನ್ನು 8 ವರ್ಷಗಳ ಕಾಲ ಸ್ಥಗಿತಗೊಳಸಲಾಗಿತ್ತು. ಇದೀಗ ಮತ್ತೊಮ್ಮೆ ಐಸಿಸಿ ಈ ಪಂದ್ಯಾವಳಿಯನ್ನು ಪ್ರಾರಂಭಿಸಿದೆ.

ICC CHAMPIONS TROPHY 2025  ICC CHAMPIONS TROPHY WHY STOPPED  ICC CHAMPIONS TROPHY HISTORY  ICC CHAMPIONS TROPHY 2025 SCHEDULE
ಐಸಿಸಿ ಚಾಂಪಿಯನ್ಸ್​ ಟ್ರೋಫಿಯನ್ನು 8 ವರ್ಷ ಏಕೆ ನಿಲ್ಲಿಸಲಾಗಿತ್ತು (AFP)

By ETV Bharat Sports Team

Published : Feb 15, 2025, 6:29 PM IST

Updated : Feb 15, 2025, 6:45 PM IST

Why champions Trophy not Played 8 Years : ಚಾಂಪಿಯನ್ಸ್​ ಟ್ರೋಫಿ ಪ್ರಾರಂಭವಾಗಲು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದೆ. 8 ವರ್ಷಗಳ ಬಳಿಕ ಈ ಟೂರ್ನಿ ನಡೆಯುತ್ತಿದೆ. ಇದಕ್ಕೆ ಪಾಕಿಸ್ತಾನ ಮತ್ತು ದುಬೈ ಆತಿಥ್ಯ ವಹಿಸಿಕೊಂಡಿವೆ. ಭಾರತದ ಪಂದ್ಯಗಳು ಮಾತ್ರ ದುಬೈನಲ್ಲಿ ನಡೆಯಲಿವೆ.

ಆದರೆ ಐಸಿಸಿ ನಡೆಸುವ ಪ್ರಮುಖ ಪಂದ್ಯಾವಳಿಗಳಲ್ಲಿ ಒಂದಾಗಿರುವ ಚಾಂಪಿಯನ್ಸ್​ ಟ್ರೋಫಿ ಕಳೆದ 8 ವರ್ಷಗಳ ಕಾಲ ಏಕೆ ನಿಲ್ಲಿಸಲಾಗಿತ್ತು. ಅದಕ್ಕೆ ಕಾರಣ ಏನು ಎಂಬುದನ್ನು ಇದೀಗ ತಿಳಿಯೋಣ.

1998ರಲ್ಲಿ ಪ್ರಾರಂಭ : ಮೊದಲ 1998ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಜೊತೆಗೆ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಕ್ರಿಕೆಟ್ ಅನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ, ವಿಶ್ವಕಪ್ ಜೊತೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಚಾಂಪಿಯನ್ಸ್ ಟ್ರೋಫಿಯನ್ನು ನಡೆಸಲಾಯಿತು.

2013ರ ಚಾಂಪಿನಯನ್ಸ್​ ಟ್ರೋಫಿ ಗೆದ್ದ ಕ್ಷಣ (AP)

ಅದೇ ವರ್ಷ ಪ್ರಾರಂಭವಾದ ಚಾಂಪಿಯನ್ಸ್​ ಟ್ರೋಫಿಯನ್ನು ಮೊದಲ ಬಾರಿಗೆ ಬಾಂಗ್ಲಾದೇಶ ಆಯೋಜಿಸಿತ್ತು. ಚೊಚ್ಚಲ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ಕಪ್​ ಗೆದ್ದುಕೊಂಡಿತು. ಆರಂಭದಲ್ಲಿ ಇದನ್ನು ಐಸಿಸಿ ನಾಕೌಟ್ ಟ್ರೋಫಿ ಎಂದು ಕರೆಯಲಾಗಿದ್ದರೂ, 2002ರಲ್ಲಿ ಚಾಂಪಿಯನ್ಸ್ ಟ್ರೋಫಿ ಎಂದು ಮರುನಾಮಕರಣ ಮಾಡಲಾಯಿತು. ಆ ವರ್ಷ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಪ್ರಶಸ್ತಿಯನ್ನು ಗೆದ್ದುಕೊಂಡವು.

ಭಾರತ ಎರಡು ಬಾರಿ ಚಾಂಪಿಯನ್​​​ :ಈವರೆಗೆ ನಡೆದ 8 ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಲಾ ಎರಡು ಬಾರಿ ಚಾಂಪಿಯನ್​ ಆಗಿವೆ. ಈ ಬಾರಿ, ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸುತ್ತಿದ್ದು, ಹಾಲಿ ಚಾಂಪಿಯನ್ ಆಗಿ ಟೂರ್ನಿಗೆ ಪ್ರವೇಶಿಸುತ್ತಿದೆ. 2017ರ ಆವೃತ್ತಿಯ ಫೈನಲ್‌ನಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿತ್ತು.

8 ವರ್ಷ ಟೂರ್ನಿ ಸ್ಥಗಿತ : 2006ರ ವರೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಈ ಪಂದ್ಯಾವಳಿ, ನಂತರ ಪ್ರತಿ ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. ಆದರೆ, ಈ ಟೂರ್ನಿಯಲ್ಲಿ ಏಕದಿನ ವಿಶ್ವಕಪ್‌ನಲ್ಲಿನ ಅಗ್ರ ತಂಡಗಳೇ ಮುಖಾಮುಖಿಯಾಗಲಿವೆ ಎಂದು ನಿಯಮ ತರಲಾಗಿತ್ತು.

Virat Kohli and Sarfraj Khan (Getty Images)

ಅದೇ ಸ್ವರೂಪದಲ್ಲಿ ಮತ್ತೊಂದು ಪಂದ್ಯಾವಳಿ ಏಕೆ ಎಂಬ ಪ್ರಶ್ನೆ ಅಪೆಕ್ಸ್ ಕೌನ್ಸಿಲ್​ಗೆ ಎದುರಾಯಿತು. ಈ ಹಿನ್ನೆಲೆಯಲ್ಲಿ 2017ರ ನಂತರ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಯಿತು. ಅಲ್ಲದೆ ಪ್ರಮುಖ ಐಸಿಸಿ ಪಂದ್ಯಾವಳಿಗಳಿಂದಾಗಿಯೂ ಇದನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಆದರೆ ಪ್ರಸ್ತುತ ದಿನಗಳಲ್ಲಿ ಏಕದಿನ ಪಂದ್ಯದ ಪ್ರಸಿದ್ಧತೆ ಕಡಿಮೆ ಆಗುತ್ತಿರುವುದನ್ನು ಮನಗಂಡಿರುವ ಐಸಿಸಿ ಸೀಮಿತ ಓವರ್‌ಗಳ ಕ್ರಿಕೆಟ್ ಅನ್ನು ವಿಸ್ತರಿಸಲು ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿ ಪ್ರಾರಂಭಿಸಲು ಮುಂದಾಯಿತು. 2020ರಲ್ಲಿ ಚಾಂಪಿಯನ್ಸ್​ ಟ್ರೋಫಿ ನಡೆಸಲು ಮತ್ತೆ ತೀರ್ಮಾನಿಸಿತು.

ಆದರೆ ಕೊರೊನಾದಿಂದಾಗಿ 2021ಕ್ಕೆ ಮುಂದೂಡಲಾಯಿತು. ಬಳಿಕ 2021-22ರಲ್ಲಿ ಟಿ20 ವಿಶ್ವಕಪ್​ ಆಯೋಜಿಸಲಾಗಿತ್ತು. ಬಳಿಕ ​2023ರಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್ ಮತ್ತು ಏಕದಿನ ವಿಶ್ವಕಪ್​ ನಡೆದ ಕಾರಣ ಚಾಂಪಿಯನ್ಸ್​ ಟ್ರೋಫಿ ನಡೆಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:ಸಿರಾಜ್​, ಬುಮ್ರಾ ಫಿಟ್​ ಆಗಿದ್ದರೂ ಚಾಂಪಿಯನ್ಸ್​ ಟ್ರೋಫಿಯಿಂದ ಕೈಬಿಟ್ಟಿದ್ದೇಕೆ?

Last Updated : Feb 15, 2025, 6:45 PM IST

ABOUT THE AUTHOR

...view details