Australian players wear black armbands: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದಿನಿಂದ ಎರಡನೇ ಟೆಸ್ಟ್ ಪ್ರಾರಂಭವಾಗಿದೆ. ಅಡಿಲೇಡ್ನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್, ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲೇ ಎಲ್ಬಿ ಬಲೆಗೆ ಬಿದ್ದು ಶೂನ್ಯಕ್ಕೆ ಪೆವಿಲಿಯನ್ ಸೇರಿದ್ದಾರೆ.
ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ:ಈ ಪಂದ್ಯದಲ್ಲಿ ಭಾರತ 3 ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ರವಿಚಂದ್ರನ್ ಅಶ್ವಿನ್ ತಂಡಕ್ಕೆ ಮರಳಿದ್ದು, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ ಮತ್ತು ವಾಷಿಂಗ್ಟನ್ ಸುಂದರ್ ಹೊರಗುಳಿದಿದ್ದಾರೆ. ಕಾಂಗರೂ ಪಡೆ ಕೂಡ ಒಂದು ಬದಲಾವಣೆಯೊಂದಿಗೆ ಪ್ರವೇಶಿಸಿದೆ. ಗಾಯಕ್ಕೆ ತುತ್ತಾಗಿರುವ ಜೋಶ್ ಹೇಜಲ್‌ವುಡ್ ಬದಲಿಗೆ ಸ್ಕಾಟ್ ಬೋಲ್ಯಾಂಡ್‌ಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಈ ಕಾರಣಕ್ಕಾಗಿ ಕೈಗೆ ಕಪ್ಪು ಪಟ್ಟಿ ಕಟ್ಟಿದ ಆಸೀಸ್ ಆಟಗಾರರು:ಏತನ್ಮಧ್ಯೆ, ಈ ಪಂದ್ಯದ ಮೊದಲ ದಿನದಂದು ಆಸ್ಟ್ರೇಲಿಯಾ ಆಟಗಾರರು ಕೈಗಳಿಗೆ ಕಪ್ಪುಪಟ್ಟಿಯನ್ನು ಧರಿಸಿ ಪಂದ್ಯವನ್ನಾಡುತ್ತಿದ್ದಾರೆ. ಸಾಮಾನ್ಯವಾಗಿ ಶೋಕವನ್ನು ತೋರಿಸಲು ಮತ್ತು ಗೌರವ ಸಲ್ಲಿಸಲು ಆಟಗಾರರು ಈ ರೀತಿ ಕಪ್ಪು ಪಟ್ಟಿಯನ್ನು ಕೈಗಳಿಗೆ ಧರಿಸುತ್ತಾರೆ. ಇದರಿಂದ ಕಾಂಗರೂ ಪಡೆ ಕೂಡ ಬ್ಯಾಂಡೇಜ್ ಹಾಕಿಕೊಂಡು ಪಂದ್ಯವನ್ನಾಡುತ್ತಿದೆ.