ಕರ್ನಾಟಕ

karnataka

ETV Bharat / sports

ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟ ಭಾರತ, ಮುಂದಿನ ಪಂದ್ಯ ಯಾರ ವಿರುದ್ಧ? - paris olympics 2024

ಒಲಿಂಪಿಕ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಭಾರತದ ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಮಾಡಿದ್ದು ಮುಂದಿನ ಪಂದ್ಯ ಯಾರ ವಿರುದ್ಧ ನಡೆಯಲಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತ ಹಾಕಿ ತಂಡ
ಭಾರತ ಹಾಕಿ ತಂಡ (AP)

By ETV Bharat Sports Team

Published : Aug 3, 2024, 8:01 PM IST

ಪ್ಯಾರಿಸ್​ (ಫ್ರಾನ್ಸ್​): ಭಾರತದ ಪುರುಷರ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮುಂದಿನ ಪಂದ್ಯದಲ್ಲಿ ಭಾರತ ಯಾವ ತಂಡವನ್ನು ಎದುರಿಸಲಿದೆ ಎಂಬುದರ ಬಗ್ಗೆ ಈ ಸುದ್ದಿಯಲ್ಲಿ ತಿಳಿಯಿರಿ.

ತನ್ನ ಕೊನೆಯ ಪೂಲ್-ಬಿ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟಿತ್ತು. 52 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಮಣಿಸಿ ಈ ಸಾಧನೆ ಮಾಡಿತ್ತು. ಈ ಬಾರಿಯೂ ಉತ್ತಮ ಪ್ರದರ್ಶನ ತೋರುತ್ತಿರುವ ಭಾರತ ಚಿನ್ನದ ಪದಕ ನಿರೀಕ್ಷೆಯಲ್ಲಿದೆ. ಕಳೆದ ಟೋಕಿಯೊ ಒಲಿಂಪಿಕ್​ನಲ್ಲಿ ಭಾರತ ತಂಡ ಕಂಚಿನ ಪದಕ ಜಯಿಸಿತ್ತು.

ಕ್ವಾರ್ಟರ್ ಫೈನಲ್ ಪಂದ್ಯದ ವಿವರ

  • ಆಗಸ್ಟ್ 4 ಭಾನುವಾರ (ನಾಳೆ), ಪೂಲ್ ಎ ಟಾಪರ್​ ಜರ್ಮನಿಯು ಕ್ವಾರ್ಟರ್ ಫೈನಲ್‌ನಲ್ಲಿ ಪೂಲ್ ಬಿ ಯ ನಾಲ್ಕನೇ ಸ್ಥಾನದ ಅರ್ಜೆಂಟೀನಾವನ್ನು ಎದುರಿಸಲಿದೆ.
  • ಪೂಲ್ ಬಿ ಟೇಬಲ್-ಟಾಪ್ಪರ್ಸ್ ಮತ್ತು ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ಪೂಲ್ ಎ ನಾಲ್ಕನೇ ಸ್ಥಾನದಲ್ಲಿರುವ ಸ್ಪೇನ್ ತಂಡವನ್ನು ಎದುರಿಸಲಿದೆ.
  • ನೆದರ್ಲ್ಯಾಂಡ್ಸ್ ಪೂಲ್ ಎ ನಲ್ಲಿ ಎರಡನೇ ಸ್ಥಾನ ಗಳಿಸಿತು ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಪೂಲ್ ಬಿ ಯಲ್ಲಿ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
  • ಪೂಲ್ ಬಿ ರನ್ನರ್ ಅಪ್ ಆಗಿರುವ ಭಾರತ ತಂಡವು ಪೂಲ್ ಎ ನಲ್ಲಿ ಮೂರನೇ ಸ್ಥಾನದಲ್ಲಿರುವ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.

1980ರಲ್ಲಿ ಚಿನ್ನ ಗೆದ್ದಿದ್ದ ಭಾರತ:ಭಾರತೀಯ ಪುರುಷರ ಹಾಕಿ ತಂಡ ಕೊನೆಯದಾಗಿ 1980ರಲ್ಲಿ ಮಾಸ್ಕೋ ಒಲಿಂಪಿಕ್​ನಲ್ಲಿ ಮೊದಲ ಚಿನ್ನದ ಪದಕ ಗೆದ್ದಿತ್ತು. ಇದೀಗ ಪ್ಯಾರಿಸ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 2 ಗೋಲುಗಳನ್ನು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ಹಾಕಿ ತಂಡದ ನಾಯಕ ಹರ್ಮನ್​ಪ್ರೀತ್​ ಸಿಂಗ್​, 'ಒಲಿಂಪಿಕ್​ನಲ್ಲಿ ನಾವು ನಮ್ಮ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ್ದು, ಪದಕ ಗೆಲುವಿನೊಂದಿಗೆ ಅಭಿಯಾನ ಮುಕ್ತಾಯಗೊಳಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 6 ರಂದು ಸೆಮಿ-ಫೈನಲ್ ಪಂದ್ಯಗಳು:ಪ್ಯಾರಿಸ್ ಒಲಿಂಪಿಕ್​​ನ ಪುರುಷರ ಹಾಕಿ ಸೆಮಿಫೈನಲ್ ಪಂದ್ಯಗಳು ಆಗಸ್ಟ್ 6 ರಂದು ನಡೆಯಲಿವೆ. ಕ್ವಾರ್ಟರ್ ಫೈನಲ್​ನಲ್ಲಿ ಗೆದ್ದ ತಂಡಗಳು ಸೆಮಿ ಫೈನಲ್​ ಪ್ರವೇಶಿಸಲಿವೆ.

ಇದನ್ನೂ ಓದಿ:ಒಲಿಂಪಿಕ್​​ನಲ್ಲಿ ಚಿನ್ನ ಗೆದ್ದ ಗೆಳತಿಗೆ ಡೈಮಂಡ್​ ರಿಂಗ್​ ತೊಡಿಸಿ ಪ್ರಪೋಸ್​; ಚೀನಾ ಷಟ್ಲರ್​ಗೆ ಡಬಲ್​ ಖುಷಿ - paris olympics 2024

ABOUT THE AUTHOR

...view details